Advertisement

ವ್ಯಕ್ತಿತ್ವ ವಿಕಸನಕ್ಕೆ ನಾಟಕಗಳು ಪೂರಕ

11:41 AM Mar 17, 2022 | Team Udayavani |

ಧಾರವಾಡ: ಕಾಲೇಜು ಯುವ ರಂಗೋತ್ಸವವು ಇಂದಿನ ವಿದ್ಯಾರ್ಥಿಗಳಿಗೆ ಅವರ ಸಾಂಸ್ಕೃತಿಕ ಪ್ರತಿಭೆಗಳನ್ನು ತೋರಿಸಲು ಒಂದು ಉತ್ತಮ ವೇದಿಕೆಯಾಗಿದ್ದು, ಇದರ ಜತೆಗೆ ವ್ಯಕ್ತಿತ್ವ ವಿಕಸನಕ್ಕೆ ನಾಟಕಗಳು ಪೂರಕವಾಗಿವೆ ಎಂದು ಹಿರಿಯ ರಂಗಕರ್ಮಿ ಡಾ|ಅರವಿಂದ ಕುಲಕರ್ಣಿ ಹೇಳಿದರು.

Advertisement

ನಗರದ ರಂಗಾಯಣದ ಪಂ|ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಯುವಕರ ಚಿತ್ತ ರಂಗಭೂಮಿಯತ್ತ ನುಡಿಗಟ್ಟಿನೊಂದಿಗೆ ಹಮ್ಮಿಕೊಂಡಿರುವ ಕಾಲೇಜು ಯುವ ರಂಗೋತ್ಸವದ ಆರನೇ ದಿನದ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಇಂದಿನ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ರಂಗಾಯಣ ಇಂತಹ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿರುವ ಪ್ರತಿಭೆಗಳನ್ನು ಗುರುತಿಸುತ್ತಿರುವುದು ಶ್ಲಾಘನೀಯ ಎಂದರು.

ಹಿರಿಯ ಪತ್ರಕರ್ತ ಬಸವರಾಜ ಹೊಂಗಲ್‌ ಮಾತನಾಡಿ, ರಂಗಭೂಮಿ ಕೃಷಿಯಿದ್ದಂತೆ. ಇಂದಿನ ಆಧುನಿಕ ರಾಸಾಯನಿಕ ಪದ್ಧತಿಯಿಂದ ಹೇಗೆ ಕೃಷಿ ಅವನತಿಯಾಯಿತೋ ಅದೇ ರೀತಿ ರಂಗಭೂಮಿ ಕೂಡ ಆಗಿದೆ. ಧಾರವಾಡದಲ್ಲಿ 3 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರನ್ನು ರಂಗಭೂಮಿಯತ್ತ ಸೆಳೆಯಬೇಕು. ಈ ನಿಟ್ಟಿನಲ್ಲಿ ಧಾರವಾಡ ರಂಗಾಯಣ ಕಾಲೇಜು ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಕುರಿತು ಅರಿವು ಮೂಡಿಸಿ, ಯುವಕರನ್ನು ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ರಂಗಭೂಮಿಯನ್ನು ವಿಸ್ತರಿಸುವ ಮಹತ್ತರ ಕಾರ್ಯ ಮಾಡುವ ಅಗತ್ಯವಿದೆ ಎಂದರು.

ನಾಟಕ ಅಕಾಡೆಮಿ ಮಾಜಿ ಸದಸ್ಯ ರವಿ ಕೋಟಾರಗಸ್ತಿ ಮಾತನಾಡಿ, ರಂಗಭೂಮಿಯಲ್ಲಿ ವಿದ್ಯಾರ್ಥಿಗಳು, ಯುವ ರಂಗಕರ್ಮಿಗಳ ಪಾತ್ರ ಮಹತ್ವ ಹೊಂದಿದೆ. ಇಂದಿನ ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿರುವ ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ಮುಂದುವರಿಸಲು ಧಾರವಾಡ ರಂಗಾಯಣ ಹಮ್ಮಿಕೊಳ್ಳುತ್ತಿರುವ ಇಂತಹ ಹೊಸ ಹೊಸ ಕಾರ್ಯಕ್ರಮಗಳಿಗೆ ಎಲ್ಲ ರಂಗಕರ್ಮಿಗಳು, ಸಾಹಿತಿಗಳು, ಕಲಾವಿದರು, ರಂಗಾಸಕ್ತರು ಸಹಕಾರ ನೀಡಬೇಕು ಎಂದರು.

Advertisement

ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತ ಮಹಾಂತೇಶ ಕಣವಿ, ಎಸ್‌.ಎಸ್‌.ತಮಶೆಟ್ಟಿ, ರಂಗಸಮಾಜ ಸದಸ್ಯ ಹಿಪ್ಪರಗಿ ಸಿದ್ಧರಾಮ, ಬಿ.ಬಸವರಾಜು ಇದ್ದರು. ಫಕ್ಕೀರಪ್ಪ ಮಾಧನಭಾವಿ ನಿರೂಪಿಸಿ, ವಂದಿಸಿದರು. ವಿಜಯಪುರದ ಶ್ರೀ ಸ್ವಾಮಿ ವಿವೇಕಾನಂದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಬಿ.ಬಸವರಾಜು ರಚಿಸಿ, ಡಿ.ಎಚ್‌ ಕೋಲಾರ ನಿರ್ದೇಶಿಸಿದ ಕಲ್ಯಾಣದ ತೇರು ನಾಟಕ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next