Advertisement

ಜ್ಞಾನಾರ್ಜನೆಯೊಂದಿಗೆ ವ್ಯಕ್ತಿತ್ವ ನಿರ್ಮಾಣ

05:10 PM Aug 19, 2018 | Team Udayavani |

ಬೆಳಗಾವಿ: ಇಂಜಿನಿಯರಿಂಗ್‌ ಕಲಿಕೆಯ ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ತಾಂತ್ರಿಕ ಸೂಕ್ತ ತಿಳಿವಳಿಕೆ, ಜ್ಞಾನ ಸಂಪಾದನೆಯ ಜತೆಗೆ ಪದವಿಯ ಹಂತಕ್ಕೆ ತಕ್ಕಂತೆ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳುವುದು ತುಂಬಾ ಅಗತ್ಯವಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ| ಕರಿಸಿದ್ಧಪ್ಪ ಹೇಳಿದರು. ನಗರದ ಜೆಜಿಐ ಸಂಸ್ಥೆಯ ಮಚ್ಛೆಯಲ್ಲಿನ ಜೈನ ಇಂಜಿನಿಯರಿಂಗ್‌ ಕಾಲೇಜ್‌ದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಹೊಸದಾಗಿ ಪ್ರವೇಶ ಹೊಂದಿದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ಜ್ಞಾನ, ಸೂಕ್ತ ಕೌಶಲ್ಯ ರೂಢಿಸಿಕೊಳ್ಳಲು ನಿರಂತರ ಶ್ರಮಿಸಬೇಕು. ಇದಕ್ಕೆ ಪೂರಕವಾದ ಒಳ್ಳೆಯ ವ್ಯಕ್ತಿತ್ವ ಬೆಳಸಿಕೊಳ್ಳಬೇಕು ಎಂದರು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೆಜಿಐ ನಿರ್ದೇಶಕ ಪ್ರೊ| ಆರ್‌.ಜಿ. ಧಾರವಡಕರ ಮಾತನಾಡಿ, ಜೆಜಿಐ ಸಂಸ್ಥೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಾವತ್ತೂ ಪ್ರಯತ್ನಿಸುತ್ತ ಬಂದಿದೆ. ಸಂಸ್ಥೆಯ ಎರಡೂ ಇಂಜನಿಯರಿಂಗ್‌ ಕಾಲೇಜಿನಲ್ಲಿ ಪ್ರತಿಭಾವಂತ ಪ್ರಾಧ್ಯಾಪಕರಿದ್ದು, ಜ್ಞಾನಾರ್ಜನೆಯ ದೃಷ್ಟಿಯಿಂದ ವಿದ್ಯಾರ್ಥಿಗಳು ಅವರಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮಚ್ಛೆಯ ಜೈನ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಹಾಗೂ ನಿರ್ದೇಶಕ ಡಾ| ಕೆ.ಜಿ. ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈನ ಇಂಜಿನಿಯರಿಂಗ್‌ ಮತ್ತು ಸಂಶೋಧನ ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ವಿ. ಗೋರಬಾಳ ಸ್ವಾಗತಿಸಿದರು. ಡೀನ್‌ ಪ್ರೊ| ಪಿ.ವೈ. ಚಿಟ್ಟಿ ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು. ಜೈನ ಎಂಬಿಎ ಕಾಲೇಜಿನ ಮುಖ್ಯಸ್ಥ ಡಾ| ರೋಹಿತರಾಜ್‌ ನಿರೂಪಿಸಿದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಗುರುಪ್ರಸಾದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next