Advertisement

ಸಹಕಾರಿ ಕ್ಷೇತ್ರ ಕುರಿತು ದೃಷ್ಟಿಕೋನ ಬದಲಾಗಬೇಕು: ಸ್ಪೀಕರ್ ಕಾಗೇರಿ

12:49 PM Nov 08, 2021 | Team Udayavani |

ಶಿರಸಿ: ಸಹಕಾರಿ ಕ್ಷೇತ್ರದ ಕುರಿತಾದ ನಮ್ಮ ದೃಷ್ಟಿಕೋನ ಸಂಕುಚಿತ ಆಗದೇ, ಸಾಮಾಜಿಕ, ರಾಷ್ಟ್ರೀಯ ಜವಾಬ್ದಾರಿ ದೃಷ್ಟಿಕೋನ ಆಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಸೋಮವಾರ ಸಹಕಾರ ಭಾರತಿ ಜಿಲ್ಲಾ ಘಟಕದಿಂದ ಟಿಆರ್ ಸಿ ಸಭಾಭವನದಲ್ಲಿ ಹಮ್ಮಿಕೊಂಡ ಒಂದು ದಿನದ ಅಭ್ಯಾಸ ವರ್ಗಕ್ಕೆ ಚಾಲನೆ‌‌ ನೀಡಿ ಮಾತನಾಡಿದರು.

ಭಾರತೀಯರಿಗೆ ಮೂಲ ಸ್ವಭಾವ ಸಹಕಾರಿಯೇ ಆಗಿದೆ. ಆದರೂ ಪಾಶ್ಚಿಮಾತ್ಯ ಪ್ರಭಾವದಿಂದ ಸಹಕಾರ ಕೊರತೆ ಆಗುತ್ತಿದೆ. ಈ ಕಾರಣದಿಂದ ಸಹಕಾರಿ ಭಾರತಿ‌ ಜವಬ್ದಾರಿ ಹೆಚ್ಚಿದೆ. ಸಹಕಾರಿ ಕಾರ್ಯವನ್ನು ರಾಷ್ಟ್ರೀಯ ಬುನಾದಿಗೆ, ರಾಷ್ಟ್ರದ ಕಾರ್ಯ ಎಂದು‌ ರಾಷ್ಟ್ರೀಯ ಭಾವನೆಯಲ್ಲಿ ಕೆಲಸ ಮಾಡಬೇಕು ಎಂದರು.

ಹಾಲು ಸಂಘ, ಪ್ರಾಥಮಿಕ ಸಂಘದಿಂದ ಹಿಡಿದು ಮಾಡುವ ಕೆಲಸಕ್ಕೆ ಚೌಕಟ್ಟು ಹಾಕಿಕೊಂಡಿದ್ದೇವೆ. ಇದನ್ನು ವಿಸ್ತರಿಸಿ ಕೆಲಸ ಮಾಡಬೇಕು. ಜನ ಜೀವನದಲ್ಲಿ ಪರಿವರ್ತನಾ ಶಕ್ತಿ ಬೆಳಸಿಕೊಳ್ಳಬೇಕಿದೆ ಎಂದರು.

ಸಹಕಾರಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ.‌‌ ನಾಡಿನಲ್ಲೇ ಹೆಸರು ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರದಲ್ಲಿ ‌ಪ್ರಭಾವಿ‌ ಸಂಘಟನೆಯೇ ಸಹಕಾರ ಭಾರತಿ. ನಮ್ಮಲ್ಲಿ ಸಹಕಾರಿ‌ ಕ್ಷೇತ್ರವೇ ಬಲವಾಗಿರುವದು ಹಾಗೂ ಪ್ರಭಾವಿ ಆಗಿದೆ‌. ಸಹಕಾರಿ ‌ಕ್ಷೇತ್ರದ ದೃಷ್ಟಿ‌ ಬಲಗೊಳಿಸಲು ಸಹಕಾರ ಭಾರತಿ‌ ಕೂಡ ಕೆಲಸ‌ ಮಾಡುತ್ತಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ:ಕೆಲವರಿಗೆ ದೇಶಕ್ಕಿಂತ ಐಪಿಎಲ್ ಆಟವೇ ಮುಖ್ಯ: ವಿಶ್ವಕಪ್ ಸೋಲಿಗೆ ಕಾರಣ ಬಿಚ್ಚಿಟ್ಟ ಕಪಿಲ್ ದೇವ್

ಸಹಕಾರಿ ಕ್ಷೇತ್ರ ‌ಪ್ರಾಮುಖ್ಯತೆ ನೋಡಿ ಪ್ರಧಾನಿಗಳು, ಸಹಕಾರಿ ‌ಕ್ಷೇತ್ರಕ್ಕೇ ಖಾತೆ ಮಾಡಿದ್ದಾರೆ. ಅಮಿತ್ ಶಾ ಅವರೇ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅಷ್ಟು ಪ್ರಭಾವಿ, ಮಹತ್ವದ್ದು ಆಗಿದೆ. ಆರ್ಥಿಕ ಶಿಸ್ತು, ಸಮಾಜದಲ್ಲಿ ಪರಿವರ್ತನೆ ತರಲು‌ ಮಹತ್ವದ ಕ್ಷೇತ್ರ ಎಂದರು.

ಆರ್ ಬಿ ಐ, ರಾಜ್ಯ, ಕೇಂದ್ರ ಸರಕಾರಗಳು ಸಹಕಾರ ಕ್ಷೇತ್ರಗಳು ಇನ್ನಷ್ಟು ಪಾರದರ್ಶಕವಾಗಿ ಕೆಲಸ‌ ಮಾಡಬೇಕು. ಸ್ವತಃ ಸಹಕಾರಿ ಭಾರತಿ ಸದಸ್ಯರು ಕಾನೂನು ತಿಳುವಳಿಕೆ ಬೆಳಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ‌ಪ್ರಧಾನ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಮಾತನಾಡಿ, ದೇಶದಲ್ಲಿ ‌ ಎಂಟುವರೆ‌ ಲಕ್ಷ ಸಂಸ್ಥೆಗಳಿವೆ. 35 ಕೋಟಿ ಸದಸ್ಯರಿದ್ದಾರೆ. ರಾಷ್ಟ್ರದ ಸಹಕಾರಿಗಳು ಉತ್ತರ ಕನ್ನಡದ ಸಹಕಾರಿಗಳಿಂದ ಕಲಿತು ಹೋಗಬೇಕಿದೆ. ನಾಡಿಗೇ‌ ಮಾದರಿ ಕಾರ್ಯ ಉತ್ತರ ಕನ್ನಡದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ಸಹಕಾರ‌ ಭಾರತಿಗೆ‌ ಸಾಕಷ್ಟು ಕಾರ್ಯ ಮಾಡುತ್ತಿದೆ. ‌ಸೇವಾ ಕ್ಷೇತ್ರವಾಗಿ‌ ರಾಷ್ಟ್ರದ ಉನ್ನತಿ ಕಾರ್ಯ ಆಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಗಣೇಶ ಜಿ, ರಾಜ್ಯ ಸಮಿತಿ ಸದಸ್ಯ ಶಂಭುಲಿಂಗ ಹೆಗಡೆ ನಿಡಗೋಡ, ಸೌಹಾರ್ದ ಸಹಕಾರಿ‌ ನಿರ್ದೇಶಕಿ ಸರಸ್ವತೀ ಎನ್.ರವಿ  ಇದ್ದರು.  ಸಿಂಧುಚಂದ್ರ ಹೆಗಡೆ ಸಂಗಡಿಗರೊಂದಿಗೆ ಪ್ರಾರ್ಥಿಸಿದರು. ಜಿಲ್ಲಾಧ್ಯಕ್ಷ‌ ಮೋಹನದಾಸ್ ನಾಯಕ ಸ್ವಾಗತಿಸಿದರು. ಸುರೇಶ್ಚಂದ್ರ ಹೆಗಡೆ‌ ಕೆಶಿನ್ಮನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಸಚಿನ್ ಹೆಗಡೆ, ಗಿರಿಧರ ಕಬ್ನಳ್ಳಿ ವಿವಿಧ ಜವಬ್ದಾರಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next