Advertisement

ಹೆಚ್ಚುವರಿ ವಿಮಾನಗಳ ಕಾರ್ಯಾಚರಣೆಗೆ ಅನುಮತಿ

09:48 PM Jun 15, 2020 | Sriram |

ಮುಂಬೈ: ಮಹಾರಾಷ್ಟ್ರದಲ್ಲಿ ದಿನವೊಂದಕ್ಕೆ 100 ಸ್ಥಳೀಯ ವಿಮಾನಗಳ ಕಾರ್ಯಾಚರಣೆ ನಡೆಸಲು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಅನುಮತಿ ನೀಡಿದೆ.

Advertisement

ದೇಶದಲ್ಲಿ ಮೇ ಕೊನೆಯ ವಾರದಲ್ಲಿ ವಿಮಾನಯಾನ ಸೇವೆ ಆರಂಭವಾದಾಗಿನಿಂದ ಮಹಾರಾಷ್ಟ್ರದಲ್ಲಿ 25 ಅರೈವಲ್‌ ಹಾಗೂ 25 ಡಿಪಾರ್ಚರ್‌ ಸೇರಿ ದಿನವೊಂದಕ್ಕೆ 50 ವಿಮಾನಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದವು. ಈಗ ಆ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ.

ವಿಮಾನ ಸೇವೆ ಪುನರಾರಂಭಗೊಂಡಾಗಿನಿಂದ ದೇಶದಲ್ಲಿ ಏರ್‌ ಟ್ರಾಫಿಕ್‌ ದಿನೇ ದಿನೆ ಹೆಚ್ಚುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ಷ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ಸ್ಥಳೀಯ ವಿಮಾನಯಾನ ಸೇವೆ ಪುನರಾರಂಭವಾಗಿ ಜೂ.14ಕ್ಕೆ 21 ದಿನಗಳು ಕಳೆದಿದ್ದು, ಈ ಅವಧಿಯಲ್ಲಿ ದೇಶದ ವಿವಿಧ ವಿಮಾನ ನಿಲ್ದಾಣಗಳಿಂದ 714 ವಿಮಾನಗಳು ಕಾರ್ಯಾಚರಣೆ ನಡೆಸಿದ್ದು, ಏರ್‌ಪೋರ್ಟ್‌ಗಳು 72,583 ಡಿಪಾರ್ಚರ್‌ ಪ್ರಯಾಣಿಕರು ಮತ್ತು 72,439 ಅರೈವಲ್‌ ಪ್ರಯಾಣಿಕರನ್ನು ನಿರ್ವಹಿಸಿವೆ. ಹಾಗೇ ಎಲ್ಲ ವಿಮಾನ ನಿಲ್ದಾಣಗಳಿಗೆ ಒಟ್ಟು 1,45,022 ಮಂದಿ ಬಂದು ಹೋಗಿದ್ದಾರೆ ಎಂದು ಸಚಿವ ಪುರಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next