Advertisement

ಓದಿನಿಂದ ವ್ಯಕ್ತಿತ್ವ ವಿಕಸನ: ಮಮತಾ

08:34 PM Jun 28, 2019 | Sriram |

ಬದಿಯಡ್ಕ: ಓದು ಮನಸಿಗೆ ಸಂತೋಷ ಸಮಧಾನ ನೀಡಿ ಏಕಾಗ್ರತೆ ಹೆಚ್ಚಿಸುತ್ತದೆ. ಹೆಚ್ಚು ಓದುವಿಕೆಯಿಂದ ಹೆಚ್ಚು ಅರಿವು ಮೂಡುತ್ತದೆ. ಇದನ್ನೇ ಹವ್ಯಾಸ ಮಾಡಿದಲ್ಲಿ ಆರೋಗ್ಯವಂತ ಮನಸಿನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ.

Advertisement

ಅಲ್ಲದೇ ಸೋಲುವವನಿಗೆ ಸಾಂತ್ವನವಾಗುವ ನೊಂದವರಿಗೆ ಆಸರೆಯಾಗುವ ಗುಣ ಓದುವಿಕೆಯಿಂದ ಬರುತ್ತದೆ. ಪುಸ್ತಕಗಳು ಉತ್ತಮ ಆಲೋಚನೆಗಳಿಗೆ, ಉತ್ತಮ ಚಿಂತನೆಗಳಿಗೆ ಅವಕಾಶ ಮೂಡುತ್ತದೆ ಎಂದು ಬಿಆರ್‌ಸಿಯ ಮಮತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಬದಿಯಡ್ಕ ನವಜೀವನ ಪ್ರೌಢ ಶಾಲೆಯಲ್ಲಿ ಜರುಗಿದ ವಾಚನಾವಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. . ಶಾಲಾ ಶಿಕ್ಷಕಿ ಶುಭ ಹಾರೈಸಿದರು. ಪ್ರಭಾವತಿ ಕೆದಿಲಾಯ ಸ್ವಾಗತಿಸಿ ದಿವ್ಯಾ ಅವರು ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next