Advertisement
ಊರ, ಪರ ಊರಿನ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಧಾರ್ಮಿಕ ಕಾರ್ಯಕ್ರಮ ಪ್ರಯುಕ್ತ ದಿಶಾಹೋಮ, ಬಲಿಶಿಲಾ ಪ್ರತಿಷ್ಠೆ, ಅಧಿವಾಸ ಹೋಮ, ಧ್ವಜಕಲಶಾಭಿಷೇಕ, ಭೂತರಾಜರ ಪೂಜೆ ನಡೆಯಿತು.
ನಡೆಯುತ್ತಿದ್ದು ಇದರೊಂದಿಗೆ ಇನ್ನಿತರ ದೇವರ ಸೇವೆಗಳು ನಡೆಯುತ್ತಿವೆ.
Related Articles
ನಿತ್ಯ ಬೆಳಗ್ಗೆಯಿಂದ ರಾತ್ರಿಯವರೆಗೆ ಎಳ್ಳು, ರಾಗಿ, ಲಿಂಬು, ಹಣ್ಣು ಹಂಪಲುಗಳ ಪಾನೀಯವನ್ನು ಭಕ್ತರಿಗೆ ಉಚಿತವಾಗಿ
ನೀಡಲಾಗುತ್ತಿದೆ. ಈ ಎಲ್ಲ ಜ್ಯೂಸ್ ಗಳನ್ನು ಬೆಲ್ಲ , ಕರಿಮೆಣಸುಗಳಿಂದ ತಯಾರಿಸಲಾಗುತ್ತಿದೆ. ಯಜ್ಞ ನಾರಾಯಣ ಭಟ್ ಅವರ ಸೇವಾರ್ಥವಾಗಿ ಸೋಮವಾರ ಮೈಸೂರಿನಿಂದ ತರಿಸಿದ ಗಣಪತಿ ದೇವರ ಪ್ರಿಯವಾದ ಹಣ್ಣು ಬೇಲದ ಹಣ್ಣಿನ ಪಾನೀಯವನ್ನು ಭಕ್ತರಿಗೆ ವಿತರಿಸಲಾಯಿತು.
Advertisement
ಶಿಲ್ಪ ಕಲೆ ಆಕರ್ಷಣೆದೇವಸ್ಥಾನದ ಕಲ್ಲು ಮತ್ತು ಮರದ ಪಾರಂಪರಿಕ ವಿನ್ಯಾಸದ ಶಿಲ್ಪ ಕಲೆಗಳು ಭಕ್ತರ ಕಣ್ಮನ ಸೆಳೆಯುತ್ತಿದೆ. ದೇವಸ್ಥಾನದ ಆಕರ್ಷಕ ಶಿಲ್ಪ ಕಲೆಗಳನ್ನು ಕಣ್ತುಂಬಿಕೊಳ್ಳಲೆಂದೇ ದೂರದ ಊರುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮದ ಭಕ್ತರಿಗೆ ಅನುಕೂಲವಾಗಲೆಂದೇ ನಿತ್ಯ ಅಲೆವೂರು, ಹಿರಿಯಡಕ, ಉಡುಪಿ, ಓಂತಿಬೆಟ್ಟು, ಆತ್ರಾಡಿಯಿಂದ ಉಚಿತ ಬಸ್ ಸೇವೆ ನಡೆಯುತ್ತಿದೆ.