ಮುಂಬಯಿ, ಮೇ 6: ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಫಲಿತಾಂಶಗಳ ಘೋಷಣೆಯನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಸಾಗಿಸಲು ಸಿಬಂದಿ ಚಲನೆಗೆ ಅವಕಾಶ ನೀಡಿದೆ.
ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಫಲಿತಾಂಶ ಗಳನ್ನು ಜೂನ್ 10 ರೊಳಗೆ ಪ್ರಕಟಿಸುವುದು ಇಲಾಖೆಗೆ ಕಡ್ಡಾಯವಾಗಿದೆ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖೀಸಿ, ಇಲಾಖೆ ತನ್ನ ಕಾರ್ಮಿಕರು, ಶಿಕ್ಷಕರು ಮತ್ತು ಶಾಲಾ ಸಿಬಂದಿಗೆ ಕೆಲಸ ಮಾಡಲು ರಾಜ್ಯಕ್ಕೆ ಅನುಮತಿ ನೀಡಿದೆ. ಶಾಲೆಗಳು ಅಥವಾ ರಕ್ಷಣಾ ಕೇಂದ್ರಗಳಲ್ಲಿ ಪತ್ರಿಕೆಗಳು ಇದ್ದಲ್ಲಿ ಅವುಗಳನ್ನು ಪರೀಕ್ಷಕರಿಗೆ ಸಾಗಿಸಬಹುದು. ಅಲ್ಲದೆ ಅವರು ಅವುಗಳನ್ನು ಮೌಲ್ಯಮಾಪನ ಮಾಡಬಹುದು.
ಇದಲ್ಲದೆ ಈ ಮೌಲ್ಯಮಾಪನ ಪತ್ರಿಕೆಗಳನ್ನು ಉದ್ದೇಶಪೂರ್ವಕವಾಗಿ ನಿಯೋಜಿಸಲಾಗಿರುವ ಸಿಬ್ಬಂದಿಗಳ ಮೂಲಕ ಮಾಡರೇಟರ್‌ಗಳಿಗೆ ಮಿತಗೊಳಿಸುವಿಕೆಗಾಗಿ ಕಳುಹಿಸಬಹುದು ಎಂದು ಇಲಾಖೆಯು ಎಲ್ಲಾ ಪುರಸಭೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿ ಆದೇಶಿಸಿದೆ.
ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ ಮುಂಬಯಿ, ಥಾಣೆ, ರಾಯಗಡ್ ಮತ್ತು ಪಾಲ್ ಘರ್ ನ 3.5 ಲಕ್ಷ ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ. ರಾಜ್ಯ ಸರಕಾರದ ಅಧಿಕೃತ ಪಟ್ಟಿಯ ಪ್ರಕಾರ ರಾಯಗಢ ಆರೆಂಜ್ ವಲಯದಲ್ಲಿದ್ದರೆ, ಇತರ ಪ್ರದೇಶಗಳು ಕೆಂಪು ವಲಯದಲ್ಲಿವೆ.
ಒಮ್ಮೆ ಅನುಮತಿಗಳು ಜಾರಿಗೆ ಬಂದರೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶೀಘ್ರದÇÉೇ ನಡೆದು ಫಲಿತಾಂಶಗಳನ್ನು ಸಮಯಕ್ಕೆ ಘೋಷಿಸಬಹುದು ಎಂದು ಮಂಡಳಿ ಆಶಿಸುತ್ತಿದೆ. ರಾಜ್ಯ ಮಂಡಳಿ ಸಾಮಾನ್ಯವಾಗಿ ಮೇ ಕೊನೆಯ ವಾರದಲ್ಲಿ 12 ನೇ ತರಗತಿ ಫಲಿತಾಂಶಗಳನ್ನು ಘೋಷಿಸುತ್ತದೆ. 10 ನೇ ತರಗತಿ ಫಲಿತಾಂಶಗಳು ಜೂನ್ ಎರಡನೇ ವಾರದಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಶಿಕ್ಷಕರು ಮತ್ತು ಇತರ ಸಿಬಂದಿ ತಮ್ಮ ಸ್ವಂತ ವಾಹನಗಳನ್ನು ಅಥವಾ ಅವರಿಗೆ ಒದಗಿಸಿದ ಬಾಡಿಗೆ ವಾಹನಗಳನ್ನು ಬಳಸಬಹುದು.