Advertisement
ಶನಿವಾರ ನಗರದಲ್ಲಿ ಅಮೆರಿಕ ಮೂಲದ ಜೆಪಾಡ್ಸ್ ಇನ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಪಿಆರ್‌ಟಿಎಸ್ ಸಾರಿಗೆ ವ್ಯವಸ್ಥೆ ಕುರಿತು ಸಂಸ್ಥೆಯಿಂದ ಸಂಪೂರ್ಣ ಮಾಹಿತಿ ಪಡೆದಿದ್ದು, ಪಿಆರ್‌ಟಿಎಸ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಎದುರಾಗುವ ಸಾಧಕ-ಭಾದಕಗಳ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Related Articles
Advertisement
ಜೆಪಾಡ್ಸ್ ಇನ್ ಸಂಸ್ಥೆ 50 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ಕಾಮಗಾರಿ ನಡೆಸುವುದಾಗಿ ತಿಳಿಸಿದ್ದು, ಸಂಚಾರ ಆರಂಭವಾದ ನಂತರ 3-4 ವರ್ಷ ಪ್ರಯಾಣಿಕರಿಂದ ಪಡೆಯುವ ಪ್ರಯಾಣ ದರದಲ್ಲಿ ನಿಗದಿತ ಮೊತ್ತವನ್ನು ಸಂಸ್ಥೆಗೆ ನೀಡಬೇಕು ಎಂದು ಕರಾರು ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದರ ವಿಶೇಷ? ಪೋಡ್‌ಕಾರ್ ಅಂತಲೂ ಕರೆಯುವ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ಕಾರಿಗಿಂತಲೂ ಕೊಂಚ ದೊಡ್ಡ ಗಾತ್ರದ ಸ್ವಯಂಚಾಲಿತ ವಾಹನಗಳಾಗಿವೆ. ಈ ವಾಹನ 3ರಿಂದ 6 ಪ್ರಯಾಣಿಕರನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರುತ್ತವೆ. ಮೆಟ್ರೋ ರೀತಿ ಇಲ್ಲೂ ಎಲಿವೇಟೆಡ್ ಮಾರ್ಗದ ಅಗತ್ಯವಿದ್ದು, ಮಾರ್ಗದ ಕೆಳ ಭಾಗದಲ್ಲಿ ಕೇಬಲ್ ಅಳವಡಿಸಲಾಗುತ್ತದೆ. ಕೆಲವೆಡೆ ದೊಡ್ಡ ಗಾತ್ರದ ವಾಹನಗಳೂ ಬಳಕೆಯಲ್ಲಿದ್ದು, ಇಲ್ಲೂ ಸುರಂಗ ಮಾರ್ಗ ನಿರ್ಮಿಸಲಾಗುತ್ತದೆ. ಜೆಪಾಡ್ಸ್ ಇನ್ ಸಂಸ್ಥೆ ಪಿಆರ್‌ಟಿಎಸ್ ಯೋಜನೆ ಪ್ರಸ್ತಾವ ಸಲ್ಲಿಸಿದ್ದು, ಯೋಜನೆಯ ಸಾಧಕ-ಬಾಧಕಗಳ ಕುರಿತು ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವೈಟ್‌ಫೀಲ್ಡ್ ಭಾಗದಲ್ಲಿಯೇ ವಾಹನದ ಪರೀಕ್ಷಾರ್ಥ ಸಂಚಾರ ಆರಂಭಿಸಲು ಸೂಚಿಸಲಾಗಿದೆ.
-ಜಿ. ಪದ್ಮಾವತಿ, ಮೇಯರ್