Advertisement

ವಿಮಾನಗಳಲ್ಲಿ ಮಧ್ಯದ ಆಸನ ಭರ್ತಿಗೆ ಅನುಮತಿ

08:52 AM Jun 16, 2020 | mahesh |

ಮುಂಬಯಿ: ವಿಮಾನ ಕಂಪೆನಿಗಳಿಗೆ ಮಧ್ಯದ ಸೀಟುಗಳನ್ನು ಭರ್ತಿ ಮಾಡಲು ಬಾಂಬೆ ಹೈಕೋರ್ಟ್‌ ಸೋಮವಾರ ಅನುಮತಿ ನೀಡಿದೆ. ಅದಕ್ಕಾಗಿ ಮೇ 31ರಂದು ನಾಗ ರಿಕ ವಿಮಾನಯಾನ ನಿರ್ದೇಶನಾಲಯ ಹೊರಡಿಸಿದ ಮಾರ್ಗಸಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನ್ಯಾ| ಎಸ್‌.ಜೆ.ಕಥವಲ್ಲಾ ಮತ್ತು ನಾ| ಎಸ್‌.ಪಿ.ತಾವಡೆ ಅವರ ನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಸೂಚಿಸಿದೆ. ಮಧ್ಯದ ಸೀಟುಗಳನ್ನು ಪ್ರಯಾಣಿಕರ ಒತ್ತಡ ಹಿನ್ನೆಲೆಯಲ್ಲಿ ಖಾಲಿ ಬಿಡಲು ಸಾಧ್ಯವಾಗದೇ ಇದ್ದರೆ ಆರೋಗ್ಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು 50 ಪುಟಗಳ ಆದೇಶದಲ್ಲಿ ನ್ಯಾಯಪೀಠ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next