Advertisement

ಲಾಡ್ಜ್ ಗಳಲ್ಲಿ ಆರೈಕೆ ಕೇಂದ್ರ ಆರಂಭಿಸಲು ಅನುಮತಿ

01:20 PM Apr 23, 2021 | Team Udayavani |

ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಲಾಡ್‌jಗಳೊಂದಿಗೆ ಒಪ್ಪಂದ ಮಾಡಿಕೊಂಡುಕೊರೊನಾ ಸೋಂಕಿತರ ಆರೈಕೆ ಕೇಂದ್ರ/ಎರಡನೇ ಹಂತದ ಆಸ್ಪತ್ರೆಗಳನ್ನು (ಸ್ಟೆಪ್‌ಡೌನ್‌)ಆರಂಭಿಸಲು ರಾಜ್ಯಸರ್ಕಾರ ಅನುಮತಿನೀಡಿದೆ.

Advertisement

ಸೋಂಕಿತರ ಹಾಸಿಗೆ ಕೊರತೆ ನೀಗಿಸುವನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು,ಕಳೆದ ವರ್ಷದಂತೆಯೇ ಈ ಬಾರಿಯೂಐಶಾರಾಮಿ ಸೇರಿ ವಿವಿಧ ಖಾಸಗಿ ಲಾಡ್ಜ್ಗಳಲ್ಲಿಸೋಂಕಿತರ ಆರೈಕೆ ಕೇಂದ್ರ ಆರಂಭವಾಗಲಿವೆ.ಖಾಸಗಿ ಆಸ್ಪತ್ರೆಯಲ್ಲಿ ಸಣ್ಣ ಪ್ರಮಾಣದಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರುಅಥವಾ ಸೋಂಕಿನ ಚೇತರಿಕೆಹಾದಿಯಲ್ಲಿರುವವರು ತಮ್ಮ ಸ್ವಂತ ಖರ್ಚಿನಲ್ಲಿಆರೈಕೆಯಲ್ಲಿರಬಹುದಾಗಿದೆ.

ಕೆಪಿಎಂಇ ಕಾಯ್ದೆಯಡಿನೋಂದಣಿಯಾಗಿರುವ ಆಸ್ಪತ್ರೆಗಳು ತಮ್ಮವ್ಯಾಪ್ತಿಯ ಜಿಲ್ಲಾ ಆರೋಗ್ಯ ಇಲಾಖೆ,ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳಗಮನಕ್ಕೆ ತಂದು ಸಮೀಪದ ಖಾಸಗಿ ಆಸ್ಪತ್ರೆಜತೆ ಒಪ್ಪಂದ ಮಾಡಿಕೊಂಡು ಸ್ಟೆಪ್‌ ಡೌನ್‌ಆಸ್ಪತ್ರೆ ಆರಂಭಿಸಬಹುದಾಗಿದೆ.

ಇನ್ನು ಲಾಡ್‌jಗಳಲ್ಲಿ ಆರೈಕೆ ಕೇಂದ್ರಕ್ಕೆ ಬೇಕಾದ ಅಗತ್ಯವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಹಾಗೂಮುಂದಿನ ದಿನಗಳಲ್ಲಿ ನಿರ್ವಹಣೆಯಸಂಪೂರ್ಣ ಜವಾಬ್ದಾರಿ ಖಾಸಗಿ ಆಸ್ಪತ್ರೆಗಳದ್ದೆಆಗಿರುತ್ತದೆ.

ಇಲ್ಲಿ ಖಾಸಗಿ ಆಸ್ಪತ್ರೆಗಳು ಟೆಲಿ ಮೆಡಿಸಿನ್‌,ಸಿಬ್ಬಂದಿ ಮೂಲಕ ಸೋಂಕಿತರ ಆರೈಕೆ/ ನಿಗಾವಹಿಸಲಿದ್ದಾರೆ. 24/7 ತುರ್ತು ಸೇವೆ ಸಿಬ್ಬಂದಿಲಭ್ಯವಿರಬೇಕು. ಅಲ್ಲದೆ, ಸೋಂಕಿತರಆರೋಗ್ಯದಲ್ಲಿ ತೀವ್ರ ವ್ಯತ್ಯಯವಾದರೆರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲುಆ್ಯಂಬುಲೆನ್ಸ್‌ ಇರಬೇಕು.

Advertisement

ಲಾಡ್ಜ್ಸಿಬ್ಬಂದಿಯನ್ನು ಸೋಂಕಿತರ ಸಂಪರ್ಕಕ್ಕೆಬಾರದಂತೆ ಕ್ರಮವಹಿಸಬೇಕು. ಸೋಂಕಿತವ್ಯಕ್ತಿಯ ಕೋಣೆಗೆ ತೆರಳುವವರ ಸುರಕ್ಷತೆಗೆಕ್ರಮವಹಿಸಬೇಕು. ಆಸ್ಪತ್ರೆಗಳು ಈ ಆರೈಕೆಕೇಂದ್ರಕ್ಕೆ ದಾಖಲಾದ, ಬಿಡುಗಡೆಯಾದ, ಚಿಕಿತ್ಸೆಪಡೆಯುತ್ತಿರುವ ಸೋಂಕಿರ ಮಾಹಿತಿಯನ್ನುಪ್ರತಿನಿತ್ಯ ಬಿಬಿಎಂಪಿ, ಜಿಲ್ಲಾ ಕೊರೊನಾಸೋಂಕಿತರ ಕಣ್ಗಾವಲು ಅಧಿಕಾರಿಗೆ ಪ್ರತಿನಿತ್ಯಮಾಹಿತಿ ನೀಡಬೇಕು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next