Advertisement

ವೃತ್ತಿ ಸಾಧನೆಯಿಂದ ವ್ಯಕ್ತಿಗೆ ಗೌರವ: ಡಾ|ಹೆಗ್ಗಡೆ

08:32 PM May 22, 2019 | Team Udayavani |

ಬೆಳ್ತಂಗಡಿ: ನಮ್ಮ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಮಾಡಿದಲ್ಲಿ ಭವಿಷ್ಯದಲ್ಲಿ ಉನ್ನತ ಸ್ಥಾನ ಪಡೆಯ ಬಹುದು ಎಂದು ಶ್ರೀ ಧ.ಮಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement

ಮಂಗಳವಾರ ಉಜಿರೆ ಎಸ್‌ಡಿಎಂ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜು ನಾಥ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರಂತರ ಪರಿಶ್ರಮದಿಂದ ಜೀವನದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು. ವೃತ್ತಿ ಕೇವಲ ಸಂಪಾದನೆಗೆ ಮಾತ್ರ ಸೀಮಿತ ವಾಗಿಸದೆ ಅದನ್ನು ಅನುಭವಿ ಬದುಕುವ ಹೊಸತನವನ್ನು ಕಂಡು ಕೊಳ್ಳಬೇಕಿದೆ. ಯಶಸ್ಸಿಗಾಗಿ ಎಲ್ಲ ಕ್ಷೇತ್ರದಲ್ಲಿ ಪೈಪೋಟಿ ನಾವಿಂದು ಕಾಣುತ್ತಿದೇªವೆ. ಪ್ರತಿಯೊಬ್ಬರೂ ಪ್ರಯತ್ನ ಶೀಲರಾಗಬೇಕು.

ಬದುಕನ್ನು ಪ್ರೀತಿಸಿ, ಮತ್ತು ಉನ್ನತವಾಗಿ ಬದುಕಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಉಡುಪಿಯ ರೋಬೋಸಾಫ್ಟ್‌ ಕಂಪನಿಯ ಮಾಲಕರಾದ ರೋಹಿತ್‌ ಭಟ್‌ ಮಾತನಾಡಿ, ಜೀವನ ಎಂಬುದು ಮ್ಯಾರಥಾನ್‌ ಇದ್ದಂತೆ. ವಿವಿಧ ಅವಕಾಶಗಳು ಬೇರೆ ಬೇರೆ ರೀತಿಯಲ್ಲಿ ಅರಸುತ್ತಾ ಬರುತ್ತದೆ. ಆದರೆ ನಾನು ಏನು ಮಾಡಬೇಕೆಂಬ ಆಯ್ಕೆ ನನ್ನಲ್ಲಿದ್ದರೆ ಮಾತ್ರ ನಾವು ಸಮಾಜದಲ್ಲಿ ಒಬ್ಬನಾಗದೆ ಸಮಾಜಕ್ಕೆ ಒಬ್ಬನಾಗಿ ಗುರುತಿಸಲು ಸಾಧ್ಯ ಎಂದರು.ನಾವು ಸಂಪಾದಿಸುವ ಹಾದಿಯಲ್ಲಿ ಸಮಾಜಕ್ಕೆ ಹಿಂದಿರುಗಿಸುವ ಬದ್ಧತೆ ನಮ್ಮಲ್ಲಿದ್ದರೆ ನೀವು ಸಮಾಜಕ್ಕೆ ಮಾದರಿಯಾಗುವುದರೊಂದಿಗೆ ಮತ್ತಷ್ಟು ಪ್ರತಿಭೆಗಳಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌ ಪ್ರಭಾಕರ್‌, ಕಾರ್ಯದರ್ಶಿ ಬಿ.ಯಶೋವರ್ಮ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ| ಅಶೋಕ್‌ ಕುಮಾರ್‌ ಟಿ. ವಾರ್ಷಿಕ ವರದಿ ವಾಚಿಸಿದರು. ಪ್ರೊ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಸ್ವಾಗತಿಸಿ, ಚೇತನ್‌ ಆರ್‌. ಅಥಿತಿಗಳ ಪರಿಚಯಿಸಿದರು. ಕೇವಲ್‌ ಎಂ. ಜೈನ್‌ ವಂದಿಸಿದರು.  ಯಷ್ಟಿಕಾ ಶೆಟ್ಟಿ ಮತ್ತು ಜಿತಿನ್‌ ಪೀಟರ್‌ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next