Advertisement

ವೈಯಕ್ತಿಕ ಬದುಕಿಗೆ ಬಳಕೆಯಾಗದ ರಾಜಕಾರಣ

05:16 PM Jun 01, 2018 | |

ಸಾಗರ: ಅಂದು ನಾನು ರಾಜಕೀಯದಲ್ಲಿ ವಿಧಾನಸಭೆಗೆ ಸ್ಪರ್ಧಿಯಾದುದು ತೀರಾ ಆಕಸ್ಮಿಕ. ಚುನಾವಣೆಯ ವೆಚ್ಚಗಳನ್ನು ಕೂಡ ನಾನು ನಿರ್ವಹಿಸಲಿಲ್ಲ. ಈ ರೀತಿಯಲ್ಲಿ ಗೆಲುವನ್ನು ತಂದುಕೊಟ್ಟಿದ್ದು ಜನರು ಹಾಗೂ ಅಭಿಮಾನಿಗಳಾದುದರಿಂದ ರಾಜಕೀಯ ಕ್ಷೇತ್ರದ ಗೌರವ ಧನ, ವೇತನ, ನಿವೃತ್ತಿ ವೇತನಗಳೂ ಸೇರಿದಂತೆ ರಾಜಕಾರಣದ ಆದಾಯವನ್ನು ನಾನು ಸಂಪೂರ್ಣವಾಗಿ ಜನೋಪಯೋಗಿ ಕೆಲಸಕ್ಕೆ ಬಳಸುತ್ತಿದ್ದೇನೆಯೇ ವಿನಃ ಮನೆವಾರ್ತೆಗಳಿಗಲ್ಲ ಎಂದು ಮಾಜಿ ಶಾಸಕ ಎಲ್‌.ಟಿ. ತಿಮ್ಮಪ್ಪ ತಿಳಿಸಿದರು.

Advertisement

ಮಡಸೂರು ಲಿಂಗದಹಳ್ಳಿಯ ಅವರ ಸ್ವಗೃಹದಲ್ಲಿ ಎಲ್‌ಟಿ. ಹೆಗಡೆ ಅವರಿಗೆ 90 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡ ನನಗೆ ಶ್ರೀಧರಸ್ವಾಮಿಗಳು ಹಾಗೂ ರಾಮಚಂದ್ರಾಪುರ ಮಠದ ಹಿಂದಿನ ಸ್ವಾಮಿಗಳ ಆಶೀರ್ವಚನ ಸಿಕ್ಕಿದ್ದು ದಾರಿದೀಪವಾಯಿತು. ನನ್ನನ್ನು ಈ ಮಟ್ಟಕ್ಕೆ ತಂದಿಟ್ಟ ಜನರಿಗೆ ನಾನು ಋಣಿಯಾಗಿರಬೇಕು. ಅಂದು ಸಮಾಜದ ಒಳಿತಿಗಾಗಿ ಕಟ್ಟಿದ ಸಂಸ್ಥೆಗಳು ಇಂದು ಕೂಡ ಚೆನ್ನಾಗಿ ನಡೆಯುತ್ತಿರುವುದು ನನಗೆ ಅತ್ಯಂತ ತೃಪ್ತಿ ನೀಡುವ ಅಂಶವಾಗಿದೆ ಎಂದರು. 

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಮಾತನಾಡಿ, ರಾಜಕಾರಣದ ಮಗ್ಗುಲು ಬದಲಾಗಿ ಅದೊಂದು ವಿಷಮ ವೃತ್ತದಂತೆ ಕಾಣುತ್ತಿದ್ದರೆ ಎಲ್‌.ಟಿ. ಹೆಗಡೆ ಅಂತವರು ತಮ್ಮ ಧಾರ್ಮಿಕ ನಂಬಿಕೆ, ನಡತೆಗಳ ಮೂಲಕವೇ ಸಮಾಜದ ಮಾನ್ಯತೆ ಪಡೆದಿದ್ದಾರೆ. ಅಂದು ನಮ್ಮೂರಿನ ಶಾಸಕರು “ಏಕಾದಶಿ ಶಾಸಕರು’ ಎಂದು ಕರೆಸಿಕೊಳ್ಳುತ್ತಿದ್ದರು ಎಂಬುದು ಈಗ ನಮಗೆ ಹೆಮ್ಮೆ ತರುವ ವಿಚಾರ ಎಂದರು.

ಆಪ್ಸ್‌ಕೋಸ್‌ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಸೂರ್ಯನಾರಾಯಣ ಖಂಡಿಕಾ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಹುಟ್ಟುಹಾಕಿದ ವಿವಿಧ ಸಂಸ್ಥೆಗಳ ಸಂಸ್ಥಾಪನೆಯಲ್ಲಿ ಎಲ್‌.ಟಿ.ಹೆಗಡೆಯವರ ಪಾತ್ರವಿದೆ. ಅವರ ಮಾರ್ಗದರ್ಶನ, ಸ್ಪಷ್ಟ ಚಿಂತನೆಗಳನ್ನು ನಾವು ಆಪ್ಸ್‌ಕೋಸ್‌, ತೋಟಗಾರ್ಸ್‌ನಂತ ಸಂಸ್ಥೆಗಳ ಬೆಳವಣಿಗೆಯಲ್ಲಿ ನೋಡಿದ್ದೇವೆ ಎಂದರು.

Advertisement

ಜೋಶಿ ಫೌಂಡೇಶನ್‌ನ ಅಬಸೆ ದಿನೇಶ್‌ ಕುಮಾರ್‌ ಜೋಶಿ, ಬ್ರಾಹ್ಮಣ ಮಹಾಸಭಾದ ಮ. ಸ. ನಂಜುಂಡಸ್ವಾಮಿ, ಸಹಕಾರಿ ಧುರೀಣ ಎಚ್‌. ಎಸ್‌. ಮಂಜಪ್ಪ ಸೊರಬ, ತೋಟಗಾರ್ಸ್‌ ಅಧ್ಯಕ್ಷ ಕೆ.ಸಿ. ದೇವಪ್ಪ ಮತ್ತಿತರರು ಮಾತನಾಡಿದರು. ಸಹಕಾರಿ ಕ್ಷೇತ್ರದ ಆರ್‌.ಎಸ್‌. ಗಿರಿ, ಸಾಗರ ಪಿಎಲ್‌ಡಿಬಿ ಅಧ್ಯಕ್ಷ ಪಿ.ಎನ್‌. ಸುಬ್ರಾವ್‌, ಅಶ್ವಿ‌ನಿಕುಮಾರ್‌, ವೀಣಾ ಬೆಳೆಯೂರು, ಸೀತಾರಾಂ ಕಟ್ಟಿನಕೆರೆ ಮತ್ತಿತರರು ಇದ್ದರು. ಎಲ್‌ .ಟಿ. ತಿಮ್ಮಪ್ಪ ಸ್ವಾಗತಿಸಿದರು. ಹು.ಭಾ. ಅಶೋಕ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next