Advertisement

ರೈತರ ಅನುಕೂಲಕ್ಕೆ ನೀರಾ ಇಳಿಸಲು ಅನುಮತಿ 

06:45 AM Dec 21, 2017 | Team Udayavani |

ಲಿಂಗಸುಗೂರು: ರೈತರ ಅನುಕೂಲಕ್ಕಾಗಿ ನೀರಾ ಇಳಿಸಲು ಅನುಮತಿ ನೀಡಲಾಗಿದೆ. ಎಂದು ಅಬಕಾರಿ ಸಚಿವ ಆರ್‌.
ಬಿ. ತಿಮ್ಮಾಪುರ ತಿಳಿಸಿದರು. 

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಬಕಾರಿ ಇಲಾಖೆಗೆ ಈ ಸಾಲಿನಲ್ಲಿ 18,500 ಕೋಟಿ ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಈಗಾಗಲೇ 12,500 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದರು. ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಹಳ್ಳಿ-ಹಳ್ಳಿಗಳಲ್ಲಿನ ಕಿರಾಣಿ ಅಂಗಡಿಯಲ್ಲಿ ಮದ್ಯ ದೊರೆಯುತ್ತಿದೆ. ಇದಕ್ಕೆ ಶೀಘ್ರವೇ ಮುಕ್ತಿ ಕಾಣಿಸಲು ರಾಜ್ಯಾದ್ಯಂತ 1200 ಗಾರ್ಡ್‌ಗಳು ಹಾಗೂ 250 ಎಸ್‌ಐ ಹುದ್ದೆಗಳ ನೇಮಕ ಮುಗಿದಿದ್ದು, ತರಬೇತಿ ಪಡೆಯುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಜನಸಂಖ್ಯೆ ಅನುಗುಣವಾಗಿ ಬಾರ್‌ಗಳು ಇಲ್ಲ. ಹೀಗಾಗಿ ಎಂಎಸ್‌ಐಎಲ್‌ ಸೇರಿ 900 ಮದ್ಯದಂಗಡಿಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದರು. ಎಂಎಸ್‌ಐಎಲ್‌ ಸೇರಿ 900 ಹೊಸ ಮದ್ಯದಂಗಡಿ ತೆರೆಯಲು ಅರ್ಜಿ ಆಹ್ವಾನಿ ಸಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ನಿಧಾನಗತಿಯಲ್ಲಿ ಸಾಗಿದೆ.

ಸಿಎಲ್‌-7 ಪರವಾನಗಿಗಾಗಿ ಈ ಹಿಂದೆ 20×30 ಅಳತೆ ಕಟ್ಟಡ ಕೇಳಲಾಗಿತ್ತು. ಇದನ್ನು ಸಡಿಲಗೊಳಿಸಿ 15×20 ಅಳತೆ ಕೊಠಡಿ ಸಾಕು ಎಂದು ತಿಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next