Advertisement

ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ

02:13 PM Mar 05, 2022 | Team Udayavani |

ಅರಸೀಕೆರೆ: ನಗರಸಭೆ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಕೈಗೊಂಡಿರುವ ವಾರ್ಡ್‌ಗಳ ಭೇಟಿ ಸಂದರ್ಭದಲ್ಲಿ ಒಳಚರಂಡಿ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆ ಗಳನ್ನು ಜನರ ಬಳಿ ಚರ್ಚಿಸಿದರು. ಜೊತೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಯಿತು ಎಂದರು.

Advertisement

ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ನೇತೃತ್ವದಲ್ಲಿ ನಗರಸಭೆ ಉಪಾಧ್ಯಕ್ಷ ಕಾಂತೇಶ್‌, ಜೆಡಿಎಸ್‌ಸದಸ್ಯರಾದ ಜಿ.ಟಿ ಗಣೇಶ್‌, ಅನ್ನಪೂರ್ಣ,ಮನೋಹರ್‌, ಜಾಕೀರ್‌ ಹುಸೇನ್‌ ಸೇರಿದಂತೆಜೆಡಿಎಸ್‌ನ ಸದಸ್ಯರು ಮತ್ತು ನಗರಸಭೆ ಪೌರಾಯುಕ್ತ ಬಸವರಾಜ್‌ ಕಾಟಪ್ಪ, ಶಿಗ್ಗಾವಿ ಹಾಗೂ ಸಿಬ್ಬಂದಿ ನಗರದ ಹಲವು ಬಡಾವಣೆಗಳಲ್ಲಿ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ವಾರ್ಡುಗಳಲ್ಲಿ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸಿಕೊಡುವಂತೆ ಬಹುತೇಕ ಸಾರ್ವಜನಿಕರು ಶಾಸಕರ ಮುಂದೆ ಅಳಲು ತೋಡಿಕೊಂಡರು.

ನಗರದ ಜನತೆ ಎದುರಿಸುತ್ತಿರುವ ಸಮಸ್ಯೆ ಆಲಿಸಿದ ಶಾಸಕ ಶಿವಲಿಂಗೇಗೌಡ ಮತ್ತು ತಂಡ ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು.

ಒಳಚರಂಡಿಗೆ ಶಾಶ್ವತ ಪರಿಹಾರದ ಭರವಸೆ: ಈಸಂದರ್ಭದಲ್ಲಿ ಸುದ್ದಿಗಾರರ ಜತೆ ಶಾಸಕ ಶಿವಲಿಂಗೇಗೌಡ ಮಾತನಾಡಿ, ನಗರದ ಜನತೆಗೆಕುಡಿಯುವ ನೀರಿನ ಸಮಸ್ಯೆ ಇಲ್ಲ, ನಗರವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಿಕೊಡಲು ನಮಗೆ ಹಣದ ಕೊರತೆ ಇಲ್ಲ. ಆದರೆ,ವಿವಿಧ ಕಾರಣಗಳಿಂದ ಮಂದಗತಿಯಲ್ಲಿಸಾಗುತ್ತಿರುವ ಒಳಚರಂಡಿ ಕಾಮಗಾರಿ ಅತ್ಯಂತತ್ವರಿತವಾಗಿ ಮುಗಿಸಲು 9.67 ಕೋಟಿ ರೂ ವಿಶೇಷ ಅನುದಾನವನ್ನು ತಂದಿದ್ದೇವೆ. ವಷಾಂìತ್ಯದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ, ಮುಂದಿನ ನಾಲ್ಕೈದು ದಶಕಗಳ ಕಾಲ ಒಳಚರಂಡಿಸಮಸ್ಯೆ ನಗರದ ಜನತೆಗೆ ಕಾಡದ ರೀತಿಯಲ್ಲಿಶಾಶ್ವತ ಪರಿಹಾರ ಮಾಡಿ ಕೊಡುವುದಾಗಿ ಭರವಸೆ ನೀಡಿದರು.

ಜನತೆ ಸಮಸ್ಯೆ ಅರಿಯಲು ಸಹಕಾರಿ: ನಗರಸಭೆ ಉಪಾಧ್ಯಕ್ಷ ಕಾಂತೇಶ್‌ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಕೈಗೊಂಡಿರುವ ವಾರ್ಡ್‌ವಾರು ಭೇಟಿಕಾರ್ಯಕ್ರಮ ವಿಶೇಷವಾಗಿದ್ದು, ಜನತೆ ಸಮಸ್ಯೆ ಅರಿಯಲು ಹಾಗೂ ಸೂಕ್ತ ಪರಿಹಾರಕಂಡುಕೊಳ್ಳಲು ಸಹಕಾರಿಯಾಗಿದೆ. ಸಾರ್ವಜನಿಕರಿಂದ ಕೂಡ ಮೆಚ್ಚಿಗೆ ಮಾತು ಕೇಳಿ ಬರುತ್ತಿದೆ ಎಂದು ಸಂತಸ ಹಂಚಿಕೊಂಡರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next