Advertisement

ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ

09:17 AM Apr 17, 2020 | mahesh |

ಉಡುಪಿ: ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಸೆಕ್ಷನ್‌ 144 (3) ರಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಈ ನಡುವೆ ಅಗತ್ಯ ಆಹಾರ ಸಾಮಗ್ರಿಗಳನ್ನು ಖರೀದಿಸಲು ಪ್ರತಿದಿನ ಬೆಳಗ್ಗೆ 7ರಿಂದ 11ರ ವರೆಗೆ ಸಮಯ ನಿಗದಿಪಡಿಸಿ ಅನುಮತಿ ನೀಡಲಾಗಿದೆ.

Advertisement

ಸರಕಾರದ ಮಾರ್ಗಸೂಚಿಯಂತೆ ಅಗತ್ಯ ಸರಕು ವಾಹನಗಳ ಓಡಾಟಕ್ಕೆ ಅವಕಾಶವಿದೆ. ದಿನಸಿ, ಔಷಧ, ತರಕಾರಿ ಮುಂತಾದ ದೈನಂದಿನ ಅಗತ್ಯ ವಸ್ತುಗಳನ್ನು ಜಿಲ್ಲೆಯ ಒಳಗೆ ಮತ್ತು ಬೇರೆ ಜಿಲ್ಲೆಗಳಿಗೆ ಸಾಗಿಸಲು ಯಾವುದೇ ನಿರ್ಬಂಧವಿಲ್ಲ. ವಸ್ತುಗಳನ್ನು ರಖಂ ಹಾಗೂ ರಿಟೇಲ್‌ಗ‌ಳಿಗೆ ಬೆಳಗ್ಗೆ 11ರ ಅನಂತರವೂ ಸರಬರಾಜು ಮಾಡಬಹುದು. ಈ ವಾಹನಗಳನ್ನು ಯಾರೂ ತಡೆಯುವುದಿಲ್ಲ. ಈ ಹಿಂದೆ ನಿರ್ಬಂಧ ಇತ್ತು. ಸಮಯ ನಿಗದಿಯಿಂದಾಗಿ ಸಾಮಗ್ರಿ ನಿರ್ದಿಷ್ಟ ಸಮಯದೊಳಗೆ ತಲುಪಿಸಲು ಅಡಚಣೆ ಉಂಟಾಗುತ್ತದೆ ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆಯಲ್ಲಿ ಸಮಯದ ಮಿತಿಯನ್ನು ತೆಗೆದು ಹಾಕಲಾಗಿದೆ ಎಂದು ಎಂದು ಜಿಲ್ಲಾ ಧಿಕಾರಿಗಳ ಪ್ರಕಟನೆ ತಿಳಿಸಿದೆ.

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಮಾಡುವ ರೈತರಿಗೆ ಅವರ ಹೊಲಗಳಲ್ಲಿ ಕೆಲಸ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಸುರಕ್ಷತೆಯ ಬಗ್ಗೆ ಗಮನ ನೀಡಿ ಕೆಲಸ ಕಾರ್ಯ ನಡೆಸಬೇಕು ಎಂದು ಪ್ರಕಟನೆ ತಿಳಿಸಿದೆ.

ತೆಂಗಿನಕಾಯಿ, ನೆಲಕಡಲೆ, ಗೇರು ಬೀಜ, ಅಡಿಕೆ ವ್ಯಾಪಾರ, ಮಸಾಲ ಪದಾರ್ಥದ ಅಂಗಡಿಗಳನ್ನು ತೆರೆದು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಿಗದಿತ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಅಂಗಡಿಗಳು ಇತರ ಅಂಗಡಿಗಳಂತೆ ಬೆಳಗ್ಗೆ 11ರ ವರೆಗೆ ಕಾರ್ಯನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next