Advertisement

ಗ್ರಾಮದ ಸ್ವಾವಲಂಬನೆ, ಅಭಿವೃದ್ಧಿಗೆ ಕಾರಣವಾದ ನರೇಗಾ ಯೋಜನೆ- ಪೆರ್ಮುದೆ ಗ್ರಾಮ ಪಂಚಾಯತ್‌

01:12 PM Jul 10, 2022 | Team Udayavani |

ಬಜಪೆ: ಗ್ರಾಮದ ಅಭಿವೃದ್ಧಿಗಾಗಿ ಜನರು ಸದಾ ಸರಕಾರ, ಜನಪ್ರತಿನಿಧಿಗಳನ್ನೇ ಅವಲಂಬಿಸಬೇಕಾಗಿಲ್ಲ. ಸರಕಾರದ ಯೋಜನೆಗಳನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮ ಅಭಿವೃದ್ಧಿಯಲ್ಲಿ ಜನರ ಭಾಗಿಯಾಗಬಹುದು ಎನ್ನುವುದಕ್ಕೆ ಉದಾಹರಣೆ ಪೆರ್ಮುದೆ ಗ್ರಾಮದ ಅಭಿವೃದ್ಧಿ.

Advertisement

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ಜನರು ತೊಡಗಿಸಿಕೊಂಡಿದ್ದಾರೆ.

ಪೆರ್ಮುದೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೆಚ್ಚಿನ ಜಾಗ ಕೈಗಾರಿಕೆಗೆ ಭೂಸ್ವಾಧೀನತೆಗೊಂಡಿದೆ. ಆದರೂ ಕೂಡ ಜಗ್ಗದೇ ಕಾಮಗಾರಿ ಕೈಗೊಂಡಿರುವ ಇಲ್ಲಿನ ಗ್ರಾಮಸ್ಥರ ಸ್ವಾಭಿಮಾನ ಬದುಕಿಗೆ ನಿದರ್ಶನವಾಗಿದೆ.

13 ವರ್ಷಗಳಲ್ಲಿ ಪೆರ್ಮುದೆ ಗ್ರಾಮ ಪಂಚಾಯತ್‌ ನಲ್ಲಿ 92 ಕಾಮಗಾರಿಗಳು ನಡೆದ ಒಟ್ಟು 50,90,408.52 ರೂ.ಗಳ ಅನುದಾನ ವಿನಿಯೋಗವಾಗಿದೆ. ಇದರಲ್ಲಿ ಕೂಲಿ ಮೊತ್ತ ಹಾಗೂ ಸಾಮಗ್ರಿಗಳ ಮೊತ್ತವೂ ಸೇರಿದೆ.

ನರೇಗಾ ಯೋಜನೆಯಡಿಯಲ್ಲಿ 451 ಕುಟುಂಬಗಳು ನೋಂದಣಿ ಮಾಡಿದ್ದು, 274 ಕುಟುಂಬಗಳು ಉದ್ಯೋಗ ಚೀಟಿಯನ್ನು ಪಡೆದಿದೆ. ಯೋಜನೆಯಡಿ 73 ಕುಟುಂಬಗಳು ಕ್ರೀಯಾಶೀಲರಾಗಿದ್ದಾರೆ.

Advertisement

ನರೇಗಾ ಯೋಜನೆಯ ದಾಪುಗಾಲು

ದ್ರವ ತ್ಯಾಜ್ಯ ಗುಂಡಿ, ಎರೆಹುಳ ಗೊಬ್ಬರ ತೊಟ್ಟಿ, ತೆರೆದ ಬಾವಿ ರಚನೆ, ಕೃಷಿ ಹೊಂಡ, ಇಂಗು ಗುಂಡಿ ರಚನೆ, ಕೋಳಿ ಶೆಡ್‌, ಮೀನು ಸಾಕಾಣಿಕೆ ಹೊಂಡ, ಕೊಳವೆ ಬಾವಿ ಮರಪೂರಣ ಘಟಕ, ದನದ ಹಟ್ಟಿ, ಗೊಬ್ಬರ ಗುಂಡಿ, ಗೋಬರ್‌ ಗ್ಯಾಸ್‌ ಗುಂಡಿ, ಅಡಿಕೆ, ತೆಂಗು, ಕಾಳುಮೆಣಸು, ಕೋಕೋ, ವೀಳ್ಯದೆಲೆ, ಗೇರು, ಮಲ್ಲಿಗೆ, ತಾಳೆ, ಮಾವು, ಪಪ್ಪಾಯ, ನುಗ್ಗೆ, ಅಂಗಾಂಶ ಬಾಳೆ ಕೃಷಿ, ಪೌಷ್ಟಿಕ ಕೈ ತೋಟ, ವೈಯಕ್ತಿಕ ಹಾಗೂ ಸಾರ್ವಜನಿಕವಾಗಿ ಕಾಮಗಾರಿ ಮಾಡಲು ನರೇಗಾ ಯೋಜನೆಯಲ್ಲಿ ಅವಕಾಶವಿದೆ.

ಸರಕಾರಿ ಶಾಲೆ ಅಭಿವೃದ್ಧಿ ನರೇಗಾ ಬಳಕೆ

ನರೇಗಾ ಯೋಜನೆ ಮೂಲಕ ಸರಕಾರಿ ಶಾಲೆ, ಕಾಲೇಜು, ವಸತಿಗಳ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ಕ್ರೀಡಾಂಗಣಗಳನ್ನು ನಿರ್ಮಿಸಲು ಈಗಾಗಲೇ ಸುತ್ತೋಲೆ ಬಂದಿದೆ. ರನ್ನಿಂಗ್‌ ಟ್ರಾಕ್ಸ್‌, ಕಬಡ್ಡಿ, ಖೋಖೋ, ವಾಲಿಬಾಲ್‌, ಬಾಸ್ಕೆಟ್‌ ಬಾಲ್‌ ಕೋರ್ಟ್‌ಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಿದೆ.

ಪಾರದರ್ಶಕತೆ ಮುಖ್ಯ: ಕೃಷಿಗೆ ಹೆಚ್ಚು ಮಹತ್ವವನ್ನು ನೀಡಿ ಸ್ವಾವಲಂಬನೆ ಬದುಕಿಗೆ ಹಾದಿ ಮಾಡಿದೆ. ಮನಸ್ಸಿದ್ದರೆ ಎಲ್ಲವೂ ಸಾಧ್ಯ. ಅವಕಾಶಗಳು ಅನೇಕ. ಗ್ರಾಮದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರದ ಬಗ್ಗೆ ಪರಿಚರಿಸಲು ನರೇಗಾ ಯೋಜನೆ ಹೆಚ್ಚು ಸಹಕಾರಿಯಾಗಿದೆ. ಇಲ್ಲಿನ ಕಾಮಗಾರಿಗೆ ಶಿಸ್ತು ಮುಖ್ಯ, ಪಾರದರ್ಶಕ ಮುಖ್ಯ ಅದು ಇದ್ದಲ್ಲಿ ನರೇಗಾ ಹಣ ಬರುವುದರಲ್ಲಿ ತೊಂದರೆಯಾಗದು. – ಪೀಟಾರ್‌ ಸೆರಾವೋ, ನರೇಗಾ ಫ‌ಲಾನುಭವಿ

Advertisement

Udayavani is now on Telegram. Click here to join our channel and stay updated with the latest news.

Next