Advertisement

ಕಾಯಕದಿಂದ ವ್ಯಕ್ತಿತ್ವ ಅಳೆಯಬಾರದು

09:54 PM Aug 20, 2019 | Lakshmi GovindaRaj |

ಸಂತೆಮರಹಳ್ಳಿ: ಪ್ರತಿ ವೃತ್ತಿಗೂ ತನ್ನದೇ ಆದ ವೈಶಿಷ್ಟ್ಯವಿದೆ. ಅದರಲ್ಲಿ ಪರಿಣಿತರಾದವರು ಮಾತ್ರ ಅಂತಹ ಕೆಲಸ ಮಾಡಲು ಸಾಧ್ಯ. ಆದರೆ ಆ ವೃತ್ತಿಯಿಂದಲೇ ವ್ಯಕ್ತಿತ್ವ ಅಳೆಯುವ ಪದ್ಧ ತಿ ನಿರ್ಮೂಲವಾಗಬೇಕು. ಎಲ್ಲಾ ಕಾಯಕವೂ ಶ್ರೇಷ್ಠವಾಗಿದ್ದು ಎಲ್ಲರನ್ನೂ ಗೌರವಿಸುವ ಕೆಲಸವಾಗಬೇಕು ಎಂದು ಶಾಸಕ ಎನ್‌.ಮಹೇಶ್‌ ಅಭಿಪ್ರಾಯಪಟ್ಟರು. ಯಳಂದೂರು ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸವಲತ್ತು ಸದುಪಯೋಗಿಸಿಕೊಳ್ಳಿ: ಸವಿತಾ ಸಮಾಜ ಮನುಷ್ಯರನ್ನು ಶಿಸ್ತು ಮಾಡುವ ಕೆಲಸ ಮಾಡುತ್ತಿದೆ. ಅನಾದಿ ಕಾಲದಿಂದಲೂ ಪರಂಪರಾಗತವಾಗಿ ಇವರ ವೃತ್ತಿ ಚಾಲ್ತಿಯಲ್ಲಿದೆ. ಆದರೆ ಶೈಕ್ಷಣಿಕವಾಗಿ ಈ ಸಮಾಜ ತೀರಾ ಹಿಂದುಳಿದಿದೆ. ವ್ಯಾಸಂಗಕ್ಕಾಗಿ ಸರ್ಕಾರದಿಂದ ಎಲ್ಲಾ ರೀತಿಯ ಸವಲತ್ತುಗಳು ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲಮಿತಿಯ ಅವಶ್ಯಕತೆ ಇಲ್ಲ: ಸರ್ಕಾರ ನೀಡುವ ವೃದ್ಧಾಪ್ಯ ವೇತನ, ಮನಸ್ವಿನಿ, ಮೈತ್ರಿ, ವಿಕಲಚೇತನ ಸೇರಿದಂತೆ ಇತರೆ ಸಾಮಾಜಿಕ ಪಿಂಚಣಿಗಳನ್ನು ನಾವು ತಕ್ಷಣ ಸಾರ್ವಜನಿಕರಿಗೆ ವಿತರಿಸುವ ಮೂಲ ಸೌಲಭ್ಯವಾಗಿದೆ. ಇತರೆ ಯೋಜನೆಗಳು ತರಲು ವಿಳಂಬವಾದರೂ ಇದಕ್ಕೆ ಹೆಚ್ಚಿಗೆ ಕಾಲಮಿತಿಯ ಅವಶ್ಯಕತೆ ಇಲ್ಲ. ಯಳಂದೂರು ತಾಲೂಕು ಅತ್ಯಂತ ಚಿಕ್ಕ ತಾಲೂಕಾಗಿದೆ ಎಂದರು.

103 ಜನರಿಗೆ ಸೌಲಭ್ಯ ವಿತರಣೆ: ಯಾವುದೇ ಮಧ್ಯವರ್ತಿಗಳೂ ಇಲ್ಲದೆ ಕಳೆದ 2 ತಿಂಗಳಲ್ಲಿ ಇಂಥವರು ಇರುವ ಸ್ಥಳಕ್ಕೆ ತಲುಪಿ ಅವರಿಗೆ ಸಾಮಾಜಿಕ ಪಿಂಚಣಿಗಳನ್ನು ನೀಡುವ ಕೆಲಸವನ್ನು ತಹಶೀಲ್ದಾರ್‌ ವರ್ಷಾ ನೇತೃತ್ವದ ತಂಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿದೆ ಎಂದು ಶ್ಲಾ ಸಿದರು. ಈ ಎರ ಡು ತಿಂಗಳಲ್ಲಿ 103 ಫ‌ಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಗಿದ್ದು, ಆದಷ್ಟು ಬೇಗ ಎಲ್ಲರಿಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ತುಳಿತಕ್ಕೊಳಗಾದವರನ್ನು ಮೇಲೆತ್ತಬೇಕು: ಮುಖ್ಯ ಭಾಷಣಕಾರ ಮಹದೇವಕುಮಾರ್‌ ಮಾತನಾಡಿ, ನಮ್ಮ ದೇಶದಲ್ಲಿ ಮೂರು ಕ್ರಾಂತಿಗಳು ನಡೆದಿವೆ. ಒಂದು ಬುದ್ಧನ ಕಾಲದಲ್ಲಿ ಬಸವಣ್ಣನವರ ಕಾಲದಲ್ಲಿ ಅಂಬೇಡ್ಕರ್‌ ಕಾಲದಲ್ಲಿ ಈ ಮೂರು ಕಾಲಗಳಲ್ಲಿಯೂ ತುಳಿತಕ್ಕೆ ಒಳಗಾದ ಸಮಾಜಗಳನ್ನು ಎತ್ತುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಮಾನವೀಯತೆ ಎಲ್ಲರಿಗೂ ಸರಿಸಮಾನ: ಕ್ಷೌರಿಕ ವೃತ್ತಿಯಲ್ಲಿದ್ದ ಬುದ್ಧನ ಕಾಲದ ಉಪಾಲಿ ಮೊದಲ ಕ್ಷೌರಿಕ ಗುರುವಾಗಿದ್ದಾರೆ. ಇವರು ಬರೆದಿರುವ ವಿನಯ ಪೀಠಿಕ ಗ್ರಂಥ ಇಡೀ ಬುದ್ಧನ ಬದುಕನ್ನು ಹೇಳುತ್ತದೆ. ಹಾಗೆಯೇ ಬಸವಣ್ಣನ ಕಾಲದಲ್ಲಿ ಅವರ ಕಾರ್ಯದರ್ಶಿಯಾಗಿ ಅವರಿಗೆ ಆಪ್ತರಾಗಿದ್ದ ಹಡಪದ ಅಪ್ಪಣ್ಣ ಜಾತಿಯ ಪ್ರಬಲ ವಿರೋಧಿಯಾಗಿದ್ದರು. ಮನುಷ್ಯತ್ವ, ಮಾನವೀಯತೆ ಎಲ್ಲರಿಗೂ ಸರಿಸಮಾನ ವಾದದು ಎಂದು ಸಾರಿದರು. ಇಂಥ ಶರಣರ ತತ್ವಗಳನ್ನು 12ನೇ ಶತಮಾನದ ಶರಣ ಚಳವಳಿಯನ್ನು ಮುನ್ನಡೆಸುವ ಕೆಲಸಕ್ಕೆ ನಾವು ಹೆಗಲು ಕೊಡುವ ಅಗತ್ಯತೆ ಇದೆ ಎಂದರು.

ಜಿಪಂ ಸದಸ್ಯ ಜೆ.ಯೋಗೇಶ್‌, ತಾಪಂ ಅಧ್ಯಕ್ಷ ನಿರಂಜನ್‌, ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳ ಫ‌ಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಶ್ರೀಕಂಠಸ್ವಾಮಿ, ಪಪಂ ಸದಸ್ಯರಾದ ಮಹೇಶ್‌, ವೈ.ಜಿ.ರಂಗನಾಥ, ಮಹಾದೇವನಾಯಕ, ಕೆ.ಮಲ್ಲಯ್ಯ, ಮಂಜು, ರವಿ, ತಹಶೀಲ್ದಾರ್‌ ವರ್ಷಾ, ಉಪತಹಶೀಲ್ದಾರ್‌ ವೈ.ಎಂ. ನಂಜಯ್ಯ, ಇಒ ಬಿ.ಎಸ್‌.ರಾಜು, ಮಾಜಿ ಧರ್ಮದರ್ಶಿ ಎನ್‌.ದೊರೆಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next