Advertisement

ಕೋಲ್ಡ್‌ ಸ್ಟೋರೇಜ್‌ಗೆ ಶೀಘ್ರ ಅನುಮತಿ: ಸೋಮಶೇಖರ್‌

05:38 PM Apr 24, 2020 | Team Udayavani |

ಚಾಮರಾಜನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್‌ ಸ್ಟೋರೇಜ್‌ ಬೇಕೆಂಬ ಮನವಿ ಬಂದಿದೆ. ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಮಂಜೂರು ಮಾಡಿಕೊಡುತ್ತೇನೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗೆ ಭೇಟಿ ನೀಡಿ ವಹಿವಾಟು ಪರಿಶೀಲನೆ ನಡೆಸಿದ ಬಳಿಕ ಬಳಿಕ ಮಾತನಾಡಿದ ಸಚಿವರು, ಜಿಲ್ಲೆಗಳ ಎಪಿಎಂಸಿಗೆ ಭೇಟಿ ನೀಡುತ್ತಿದ್ದೇನೆ.ರೈತರುತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ  ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.1.40 ಲಕ್ಷ ರೈತರಿಗೆ ಸಾಲಮನ್ನಾ ಸಂಬಂಧ ದಾಖಲಾತಿ ಸಲ್ಲಿಸಿದ ಮೇಲೆ ಪ್ರಕ್ರಿಯೆ ಶುರುವಾಗುತ್ತದೆ. ಸುಸ್ತಿಮನ್ನಾ ಅವಧಿ ವಿಸ್ತರಿಸಲಾಗಿದೆ. ಬಡ್ಡಿದರವನ್ನು ಈ 3 ತಿಂಗಳು ಸರ್ಕಾರವೇ ಭರಿಸುವ ತೀರ್ಮಾನ ಮಾಡಲಾಗಿದೆ ಎಂದರು.

ಲೇವಾದೇವಿದಾರರು ಹಾಗೂ ಖಾಸಗಿ ಫೈನಾನ್ಸ್‌ ನವರು ಈ ಮೂರು ತಿಂಗಳ ಅವಧಿಯಲ್ಲಿ ಯಾವುದೇ ಕಾರಣಕ್ಕೂ ರೈತರು, ನಾಗರಿಕರಿಂದ ಸಾಲ ವಸೂಲಾತಿಗೆ ಒತ್ತಾಯಿಸಬಾರದು ಎಂದು ಆದೇಶವಾಗಿದೆ ಎಂದರು.ಕೇಂದ್ರ ಸರ್ಕಾರ ಲಕ್ಷ ಮೆಟ್ರಿಕ್‌ ಟನ್‌ ತೊಗರಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅನುಮತಿ ನೀಡಿದೆ. ತೊಗರಿಯನ್ನು ಸರ್ಕಾರದಿಂದ ಕ್ವಿಂಟಲ್ ಗೆ ತಲಾ 6,100 ರೂ. ನಂತೆ ಬೆಂಬಲ ಬೆಲೆಯಾಗಿ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೇರಳ ಸೇರಿ ಅಂತಾರಾಜ್ಯ ಗಡಿಗಳಿಂದ ಬರುವ ವಾಹನ ಹಾಗೂ ಚಾಲಕರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಸ್ಯಾನಿಟೈಸೇಷನ್‌ ಮಾಡ ಲಾಗುತ್ತಿದೆ ಎಂದರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಸಿ.ಎಸ್‌. ನಿರಂಜನಕುಮಾರ್‌, ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ, ಎಸ್ಪಿ ಆನಂದಕುಮಾರ್‌ ಎ.ಪಿ.ಎಂ.ಸಿ. ಅಧ್ಯಕ್ಷ ಶಂಕರಮೂರ್ತಿ, ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next