Advertisement

ಪೂರ್ಣ ಪ್ರಮಾಣದ ಸಿನೆಮಾ ಪ್ರದರ್ಶನಕ್ಕೆ ಅನುಮತಿ

12:52 AM Jan 05, 2021 | Team Udayavani |

ಚೆನ್ನೈ: ತಮಿಳುನಾಡಿನ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಹೊಂದುವ ಮೂಲಕ ಸಿನೆಮಾ ಪ್ರದರ್ಶನಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ. ಶೇ.100ರಷ್ಟು ಪ್ರೇಕ್ಷಕರು ಇದ್ದುಕೊಂಡು ಸಿನೆಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಮೊದಲ ರಾಜ್ಯ ತಮಿಳುನಾಡು ಆಗಿದೆ. ಕಾಲಿವುಡ್‌ನ‌ ಪ್ರಮುಖ ನಟರಾಗಿರುವ ವಿಜಯ್‌ ಮತ್ತು ಸಿಲಾಂಬರಸನ್‌ ಮುಖ್ಯಮಂತ್ರಿ ಕೆ.ಪಳನಿ ಸಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಆದೇಶ ಪ್ರಕಟವಾಗಿದೆ. ಇದರಿಂದಾಗಿ ವಿಜಯ್‌ ನಟನೆಯ “ಮಾಸ್ಟರ್‌’, ಸಿಲಾಂಬರಸನ್‌ರ “ಈಶ್ವರನ್‌’ ಸಿನಿಮಾ ಸಂಕ್ರಾತಿ ವೇಳೆಗೆ ಬಿಡುಗಡೆಯಾಗುವುದು ಬಹುತೇಕ ಖಚಿ ತವಾಗಿದೆ. ಈ ಎರಡೂ ಸಿನೆಮಾಗಳಿಂದಾಗಿ ತಮಿ ಳು ಚಿತ್ರರಂಗ ಮತ್ತೆ ಪುಟಿದೇಳುವ ನಿರೀಕ್ಷೆ ಇದೆ.ಮಲ್ಟಿಪ್ಲೆಕ್ಸ್‌ನಲ್ಲಿ ಶೇ.50 ಪ್ರೇಕ್ಷಕರ ಜತೆಗೆ ಸಿನಿಮಾ ಪ್ರದರ್ಶನಕ್ಕೆ ನ.10ರಂದು ಆದೇಶ ನೀಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next