Advertisement

ವ್ಯಕ್ತಿತ್ವ ವಿಕಸನ, ನಾಯಕತ್ವ ಬೆಳವಣಿಗೆ ತರಬೇತಿ

09:20 PM Jun 21, 2019 | Sriram |

ಬೆಳ್ಮಣ್‌: ವಿದ್ಯಾರ್ಥಿಗಳು ಜೀವನದಲ್ಲಿ ದೊರಕುವಂತಹ ಎಲ್ಲ ಚಟುವಟಿಕೆಗಳಲ್ಲಿ, ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ. ಅವಕಾಶದ ಸದ್ಬಳಕೆಯೇ ನಾಯಕತ್ವದ ಬೆಳವಣಿಗೆ ಎಂದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ ಹೇಳಿದರು.

Advertisement

ಬುಧವಾರ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್‌ ಕ್ಲಬ್‌ ಇದರ ಸಹಯೋಗದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫ್ರೆಂಡ್ಸ್‌ ಕ್ಲಬ್‌ನ ಅಧ್ಯಕ್ಷ ನಂದಳಿಕೆ ರಾಜೇಶ್‌ ಕೋಟ್ಯಾನ್‌, ಮುಂಡ್ಕೂರು ಕಾಲೇಜಿನ ಪ್ರಾಂಶುಪಾಲ ಸುದರ್ಶನ್‌ ವೈ. ಎಸ್‌., ಫೌÅಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸವಿತಾ, ಉಪನ್ಯಾಸಕ ಪ್ರಕಾಶ್‌ ನಾಯ್ಕ, ಉಡುಪಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅ ಧಿಕಾರಿ ವಿಲ್ಫೆ†ಡ್‌ ಡಿ’ಸೋಜಾ, ನೆಹರೂ ಯುವ ಕೇಂದ್ರದ ತಾಲೂಕು ಸಂಯೋಜಕ ಉದಯ ಮರಾಠಿ, ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್‌ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಟuಲ ಮೂಲ್ಯ, ಕಾರ್ಯದರ್ಶಿ ಪ್ರಶಾಂತ್‌ ಪೂಜಾರಿ ಕೋಶಾಧಿ ಕಾರಿ ಹರಿಪ್ರಸಾದ್‌ ಆಚಾರ್ಯ ಅಬ್ಬನಡ್ಕ, ಮಾಜಿ ಕಾರ್ಯದರ್ಶಿ ಅಬ್ಬನಡ್ಕ ಸತೀಶ್‌ ಪೂಜಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next