Advertisement

ವಂದೇ ಭಾರತ್‌ ಮಿಶನ್‌: ಜು.12-26: ವಿದೇಶಕ್ಕೆ ಹೋಗಲು ಅನುಮತಿ

02:29 AM Jul 11, 2020 | Hari Prasad |

ಕುಂದಾಪುರ/ಮಂಗಳೂರು: ವಂದೇ ಭಾರತ್‌ ಮಿಶನ್‌ ಯೋಜನೆಯಡಿ ಅನಿವಾಸಿ ಭಾರತೀಯರಿಗೆ ಜು.12 ರಿಂದ ಜು.26ರ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ.

Advertisement

ಮರಳಿ ಉದ್ಯೋಗ, ಉದ್ಯಮ ಕ್ಷೇತ್ರದ ದೇಶಕ್ಕೆ ಹೋಗಲು ಅನುವು ಮಾಡಿಕೊಡುವಂತೆ ಅನಿವಾಸಿ ಭಾರತೀಯರು ಮನವಿ ಮಾಡಿದ್ದರು. ಈ ಸಂಬಂಧ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ವಿದೇಶಕ್ಕೆ ಹೋಗುವವರಿಗೆ ಪ್ರಯಾಣಕ್ಕೆ ಅನುಮತಿ ನೀಡುವಂತೆ ವಿನಂತಿಸಿದ್ದರು.

ಅನುಮತಿ
ಭಾರತೀಯ ವಿಮಾನ ಯಾನ ಸಂಸ್ಥೆಯು ಗುರುವಾರ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. ಪ್ರಯಾಣಿಕರು ಭಾರತೀಯ ರಾಯಭಾರ ಅಥವಾ ಅಬುಧಾಬಿಯ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣವಾದ ಬಳಿಕ ಟಿಕೆಟ್‌ ಮಾಡಬಹುದು.

ದುಬಾರಿ ಟಿಕೆಟ್‌
ಸಾಮಾನ್ಯವಾಗಿ 15ರಿಂದ 20 ಸಾವಿರ ರೂ.ಗಳಾಗುವ ಒಂದು ಬಾರಿಯ ಪ್ರಯಾಣಕ್ಕೆ ಈಗ 35ರಿಂದ 50 ಸಾವಿರ ರೂ.ವರೆಗೆ ಟಿಕೆಟ್‌ ದರ ವಿಧಿಸಲಾಗಿದೆ.

ಕೋವಿಡ್‌ ಸಂಕಟ
ಪ್ರಯಾಣಿಕರು 96 ಗಂಟೆ ಅವಧಿ ಮೀರದ ಕೋವಿಡ್‌19 ಪರೀಕ್ಷಾ ವರದಿ ಹೊಂದಿರಬೇಕು. ಉಡುಪಿಯ ಪ್ರಯೋಗಾಲಯದಲ್ಲಿ ಸಾವಿರಾರು ಗಂಟಲ ದ್ರವ ಮಾದರಿಗಳು ಪರೀಕ್ಷಾ ವರದಿಗಾಗಿ ಕಾಯುತ್ತಿದ್ದು ಈಗ ತುರ್ತಾಗಿ ವರದಿ ಬೇಕಾದ ಪ್ರಯಾಣಿಕರಿಗೆ ಸಂಕಷ್ಟ ತಂದೊಡ್ಡಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿ 40 ತಾಸಿನ ಬಳಿಕ ಪರೀಕ್ಷಾ ವರದಿ ಪಡೆಯಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.

Advertisement

ಮಂಗಳೂರಿಗೆ ಹಲವು ವಿಮಾನ
ಜು.12ರಂದು ಬಹ್ರೈನ್‌ ಮತ್ತು ಮಸ್ಕತ್‌ನಿಂದ, ಜು.13ರಂದು ಶಾರ್ಜಾದಿಂದ, ಜು.14ರಂದು ಮಸ್ಕತ್‌ನಿಂದ ಮಂಗಳೂರಿಗೆ ಆಗಮಿಸಲಿದೆ. ಜು.22ರಂದು ಮಸ್ಕತ್‌ನಿಂದ ಬೆಂಗಳೂರಿಗೆ ಬರುವ ವಿಮಾನವು ರಾತ್ರಿ 9.10ಕ್ಕೆ, ಜು.28ರಂದು ಶಾರ್ಜಾದಿಂದ, ರಾತ್ರಿ 8.30ಕ್ಕೆ ಯುಎಇಯಿಂದ, ಜು.31ರಂದು ರಾತ್ರಿ 9.10ಕ್ಕೆ ಮಸ್ಕತ್‌ನಿಂದ ವಿಮಾನ ಮಂಗಳೂರಿಗೆ ಆಗಮಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next