Advertisement

ಯಡ್ತಾಡಿ: ಕೋರೆಗೆ ಬಿದ್ದು ಕಾರ್ಮಿಕ ನಾಪತ್ತೆ

10:13 AM Jan 27, 2020 | sudhir |

ಕೋಟ: ಸಾೖಬ್ರಕಟ್ಟೆ ಸಮೀಪ ಯಡ್ತಾಡಿ ಹೋರ್ವರ ಬೆಟ್ಟಿನಲ್ಲಿ ಕಲ್ಲುಕೋರೆಗೆ ಬಿದ್ದು ಕೂಲಿ ಕಾರ್ಮಿಕ, ಮಠದಬೆಟ್ಟು ನಿವಾಸಿ ಶಂಕರ ನಾಯ್ಕ (45) ನಾಪತ್ತೆಯಾದ ಘಟನೆ ಜ. 25ರಂದು ಸಂಭವಿಸಿದೆ.

Advertisement

ಈತ ಹಲವು ವರ್ಷದಿಂದ ಸಾೖಬ್ರಕಟ್ಟೆ, ಯಡ್ತಾಡಿ ಮುಂತಾದೆಡೆ ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ವಿಪರೀತ ಮದ್ಯ ವ್ಯಸನಿಯಾಗಿದ್ದ ಕಾರಣ ಮನೆಯಿಂದ ದೂರವಾಗಿದ್ದ ಎನ್ನಲಾಗಿದೆ.

ಶನಿವಾರ ಅಪರಾಹ್ನ ಈತ ಕೋರೆಗೆ ಬಿದ್ದಿರುವುದನ್ನು ಸ್ಥಳೀ ಯರು ಗಮನಿಸಿದ್ದು, ಬಳಿಕ ಸ್ಥಳೀಯ ಈಜುಗಾರರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಅನಂತರ ಅಗ್ನಿ ಶಾಮಕ ದಳದವರು ಆಗಮಿಸಿ ಹುಡುಕಿದರೂ ಪ್ರಯೋ ಜನವಾಗಲಿಲ್ಲ. ರವಿವಾರ ಕೂಡ ಶೋಧ ಮುಂದುವರಿಸಿದರೂ ಪತ್ತೆ ಹಚ್ಚಲಾಗಿಲ್ಲ. ಈತ ಆಕಸ್ಮಿಕವಾಗಿ ಬಿದ್ದಿದ್ದಾನೋ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಾನೋ ಎಂಬುದು ಖಚಿತವಾಗಿಲ್ಲ.

ಬ್ರಹ್ಮಾವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಪ್ರತಿವರ್ಷ ಮರುಕಳಿಸುವ ಘಟನೆ
ಈ ಕೋರೆ ಸರಿಯಾದ ಪರವಾನಿಗೆ ಇಲ್ಲದೆ ಸ್ಥಳೀಯ ಉದ್ಯಮಿಗಳ ಮೂಲಕ ಹತ್ತಾರು ವರ್ಷ ಕಾರ್ಯನಿರ್ವಹಿಸಲಾಗಿದ್ದು, ಸುಮಾರು 40-50 ಅಡಿ ಆಳವಿದೆ. ಅಪಾಯಕಾರಿ ನೀರಿನ ಹೊಂಡಗಳ ಸುತ್ತ ಕಡ್ಡಾಯವಾಗಿ ಬೇಲಿ ಅಳವಡಿಸಬೇಕು ಎನ್ನುವ ಕಟ್ಟುನಿಟ್ಟಿನ ಆದೇಶವಿದ್ದರೂ ಇಲ್ಲಿ ಮೂರು ದಿಕ್ಕುಗಳಲ್ಲಿ ತೆರೆದ ಸ್ಥಿತಿಯಲ್ಲಿದೆ. ಇದರ ಸಮೀಪದಲ್ಲೇ ಹಲವಾರು ಮನೆಗಳಿವೆ. ಸಾೖಬ್ರಕಟ್ಟೆ ಸುತ್ತಮುತ್ತ ಪ್ರತಿ ವರ್ಷ ಈ ರೀತಿಯ ಕೋರೆಗೆ ಬಿದ್ದು ಮೃತರಾಗುವ ಪ್ರಕರಣ ಮರುಕಳಿಸುತ್ತಿದ್ದು, ಮೂರ್‍ನಾಲ್ಕು ವರ್ಷದಲ್ಲಿ ಸುಮಾರು 8-10 ಮಂದಿ ಈ ರೀತಿ ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next