Advertisement
ಬಜಪೆ: ಪೆರ್ಮುದೆ ಹಾಲು ಉತ್ಪಾದಕರ ಸಹಕಾರ ಸಂಘವನ್ನು 1991ರಲ್ಲಿ ಇಲ್ಲಿನ ಎಕ್ಕಾರು ಗ್ರಾ.ಪಂ.ನ ಮೀನು ಮಾರುಕಟ್ಟೆಯ ಸಮೀಪದ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಯಿತು. ಭತ್ತ ಬೇಸಾಯ, ತರಕಾರಿ ಕೃಷಿಗೆ ಪೂರಕವಾಗಿ ಹೈನುಗಾರಿಕೆ ಇದ್ದಲ್ಲಿ ಮಾತ್ರ ಕೃಷಿಕರು ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದನ್ನು ಮನಗೊಂಡು ಸಂಘವನ್ನು ಆರಂಭಿಸಲಾಗಿತ್ತು.
ಪಿ.ಬಿ. ಪಿಂಟೋ ಅವರು ಊರಿನ ಕೃಷಿಕರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಬೆಳೆಸಲು ಹಾಗೂ ಲಾಭದಾಯಕವಾಗಲು ಹಾಲು ಉತ್ಪಾದನೆಗೆ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಗ್ರಾಮದವರನ್ನು ಒಟ್ಟು ಸೇರಿಸಿ ಈ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಗೆ ಕಾರಣರಾಗಿದ್ದರು.
Related Articles
ಸಂಘದ ಸದಸ್ಯರ ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ವರ್ಷದಲ್ಲಿ ರೇಬಿಸ್ ವಿರುದ್ಧ ಲಸಿಕೆ, 6ತಿಂಗಳಿಗೊಮ್ಮೆ ಕಾಲುಬಾಯಿ ಚುಚ್ಚುಮದ್ದು, ಜಂತುಹುಳು ಮಾತ್ರೆ ವಿತರಣೆ, ಕ್ಯಾಲ್ಸಿಯಂ ನೀಡಲಾಗುತ್ತದೆ. ಕೆ.ಎಂ.ಎಫ್. ಹಿಂಡಿಯೊಂದಿಗೆ ಲೋಕಲ್ ಆಗಿ ತಯಾರಿಸಿದ ವಿವಿಧ ಕಾಳುಗಳನ್ನು ಹೊಂದಿದ ಹಿಂಡಿಯನ್ನು ನೀಡಲಾಗುತ್ತದೆ. ದನಗಳಿಗೆ ವಿಮೆಯನ್ನು ಕೂಡ ಮಾಡಲಾಗಿದೆ. ಇದಕ್ಕೆ ಕೆಎಂಎಫ್ ಸಹಕಾರ ನೀಡುತ್ತಿದೆ. ವರ್ಷಕ್ಕೆ ತಲಾ 3 ಲಕ್ಷದಂತೆ ಸಂಘ ಲಾಭ ಗಳಿಸುತ್ತಾ ಬಂದಿದೆ. ಹಾಲು “ಎ’ ಗ್ರೇಡ್ ಪಡೆದಿದೆ. ಆಡಿಟ್‌ನಲ್ಲಿಯೂ ಕೂಡ ಸಂಘ “ಎ” ಗ್ರೇಡ್ ಪಡೆದಿದೆ. ಹಾಲು “ಎ’ ಗ್ರೇಡ್ ಇದ್ದ ಕಾರಣ ಸ್ಥಳೀಯ ಗ್ರಾಹಕರಿಂದ ಒಳ್ಳೆಯ ಬೇಡಿಕೆ ಇದೆ.
Advertisement
ಸಂಘದ ಎಲ್ಲ ಸದಸ್ಯರ ದನಗಳು ಆರೋಗ್ಯವಂತಾಗಿರಲು ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತದೆ. ಇದರಿಂದ ಹಾಲು ಆರೋಗ್ಯಪೂರ್ಣವಾಗಿರಲಿದ್ದು ಉತ್ತಮ ದರ ಕೂಡ ಸಿಗಲಿದೆ. ಸಂಘವೂ ಲಾಭದಾಯಕವಾಗುತ್ತದೆ. ಸದಸ್ಯರೆಲ್ಲರ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ.– ಲೋರೆನ್ಸ್ ಡಿ’ಕುನ್ಹಾ,ಅಧ್ಯಕ್ಷರು, ಪೆರ್ಮುದೆ ಹಾಲು ಉತ್ಪಾದಕರ ಸಹಕಾರ ಸಂಘ. ಅಧ್ಯಕ್ಷರು
ಅಲೊ³àನ್ಸ್ ಫೆರ್ನಾಂಡಿಸ್ ,ಆಲ್ಬರ್ಟ್ ಪಿಂಟೋ ಅವರು ಅಧ್ಯಕ್ಷರಾಗಿದ್ದರು. ಪ್ರಸ್ತುತ ಲೋರೆನ್ಸ್ ಡಿಕುನ್ಹಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯದರ್ಶಿ
ಸ್ಥಾಪನೆಯಾದ ದಿನದಿಂದ ಇಂದಿನ ತನಕ ಸ್ಟೇನಿ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. -ಸುಬ್ರಾಯ ನಾಯಕ್, ಎಕ್ಕಾರು