Advertisement

ಪ್ರಯತ್ನದಿಂದ ವ್ಯಕ್ತಿತ್ವ ವಿಕಾಸ

05:19 PM May 17, 2018 | Team Udayavani |

ಶಹಾಪುರ: ನಿರಂತರ ಪ್ರಯತ್ನ, ಸತತ ಅಧ್ಯಯನ, ಸಮಯ ಪ್ರಜ್ಞೆ ವಿದ್ಯಾರ್ಥಿಗಳು ಅಳವಡಿಸಿಕೊಂಡಾಗ ಅದರಿಂದ ವ್ಯಕ್ತಿತ್ವದ ವಿಕಾಸ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಟಿ.ಪಿ. ದೊಡ್ಮನಿ ಹೇಳಿದರು.

Advertisement

ನಗರದ ಹಳಪೇಟೆಯಲ್ಲಿನ ಜ್ಞಾನಗಂಗೋತ್ರಿ ಶಾಲೆಯಲ್ಲಿ ಬಾಲಭವನ ಸೂಸೈಟಿ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿ ಕಾರಿಗಳ ಕಾರ್ಯಾಲಯ ಶಹಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಸಗರನಾಡು ಸೇವಾ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ
ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಬೇಸಿಗೆ ಶಿಬಿರ ಅತ್ಯಂತ ಪೂರಕವಾಗಿದೆ. ಶಿಬಿರದಲ್ಲಿ ದಿನನಿತ್ಯ ಹಲವಾರು ಕ್ರಿಯಾತ್ಮಕ ಚಟುವಟಿಕೆ ವ್ಯಕ್ತಪಡಿಸಲು ಸಾಧ್ಯವಾಗಿದೆ ಎಂದು ಹೇಳಿದರು.
 
ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಭವಿಷ್ಯ ಹೊಂದಲು ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಬದುಕಿನಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು.
 
ಶಿಬಿರದಲ್ಲಿ ವಿದ್ಯಾರ್ಥಿಗಳಿಂದ ಅನೇಕ ಕರಕುಶಲ ವಸ್ತುಗಳ ತಯಾರಿಕೆ, ಮಣ್ಣಿನ ಆಟಿಕೆ ತಯಾರಿಕೆ, ಸಂಗೀತ, ನೃತ್ಯ ಜತೆಗೆ ಸಾಮೂಹಿಕ ಗೀತೆ ಪ್ರಸ್ತುತ ಪಡಿಸಲು ಅವಕಾಶವಿದೆ ಎಂದು ಹೇಳಿದರು. 

ಹಿರಿಯರಾದ ಮಧ್ವಾಚಾರ್ಯ ಸಗರ, ಕೋನೇರಾಚಾರ್ಯ ಸಗರ, ಅನಂತರಾವ ದೇಶಪಾಂಡೆ ಇದ್ದರು. ಶಿಬಿರಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ಸಿದ್ದಮಾಡಿದ ವಿವಿಧ ಕರಕುಶಲ ವಸ್ತುಗಳನ್ನು ಅಧಿಕಾರಿಗಳು ವೀಕ್ಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next