Advertisement

ಪೆರು ಬೀಚ್‌ನಲ್ಲಿ ಪ್ರಪಾತಕ್ಕೆ ಬಿದ್ದ ಬಸ್‌; 48 ಸಾವು 

10:06 AM Jan 03, 2018 | |

ಲಿಮಾ: ಪೆರುವಿನಲ್ಲಿ ನಡೆದ ಭೀಕರ ಅವಘಡವೊಂದರಲ್ಲಿ ಬಸ್ಸೊಂದು ಸಮುದ್ರದ ಕಿನಾರೆ ಬಳಿಯ ಗುಡ್ಡದಿಂದ ಪ್ರಪಾತಕ್ಕೆ ಬಿದ್ದ ಪರಿಣಾಮ 48 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

ಅವಘಡನಡೆವ ವೇಳೆ ಬಸ್‌ನಲ್ಲಿ 57 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ರಕ್ಷಣಾ ಕಾರ್ಯ ನಡೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆದ್ದಾರಿಯಲ್ಲಿರುವ ಡೆವಿಲ್‌ ಕರ್ವ್‌ ಎಂಬ ತಿರುವಿನಲ್ಲಿ ಈ ಭೀಕರ ಅವಘಡ ಸಂಭವಿಸಿದ್ದು, ಎದುರಿನಿಂದ ಬಂದ ಟ್ರ್ಯಾಕ್ಟರ್‌ ಗೆ ಢಿಕ್ಕಿಯಾಗಿ ಪ್ರಪಾತಕ್ಕೆ ಬಿದ್ದಿದೆ ಎಂದು ವರಿದಿಯಾಗಿದೆ. 

 ರಕ್ಷಣಾ ಕಾರ್ಯಕ್ಕೆ ಪೊಲೀಸರು,ಸೇನೆ ನೆರವಾದರು. ದುರ್ಗಮ ಪ್ರವೇಶವಾದುದರಿಂದ ರಕ್ಷಣಾ ಕಾರ್ಯಕ್ಕೆ  ಹೆಲಿಕ್ಯಾಪ್ಟರ್‌ಗಳನ್ನು ಬಳಸಿಕೊಳ್ಳಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next