ಬೆಂಗಳೂರು: ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ಪ್ರವಾಸಿ ಗೈಡ್ ಗಳಿಗೆ 5 ಸಾವಿರ ಸಹಾಯಧನ ನೀಡಲಾಗುವುದು. ಅಬಕಾರಿ ಸನ್ನದು ಶುಲ್ಕ ಎರಡು ಕಂತಿನಲ್ಲಿ ಕಟ್ಟಲು ಅವಕಾಶ ನೀಡಲಾಗುವುದು, ಜೂನ್ ತಿಂಗಳ ಮೋಟಾರ್ ವಾಹನ ತೆರಿಗೆ 50% ರಷ್ಟು ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು.
ಜೋಗದ ಅಭಿವೃದ್ಧಿಗೆ 185 ಕೋಟಿ ರೂ ಟೆಂಡರ್ ಕರೆಯಲಾಗಿದೆ. ಕೆಪಿಸಿಎಲ್ ನಿಂದ ಟೆಂಡರ್ ಕರೆಯಲಾಗಿದೆ. ವರ್ಷದ ರಜಾ ದಿನಗಳಲ್ಲಿ ಬೇಸಿಗೆಯಲ್ಲಿಯೂ ನಿರಂತರ ನೀರು ಹರಿಸಲಾಗುವುದು. ಹಿಂದೆ ವಿದ್ಯುತ್ ಚಕ್ತಿಗೆ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಈಗ ಬೇರೆ ಬೇರೆ ಮೂಲದಿಂದ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ? ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?
ಗೋವಾ ಮತ್ತು ಕೇರಳ ಟೂರಿಸ್ಟ್ ಗೆ ಜಲ ಮಾರ್ಗದ ಮೂಲಕ ಗೇರುಸೊಪ್ಪದವರೆಗೆ ಜಲ ಮಾರ್ಗ 35 ಕಿ.ಮಿ ಮೂಲಕ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಗೋವಾ ಮತ್ತು ಕೇರಳ ಗೋವಾ ಪ್ರವಾಸಿಗರು ಇದನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷಿತ ಇಲಾಖೆಯನ್ನಾಗಿ ಪರಿಗಣಿಸಿದ್ದಾರೆ. ನಾನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದೇನೆ. ಶೆ 14.5 ರಷ್ಟು ಜಡಿಪಿ ರಾಜ್ಯಕ್ಕೆ ಬರುತ್ತಿದೆ. ಇನ್ನೂ ಸಾಕಷ್ಟು ಪ್ರವಾಸೋದ್ಯಮ ಅವಕಾಶ ಇದೆ ಎಂದು ಸಚಿವರು ಹೇಳಿದರು.
ಜಂಗಲ್ ಲಾಡ್ಜಸ್ ತೆರೆಯಲು ತೀರ್ಮಾನ ಮಾಡಲಾಗಿದೆ. ಇಲಾಖೆಗೆ ಹಣಕಾಸಿನ ಕೊರತೆ ಇದೆ. ಪ್ರವಾಸೋದ್ಯಮ ದೃಷ್ಟಿಯಿಂದ 1000 ಕೋಟಿ ರೂ ಬೇಕಿದೆ. ಹಣಕಾಸು ಇಲಾಖೆಗೆ ಬೇಡಿಕೆ ಇಟ್ಟಿದ್ದೆವೆ ಎಂದು ಯೋಗೇಶ್ವರ್ ಹೇಳಿದರು.