Advertisement

ಕೊಹ್ಲಿ ಶತಕ; ತಪ್ಪದ ಆತಂಕ

06:00 AM Dec 17, 2018 | Team Udayavani |

ಪರ್ತ್‌: ನಾಯಕ ವಿರಾಟ್‌ ಕೊಹ್ಲಿ ಅವರ 25ನೇ ಟೆಸ್ಟ್‌ ಶತಕದ ಹೊರತಾಗಿಯೂ “ಪರ್ತ್‌ ಪರೀಕ್ಷೆ’ ಭಾರತಕ್ಕೆ ಕಠಿನವಾಗಿ ಪರಿಣಮಿಸುವ ಸಾಧ್ಯತೆಯೊಂದು ಗೋಚರಿಸಿದೆ.

Advertisement

ಟೆಸ್ಟ್‌ ಪಂದ್ಯದ 3ನೇ ದಿನವಾದ ರವಿವಾರ ಬ್ಯಾಟಿಂಗ್‌ ಮುಂದುವರಿಸಿದ ಭಾರತ ತನ್ನ ಮೊದಲ ಸರದಿಯನ್ನು 283ಕ್ಕೆ ಮುಗಿಸಿ 43 ರನ್ನುಗಳ ಹಿನ್ನಡೆಗೆ ಸಿಲುಕಿತು. ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯ 4 ವಿಕೆಟಿಗೆ 4 ವಿಕೆಟಿಗೆ 132 ರನ್‌ ಗಳಿಸಿದ್ದು, ಒಟ್ಟು ಮುನ್ನಡೆಯನ್ನು 175ಕ್ಕೆ ವಿಸ್ತರಿಸಿದೆ. ಕೈಯಲ್ಲಿ ಇನ್ನೂ 6 ವಿಕೆಟ್‌ ಹೊಂದಿದ್ದು, ಆತಿಥೇಯರ ಮುನ್ನಡೆ ಮುನ್ನೂರರ ಗಡಿ ತಲುಪುವುದು ಬಹುತೇಕ ಖಚಿತ. ಆಗ ಭಾರತಕ್ಕೆ ಅಂತಿಮ ಇನ್ನಿಂಗ್ಸ್‌ನಲ್ಲಿ ಚೇಸಿಂಗ್‌ ಕಠಿನವಾಗುವುದರಲ್ಲಿ ಅನುಮಾನವಿಲ್ಲ. ಅಡಿಲೇಡ್‌ನ‌ಲ್ಲಿ ಕಾಂಗರೂ ಪಡೆ ಇದೇ ಸಂಕಟಕ್ಕೆ ಸಿಲುಕಿ ಪಂದ್ಯವನ್ನು ಕಳೆದುಕೊಂಡಿತ್ತು ಎಂಬುದು ಟೀಮ್‌ ಇಂಡಿಯಾ ಪಾಲಿಗೆ ಎಚ್ಚರಿಕೆಯ ಗಂಟೆ.

ಕೊಹ್ಲಿ 25ನೇ ಶತಕ ಸಂಭ್ರಮ
ರವಿವಾರದ ಆಟದಲ್ಲಿ ಭಾರತದ ಪಾಲಿಗೆ ಸಂಭ್ರಮ ಮೂಡಿಸಿದ ಏಕೈಕ ಸಂಗತಿಯೆಂದರೆ ನಾಯಕ ವಿರಾಟ್‌ ಕೊಹ್ಲಿ ಬಾರಿಸಿದ 25ನೇ ಟೆಸ್ಟ್‌ ಶತಕ. 82 ರನ್‌ ಮಾಡಿ ಸೆಂಚುರಿಯ ನಿರೀಕ್ಷೆ ಮೂಡಿಸಿದ್ದ ಕೊಹ್ಲಿ ನಿರಾಯಾಸವಾಗಿ ಮೂರಂಕೆಯ ಗಡಿ ತಲುಪಿದರು. 214 ಎಸೆತಗಳಲ್ಲಿ ಅವರ ಶತಕ ಪೂರ್ತಿಗೊಂಡಿತು.

ಇದು ಆಸ್ಟ್ರೇಲಿಯದಲ್ಲಿ ಕೊಹ್ಲಿ ಬಾರಿಸಿದ 6ನೇ ಟೆಸ್ಟ್‌ ಶತಕ. ಇದರೊಂದಿಗೆ ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಸರಿದೂಗಿಸಿದರು. ಸ್ಕೋರ್‌ 250ರ ಗಡಿ ದಾಟಿದೊಡನೆ ವೇಗಿ ಪ್ಯಾಟ್‌ ಕಮಿನ್ಸ್‌ ಭಾರತದ ಕಪ್ತಾನನಿಗೆ ಬಲೆ ಬೀಸಿದರು. ಆದರೆ ಹ್ಯಾಂಡ್ಸ್‌ಕಾಂಬ್‌ ಪಡೆದ ಈ ಕ್ಯಾಚ್‌ ವೇಳೆ ಚೆಂಡು ನೆಲಕ್ಕೆ ತಾಗಿತ್ತು ಎಂಬ ಕಾರಣಕ್ಕಾಗಿ ತೀರ್ಪಿಗಾಗಿ ತೃತೀಯ ಅಂಪಾಯರ್‌ ಮೊರೆಹೋಗಲಾಯಿತು. ಅವರಿಗೂ ಇದು ಸ್ಪಷ್ಟವಾಗಲಿಲ್ಲ. ಆದರೆ ಸಂಶಯದ ಲಾಭ ಭಾರತದ ಕಪ್ತಾನನಿಗೆ ಸಿಗಲೇ ಇಲ್ಲ.

60 ರನ್ನಿಗೆ ಬಿತ್ತು 6 ವಿಕೆಟ್‌!
ಭಾರತ ಕನಿಷ್ಠ 75 ರನ್‌ ಲೀಡ್‌ ಗಳಿಸಿದ್ದರೂ ಈ ಪಂದ್ಯದಲ್ಲಿ ಸುರಕ್ಷಿತವಾಗಿರುತ್ತಿತ್ತು. ಇದಕ್ಕೆ ಅಡ್ಡಿಯಾಗಿ ಪರಿಣಮಿಸಿದ್ದು ಅಜಿಂಕ್ಯ ರಹಾನೆ ಅವರ ಕ್ಷಿಪ್ರ ಪತನ ಹಾಗೂ ಕೆಳ ಕ್ರಮಾಂಕದ ಆಟಗಾರರ ಬ್ಯಾಟಿಂಗ್‌ ವೈಫ‌ಲ್ಯ. ಇದರಿಂದ ಭಾರತದ ಕೊನೆಯ 6 ವಿಕೆಟ್‌ ಬರೀ 60 ರನ್‌ ಅಂತರದಲ್ಲಿ ಉರುಳಿ ಹೋಯಿತು.

Advertisement

ರಹಾನೆ ಹಿಂದಿನ ದಿನದ 51 ರನ್ನುಗಳ ಮೊತ್ತಕ್ಕೆ ಒಂದೂ ರನ್‌ ಸೇರಿಸದೆ ದಿನದ 4ನೇ ಎಸೆತದಲ್ಲೇ ಲಿಯೋನ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ಭಾರತ ತನ್ನ ಮೊತ್ತಕ್ಕೆ ಒಂದೇ ರನ್‌ ಸೇರಿಸಿತ್ತು.

ಕೊಹ್ಲಿ-ಹನುಮ ವಿಹಾರಿ ಸೇರಿಕೊಂಡು ಮೊತ್ತವನ್ನು 223ರ ತನಕ ಏರಿಸಿದರು. ವಿಹಾರಿ 46 ಎಸೆತಗಳಿಂದ 20 ರನ್‌ ಹೊಡೆದರು. ಅನಂತರ ಬಂದ ರಿಷಬ್‌ ಪಂತ್‌ 50 ಎಸೆತ ಎದುರಿಸಿ 36 ರನ್‌ ಸಿಡಿಸಿದರು (2 ಬೌಂಡರಿ, 1 ಸಿಕ್ಸರ್‌). 4 ಮಂದಿ ಸ್ಪೆಷಲಿಸ್ಟ್‌ ಬೌಲರ್‌ಗಳಿಂದ ಬಂದ ರನ್‌ ಕೇವಲ 9.

ಸ್ಪಿನ್ನರ್‌ ನಥನ್‌ ಲಿಯೋನ್‌ 67ಕ್ಕೆ 5 ವಿಕೆಟ್‌ ಉರುಳಿಸಿದ್ದು ಆಸೀಸ್‌ ಬೌಲಿಂಗ್‌ ಸರದಿಯ ವಿಶೇಷ. ಭಾರತದ ವಿರುದ್ಧ ಲಿಯೋನ್‌ ಇನ್ನಿಂಗ್ಸ್‌ ಒಂದರಲ್ಲಿ 7ನೇ ಸಲ 5 ಪ್ಲಸ್‌ ವಿಕೆಟ್‌ ಕಿತ್ತ ಲಿಯೋನ್‌, ಲಂಕಾದ ಮುರಳೀಧರನ್‌ ದಾಖಲೆಯನ್ನು ಸರಿದೂಗಿಸಿದರು.

ಫಿಂಚ್‌ ಕೈಗೆ ಏಟು
ಆಸ್ಟ್ರೇಲಿಯದ ದ್ವಿತೀಯ ಸರದಿಯಲ್ಲಿ ಹ್ಯಾರಿಸ್‌, ಮಾರ್ಷ್‌, ಹ್ಯಾಂಡ್ಸ್‌ಕಾಂಬ್‌ ಮತ್ತು ಹೆಡ್‌ ಈಗಾಗಲೇ ಔಟಾಗಿದ್ದಾರೆ. ಆದರೆ 25 ರನ್‌ ಮಾಡಿದ ಫಿಂಚ್‌ ಗಾಯಾಳಾಗಿ ಹೊರಹೋಗಿದ್ದಾರೆ. ಶಮಿ ಎಸೆತವೊಂದು ಅವರ ಬಲಗೈ ತೋರು ಬೆರಳಿಗೆ ಅಪ್ಪಳಿಸಿತ್ತು. ಫಿಂಚ್‌ ಸೋಮವಾರ ಬ್ಯಾಟಿಂಗ್‌ ಮುಂದುವರಿಸಬಹುದು. 41 ರನ್‌ ಮಾಡಿ ಆಡುತ್ತಿರುವ ಖ್ವಾಜಾ ಭಾರತಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದ್ದಾರೆ.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌    326
ಭಾರತ ಪ್ರಥಮ ಇನ್ನಿಂಗ್ಸ್‌
(ನಿನ್ನೆ 3 ವಿಕೆಟಿಗೆ 172)
ವಿರಾಟ್‌ ಕೊಹ್ಲಿ    ಸಿ ಹ್ಯಾಂಡ್ಸ್‌ಕಾಂಬ್‌ ಬಿ ಕಮಿನ್ಸ್‌    123
ಅಜಿಂಕ್ಯ ರಹಾನೆ    ಸಿ ಪೇನ್‌ ಬಿ ಲಿಯೋನ್‌    51
ಹನುಮ ವಿಹಾರಿ    ಸಿ ಪೇನ್‌ ಬಿ ಹ್ಯಾಝಲ್‌ವುಡ್‌    20
ರಿಷಬ್‌ ಪಂತ್‌    ಸಿ ಸ್ಟಾರ್ಕ್‌ ಬಿ ಲಿಯೋನ್‌    36
ಮೊಹಮ್ಮದ್‌ ಶಮಿ    ಸಿ ಪೇನ್‌ ಬಿ ಲಿಯೋನ್‌    0
ಇಶಾಂತ್‌ ಶರ್ಮ    ಸಿ ಮತ್ತು ಬಿ ಲಿಯೋನ್‌    1
ಉಮೇಶ್‌ ಯಾದವ್‌    ಔಟಾಗದೆ    4
ಜಸ್‌ಪ್ರೀತ್‌ ಬುಮ್ರಾ    ಸಿ ಖ್ವಾಜಾ ಬಿ ಲಿಯೋನ್‌    4
ಇತರ        18
ಒಟ್ಟು  (ಆಲೌಟ್‌)        283
ವಿಕೆಟ್‌ ಪತನ: 4-173, 5-223, 6-251, 7-252, 8-254, 9-279.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        24-4-79-2
ಜೋಶ್‌ ಹ್ಯಾಝಲ್‌ವುಡ್‌        21-8-66-2
ಪ್ಯಾಟ್‌ ಕಮಿನ್ಸ್‌        26-4-60-1
ನಥನ್‌ ಲಿಯೋನ್‌        34.5-7-67-5
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌
ಮಾರ್ಕಸ್‌ ಹ್ಯಾರಿಸ್‌    ಬಿ ಬುಮ್ರಾ    20
ಆರನ್‌ ಫಿಂಚ್‌    ಗಾಯಾಳು    25
ಉಸ್ಮಾನ್‌ ಖ್ವಾಜಾ    ಬ್ಯಾಟಿಂಗ್‌    41
ಶಾನ್‌ ಮಾರ್ಷ್‌    ಸಿ ಪಂತ್‌ ಬಿ ಶಮಿ    5
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಎಲ್‌ಬಿಡಬ್ಲ್ಯು ಇಶಾಂತ್‌    13
ಟ್ರ್ಯಾವಿಸ್‌ ಹೆಡ್‌    ಸಿ ಇಶಾಂತ್‌ ಬಿ ಶಮಿ    19
ಟಿಮ್‌ ಪೇನ್‌    ಔಟಾಗದೆ    8
ಇತರ        1
ಒಟ್ಟು  (4 ವಿಕೆಟಿಗೆ)        132
ವಿಕೆಟ್‌ ಪತನ: 1-59, 2-64, 3-85, 4-120.
ಬೌಲಿಂಗ್‌:
ಇಶಾಂತ್‌ ಶರ್ಮ        9-0-33-1
ಜಸ್‌ಪ್ರೀತ್‌ ಬುಮ್ರಾ        13-5-25-1
ಮೊಹಮ್ಮದ್‌ ಶಮಿ        10-3-23-2
ಉಮೇಶ್‌ ಯಾದವ್‌        8-0-39-0
ಹನುಮ ವಿಹಾರಿ        8-4-11-0

Advertisement

Udayavani is now on Telegram. Click here to join our channel and stay updated with the latest news.

Next