Advertisement

ಒಂದೇ ಅರ್ಜಿ ಎಲ್ಲ ಇಲಾಖೆಗಳ ಅನುಮತಿ ವ್ಯವಸ್ಥೆ

10:19 AM Mar 02, 2020 | mahesh |

ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವ್ಯಾಪಾರ ಸರಳೀಕರಣಗೊಳಿಸುವ (ಈಸ್‌ ಆಫ್‌ ಡ್ನೂಯಿಂಗ್‌ ಬ್ಯುಸಿನೆಸ್‌) ಉದ್ದೇಶದಿಂದ ಸ್ವಾಧೀನಾನುಭವ ಪತ್ರ, ಚಾಲ್ತಿ ಪ್ರಮಾಣಪತ್ರ, ವ್ಯಾಪಾರ ಆರಂಭಕ್ಕೆ ಸಂಬಂಧಿಸಿದಂತೆ ನೀಡಲಾಗುವ ನಿರಾಕ್ಷೇಪಣ ಪತ್ರ ಮುಂತಾದುವುಗಳು ಒಂದೇ ಕಡೆಯಲ್ಲಿ, ಒಂದೇ ಅರ್ಜಿಯಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಆರಂಭಿಸುವ ಕಾರ್ಯ ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿದೆ. ಬಿಬಿಎಂಪಿ ಮಾದರಿಯಲ್ಲೇ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲೂ ಕಟ್ಟಡ ನಕ್ಷೆ ಮಂಜೂರಾತಿ, ಕುಡಿಯುವ ನೀರಿನ ಸಂಪರ್ಕ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

Advertisement

ಹೂಡಿಕೆಸ್ನೇಹಿ ವಾತಾವರಣವಿದ್ದಾಗ ಉದ್ಯಮಗಳು, ವಾಣಿಜ್ಯ ವ್ಯವಹಾರಗಳು ಯಾವುದೇ ಒಂದು ಪ್ರದೇಶದಲ್ಲಿ ಆಕರ್ಷಿತಗೊಳ್ಳಲು ಸಾಧ್ಯವಾಗುತ್ತದೆ. ಹೂಡಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತವೆ. ಎಲ್ಲಿ ಹೂಡಿಕೆಗಳಿಗೆ ಪ್ರತಿಕೂಲ ಪರಿಸ್ಥಿತಿ, ಅನುಮತಿ ವ್ಯವಸ್ಥೆಗಳಲ್ಲಿ ಅಡೆತಡೆಗಳು ಇರುತ್ತವೆಯೂ ಅಲ್ಲಿ ಕೈಗಾರಿಕೆಗಳು, ವಾಣಿಜ್ಯ ವ್ಯವಹಾರಗಳು, ಯೋಜನೆಗಳು ಬರಲು ಹಿಂದೇಟು ಹಾಕುತ್ತವೆ. ಇದರಲ್ಲಿ ಮುಖ್ಯವಾದ ಅಂಶವೆಂದರೆ ಸರಕಾರಿ ಇಲಾಖೆಗಳಿಂದ ಉದ್ಯಮಗಳಿಗೆ ಅವಶ್ಯವಾಗಿರುವ ಅನುಮತಿ, ನಿರಾಕ್ಷೇಪಣ ಪತ್ರಗಳು. ಅನುಮತಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾದಾಗ ಹೂಡಿಕೆದಾರರು ಹಿಂದೆ ಸರಿಯುತ್ತಾರೆ. ಸುಲಭ ಮತ್ತು ಸುಲಲಿತ ವ್ಯವಸ್ಥೆಯನ್ನು ಅವರು ಅಪೇಕ್ಷೆ ಪಡುತ್ತಾರೆ. ಒಂದೇ ಅರ್ಜಿಯಲ್ಲಿ ಎಲ್ಲ ಇಲಾಖೆಗಳ ಅನುಮತಿ, ನಿರಾಕ್ಷೇಪಣ ಪತ್ರ ಲಭ್ಯವಾಗುವ ವ್ಯವಸ್ಥೆ ಹೂಡಿಕೆಗೆ ಪ್ರೋತ್ಸಾಹ ನೀಡುತ್ತದೆ. ಈ ನಿಟ್ಟಿನಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವ್ಯಾಪಾರ ಸರಳೀಕರಣಗೊಳಿಸುವ ಈಸ್‌ ಆಫ್‌ ಡ್ನೂಯಿಂಗ್‌ ಬ್ಯುಸಿನೆಸ್‌ ವ್ಯವಸ್ಥೆ ದೇಶದ ಅನೇಕ ನಗರಗಳಲ್ಲಿ ಅನುಷ್ಠಾನದಲ್ಲಿದೆ.

ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವ್ಯಾಪಾರ ಸರಳೀಕರಣಗೊಳಿಸುವ (ಈಸ್‌ ಆಫ್‌ ಡ್ನೂಯಿಂಗ್‌ ಬ್ಯುಸಿನೆಸ್‌) ಉದ್ದೇಶದಿಂದ ಸ್ವಾಧೀನಾನುಭವ ಪತ್ರ, ಚಾಲ್ತಿ ಪ್ರಮಾಣಪತ್ರ,ವ್ಯಾಪಾರ ಆರಂಭಕ್ಕೆ ಸಂಬಂಧಿಸಿದಂತೆ ನೀಡಲಾಗುವ ನಿರಾಕ್ಷೇಪಣ ಪತ್ರ ಮುಂತಾದುವುಗಳು ಒಂದೇ ಕಡೆಯಲ್ಲಿ, ಒಂದೇ ಅರ್ಜಿಯಲ್ಲಿ ಲಭ್ಯವಾಗುವ ವ್ಯವಸ್ಥೆಯನ್ನು ಆರಂಭಿಸುವ ಕಾರ್ಯ ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿದೆ. ಬಿಬಿಎಂಪಿ ಮಾದರಿಯಲ್ಲೇ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲೂ ಕಟ್ಟಡ ನಕ್ಷೆ ಮಂಜೂರಾತಿ, ಕುಡಿಯುವ ನೀರಿನ ಸಂಪರ್ಕ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ಹೇಳಿದ್ದಾರೆ.

ಈಸ್‌ ಆಫ್‌ ಡ್ನೂಯಿಂಗ್‌ ಬ್ಯುಸಿನೆಸ್‌ ವ್ಯವಸ್ಥೆಯಲ್ಲಿ ಯೋಜನೆಗಳಿಗೆ ಅನುಮೋದನೆ ನೀಡಲು ಸರಳ ವ್ಯವಸ್ಥೆ ಅಳವಡಿಸಿಕೊಂಡಿರುವ ನಗರಗಳ ರ್‍ಯಾಂಕಿಂಗ್‌ ಪಟ್ಟಿಯನ್ನು ವಿಶ್ವಬ್ಯಾಂಕ್‌ ಪ್ರಕಟಿಸುತ್ತದೆ. ಇದಕ್ಕೆ ಮೊದಲು ಈ ವ್ಯವಸ್ಥೆ ಅಳವಡಿಸಿಕೊಂಡಿರುವ ನಗರಗಳಲ್ಲಿ ಅದರ ವಸ್ತುಸ್ಥಿತಿಯ ಬಗ್ಗೆ ವಿಶ್ವಬ್ಯಾಂಕ್‌ ಸಮೀಕ್ಷೆ ನಡೆಸುತ್ತದೆ. ವಿಶ್ವಬ್ಯಾಂಕ್‌ ಸಮೀಕ್ಷೆಯಲ್ಲಿ ಉತ್ತಮ ರ್‍ಯಾಂಕ್‌ ಗಳಿಸಿದರೆ ಆ ನಗರಗಳಲ್ಲಿ ಹೂಡಿಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗಲಿದೆ. ವಿವಿಧ ರಾಜ್ಯ ಹಾಗೂ ದೇಶಗಳ ಹೂಡಿಕೆದಾರರು ಇಂತಹ ನಗರಗಳಿಗೆ ಆದ್ಯತೆ ನೀಡುತ್ತಾರೆ.

ಕಟ್ಟಡ ನಿರ್ಮಾಣ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯಲು ಮೆಸ್ಕಾಂ, ಅಗ್ನಿಶಾಮಕದಳ, ರಾಜ್ಯಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ವಿಮಾನ ನಿಲ್ದಾಣ ಪ್ರಾಧಿಕಾರ, ಸಿಆರ್‌ಝಡ್‌ ಮುಂತಾದ ಇಲಾಖೆಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗುತ್ತದೆ. ಪ್ರಸ್ತುತ ಸ್ಥಿತಿ ಹೇಗಿದೆ ಎಂದರೆ ಇದಕ್ಕಾಗಿ ಈ ಎಲ್ಲ ಇಲಾಖೆಗಳಿಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಕೆಲವು ಇಲಾಖೆಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದೆ. ಕೆಲವು ಇಲಾಖೆಗಳಲ್ಲಿ ನೇರವಾಗಿ ಅರ್ಜಿ ಪಡೆದು ಅವುಗಳನ್ನು ಭರ್ತಿ ಮಾಡಿ ಕೊಡಬೇಕು. ಒಂದೇ ಅರ್ಜಿ ಮೂಲಕ ನೀಡಿ ಒಂದೇ ಕಡೆ ಪಡೆಯುವ ಸೌಲಭ್ಯ ಇದ್ದರೆ ಈ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ.

Advertisement

ಡೀಮ್ಡ್ ಆಗಲಿದೆ
ಪ್ರಸ್ತುತ ಬೆಂಗಳೂರಿನಲ್ಲಿ ಬಿಬಿಎಂಪಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ವ್ಯವಸ್ಥೆಯಲ್ಲಿ ಒಂದೇ ಅರ್ಜಿಯಲ್ಲಿ ಅವಶ್ಯ ಎಲ್ಲ ಸೌಲಭ್ಯಗಳು ಸಿಗಲಿವೆ. ಒಮ್ಮೆ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಆನ್‌ಲೈನ್‌ ಮೂಲಕವೇ ವಿವಿಧ ಇಲಾಖೆಗಳಿಂದ ಅನುಮತಿ ಸಿಗಲಿದೆ. ಹಣಪಾವತಿಯೂ ಒಂದೇ ಬಾರಿಗೆ ಪಾವತಿ ಮಾಡಿದರೆ ಸಾಕಾಗುತ್ತದೆ.

ಒಂದೇ ಅರ್ಜಿಯಡಿ ನಿರಾಕ್ಷೇಪಣ ಪತ್ರವನ್ನು ನಿರ್ದಿಷ್ಟ ಸಮಯದೊಳಗೆ ನೀಡುವ ನಿಟ್ಟಿನಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಇಲಾಖೆಯ ಅಧಿಕಾರಿಗಳು ಇಂತಿಷ್ಟು ದಿನಗಳ ಒಳಗಾಗಿ ನಿರಾಕ್ಷೇಪಣ ಪತ್ರ ನೀಡಬೇಕು. ಅರ್ಜಿಗಳನ್ನು ನಿಯಮಾನುಸಾರ ಪರಿಗಣಿಸಬೇಕು ಇಲ್ಲವೆ ತಿರಸ್ಕರಿಸಬೇಕು. ಇಲ್ಲವಾದರೆ ಆ ಅರ್ಜಿಗಳು ಪರಿಗಣಿಸಲ್ಪಟ್ಟ (ಡೀಮ್ಡ್) ಎಂದು ಭಾವಿಸಲಾಗುತ್ತದೆ. ಒಂದೊಮ್ಮೆ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲನೆ ಮಾಡದೆ ಭವಿಷ್ಯದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದರೆ ಅಧಿಕಾರಿಗಳನ್ನು ಇದಕ್ಕೆ ನೇರ ಹೊಣೆಗಾರರಾಗುತ್ತಾರೆ.

ಹೂಡಿಕೆಗಳಿಗೆ ಸುಲಲಿತ ಮತ್ತು ಸುಗಮ ಪೂರಕವಾದ ವಾತಾವರಣವನ್ನು ಸೃಷ್ಠಿಸುವ ಕಾರ್ಯವನ್ನು ಸರಕಾರ, ಜಿಲ್ಲಾಡಳಿತ ಮಾಡಬೇಕಾಗುತ್ತದೆ. ಇಂತಹ ವ್ಯವಸ್ಥೆ ದೇಶದ ಕೆಲವು ನಗರಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಹೂಡಿಕೆದಾರರ ನಿರೀಕ್ಷೆಯಲ್ಲಿರುವ ಮಂಗಳೂರು ನಗರದಲ್ಲೂ ಇಂತಹ ವ್ಯವಸ್ಥೆ ಜಾರಿಗೆ ಬಂದರೆ ಉತ್ತೇಜನದಾಯಕವಾಗಲಿದೆ.

ಹಿಂದಿನ ಸರಕಾರದ ಅವಧಿಯಲ್ಲಿ ಯು.ಟಿ.ಖಾದರ್‌ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭ ಮಂಗಳೂರಿನಲ್ಲಿ ಕಟ್ಟಡನಕ್ಷೆ ಮಂಜೂರಾತಿ, ಉದ್ಯಮಗಳಿಗೆ ಅನುಮತಿ ಮುಂತಾದ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದರು. ಈ ಬಗ್ಗೆ ಅಧಿಕಾರಿಗಳ ಒಂದಷ್ಟು ಸಭೆಗಳು ನಡೆದಿತ್ತು. ಆದರೆ ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಿಲ್ಲ.

ಮಂಗಳೂರು ನಗರ ಸೇರಿದಂತೆ ಕರಾವಳಿಗೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಯಶಸ್ವಿಯಾಗಬೇಕಾದರೆ ಹೂಡಿಕೆ ಸ್ನೇಹಿ ವಾತಾವರಣ ಅಗತ್ಯವಿದೆ. ಉದ್ಯಮ, ವ್ಯಾಪಾರ, ಹೂಡಿಕೆಗಳಿಗೆ ಅನೇಕ ಇಲಾಖೆಗಳ ಅನುಮತಿ. ನಿರಾಕ್ಷೇಪಣ ಪತ್ರಗಳು ಅಗತ್ಯವಿರುತ್ತದೆ. ಇಲಾಖಾಮಟ್ಟದಲ್ಲಿ ಅಡಚಣೆಗಳು ಎದುರಾದರೆ, ಇಲಾಖೆಗಳಿಗೆ ಅಲೆದಾಡುವ ಸ್ಥಿತಿ ಇದ್ದರೆ ಹೂಡಿಕೆದಾರರ ಉತ್ಸಾಹ ಕುಂದುತ್ತದೆ. ಹೂಡಿಕೆಗಳಿಗೆ ಹಿನ್ನೆಡೆಯಾಗುತ್ತದೆ.

ಇನ್ನೊಂದೆಡೆ ಪ್ರಸ್ತುತ ಆನ್‌ಲೈನ್‌ ಯುಗ. ಅರ್ಜಿಗಳನ್ನು ಹಿಡಿದುಕೊಂಡು ಭರ್ತಿ ಮಾಡಿ ಕಚೇರಿಗಳಿಗೆ ಅಲೆದಾಡುವ ವ್ಯವಸ್ಥೆ ಔಟ್‌ಡೆಟೇಡ್‌ ಆಗುತ್ತಿದೆ. ಆದುದ್ದರಿಂದ ಎಲ್ಲ ಇಲಾಖೆಗಳ ಅನುಮತಿ, ನಿರಾಕ್ಷೇಪಣ ಪತ್ರ ಒಂದೇ ಕಡೆ, ಒಂದೇ ಅರ್ಜಿಯಲ್ಲಿ ದೊರೆಯುವ ವ್ಯವಸ್ಥೆ ಇಂದಿನ ಅಗತ್ಯವಾಗಿದೆ. ಮಂಗಳೂರಿನಲ್ಲಿ ಪ್ರಸ್ತುತ ಕೈಗಾರಿಕೆಗಳಿಗೆ ಅವಶ್ಯಕ ಅನುಮತಿ ನೀಡುವ ಬಗ್ಗೆ ಏಕಗವಾಕ್ಷಿ ವ್ಯವಸ್ಥೆ ಇದ್ದರೂ ಇದೂ ಪರಿಪೂರ್ಣವಾಗಿಲ್ಲ. ಇಲ್ಲಿ ಪೂರ್ವಭಾವಿ ಅನುಮತಿಗಳು ಬಗ್ಗೆ ಪೂರಕ ಕ್ರಮಗಳಾಗುತ್ತವೆ.ಇಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿರುತ್ತಾರೆ. ಆದರೂ ಇಲಾಖೆಗಳ ಪೂರ್ಣ ಪ್ರಮಾಣದ ಅನುಮತಿಗಾಗಿ ಎಲ್ಲಾ ಇಲಾಖೆಗಳಿಗೆ ಹೋಗಬೇಕಾಗುತ್ತದೆ.ಆದರ ಉದ್ಯಮಿ ಹೋಗುವ ಬದಲು ಅವರ ಅರ್ಜಿಯನ್ನು ಕಳುಹಿಸುವ ಮತ್ತು ಪೂರಕ ದಾಖಲೆಗಳು, ಮಾಹಿತಿಗಳು ಅವಶ್ಯವಿದ್ದಲ್ಲಿ ಆನ್‌ಲೈನ್‌ ಮೂಲಕವೇ ಮಾಹಿತಿ ಪಡೆಯುವ ವ್ಯವಸ್ಥೆ ಇರಬೇಕು.

- ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next