Advertisement

ಪೆರ್ಲ: ವಾರದ ಸಂತೆಗಿಲ್ಲ  ವ್ಯವಸ್ಥಿತ ಜಾಗ, ಖಾಸಗಿ ಸ್ಥಳದಲ್ಲಿ  ಮಾರಾಟ

12:30 AM Dec 29, 2018 | |

ಪೆರ್ಲ: ಕರ್ನಾಟಕ ಗಡಿ ಪ್ರದೇಶ ಹಂಚಿ ಕೊಂಡಿರುವ ಕಾಸರಗೋಡಿನ ಉತ್ತರ ಭಾಗದ ನಗರ ಪ್ರದೇಶವೇ ಪೆರ್ಲ ಪೇಟೆ. ಪಂಚಾಯತಿನ ಉದ್ದಕ್ಕೂ ಅಂತಾರಾಜ್ಯ ರಸ್ತೆಯು ಹಾದು ಹೊಗುತ್ತಿದ್ದೂ ಪುತ್ತೂರಿಗೆ ತಲುಪಲು ಎರಡು ರಸ್ತೆಗಳು (ವಿಟ್ಲ ಮೂಲಕ ಮತ್ತು ಪಾಣಾಜೆ ) ಇದ್ದೂ  ಅವೆರಡೂ ಪೆರ್ಲ ಪೇಟೆ ಮೂಲಕವೇ ಹಾದು ಹೋಗುತ್ತಿವೆ.  

Advertisement

ಗಡಿ ಪ್ರದೇಶದ ಜನರು ಹೆಚ್ಚಾಗಿ ತಮ್ಮ ವ್ಯವಹಾರಕ್ಕೆ ಆಶ್ರಯಿಸುವುದು ಪೆರ್ಲ ಪೇಟೆಯನ್ನೆ.ಆದರೆ ಪೇಟೆ ಬೆಳೆದಂತೆ ಮೂಲ ಸೌಕರ್ಯಗಳು ಆಗುವುದಿಲ್ಲ.ಪೆರ್ಲ ಪೇಟೆಯಲ್ಲಿ  ವಾರದಲ್ಲಿ ಪ್ರತಿ ಬುಧವಾರ ವಾರದ ಸಂತೆಯು ನಡೆಯುತ್ತಿದೆ. 

15 ವರ್ಷಗಳ ಹಿಂದೆ ಪ್ರಾರಂಭವಾದ ಸಂತೆ
ವಾರದ ಸಂತೆಯು ಆರಂಭವಾಗಿ ಸುಮಾರು 15ವರ್ಷಕ್ಕಿಂತ ಮೇಲೆ ಆಗಿದೆ. ಮೊದಲು ಮುಖ್ಯ ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ ವರ್ತಕರು ಅನಂತರ ಸೇವಾ ಸಹಕಾರಿ ಬ್ಯಾಂಕ್‌ ಪೆರ್ಲ ಇದರ ಅಧೀನ‌ದಲ್ಲಿರುವ ಸ್ಥಳಕ್ಕೆ ಸ್ಥಳಾಂತರಿಸಲ್ಪಟ್ಟರು. ಇದು ಪಂಚಾಯತ್‌ ಮನವಿ ಮೇರೆಗೆ  ಸ್ಥಳಾಂತರಿಸಿದ್ದು ಎಂದು ಪಂ.ನವರು ಹೇಳುತ್ತಾರೆ. ಆದರೆ ಇದು ಪೇಟೆಯಿಂದ ಸ್ವಲ್ಪ ಒಳ ಭಾಗದಲ್ಲಿರುವ ಕಾರಣ ವ್ಯಾಪಾರ ತುಂಬ ಕಡಿಮೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಕೆಲವು ಸಲ ಕೇವಲ 2,000 ರೂಪಾಯಿ ಮಾತ್ರ ವ್ಯಾಪಾರ ಆದದ್ದೂ ಇದೆ. ತರಕಾರಿ, ವಾಹನದ ಬಾಡಿಗೆ, ಸಂಬಳ ಇವೆಲ್ಲವೂ ಇದರಲ್ಲಿಯೇ ಆಗ ಬೇಕು ಎಂದು ಎಂಟು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಬಾದ್‌ಷಾ ಪುತ್ತೂರು ಹೇಳುತ್ತಾರೆ. ಪೇಟೆಗೆ ಬಂದವರಿಗೆ ಕಾಣುವಂತೆ ಇರುವ ಸ್ಥಳ ಆದರೆ ಜನರು ಬರುತ್ತಾರೆ ಎಂದು ಹಮೀದ್‌ ಬಿ.ಸಿ. ರೋಡು ಹೇಳುತ್ತಾರೆ. 

ಹೆಚ್ಚಿನ ವ್ಯಾಪಾರಿಗಳು ದ.ಕ.ದವರು
ಇಲ್ಲಿಗೆ ಸಾಮಗ್ರಿಗಳನ್ನು ಮಾರಾಟಕ್ಕೆ ತರುವವರು ಹೆಚ್ಚಿನವರು ವಿಟ್ಲ ,ಬಂಟ್ವಾಳ, ಪುತ್ತೂರಿನವರಾಗಿದ್ದಾರೆ. ಇಲ್ಲಿ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಸಂತೆ ಕಟ್ಟಡವಿಲ್ಲ. ವ್ಯಾಪಾರಸ್ಥರ ಹಾಗೂ ಗ್ರಾಹಕರ ವಾಹನಗಳನ್ನು ನಿಲುಗಡೆ ಗೊಳಿಸಲು ಪ್ರತ್ಯೇಕ ಸ್ಥಳವಿಲ್ಲ. ಇದೀಗ ವರ್ತಕರು ತಮ್ಮ ವಾಹನಗಳನ್ನು ಹತ್ತಿರದ ಖಾಸಗಿ ಸ್ಥಳದಲ್ಲಿ ನಿಲುಗಡೆ ಗೊಳಿಸುತ್ತಾರೆ.

ಪೆರ್ಲ ಪೇಟೆಗೆ ಪ್ರಾಥಮಿಕ ಸೌಕರ್ಯಗಳಿಂದ ಕೂಡಿದ ಬಿಸಿಲು, ಮಳೆಯಿಂದ ರಕ್ಷಣೆಯ ಮಾರುಕಟ್ಟೆ ಕಟ್ಟಡಬೇಕಾಗಿದೆ. ಪಂ.ನ 2019- 20ನೇ ವರ್ಷದ ಯೋಜನೆಯಲ್ಲಿ  ಶಾಪಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಲು ಮಾತ್ರ ಅನುದಾನ ಮೀಸಲಿ ಟ್ಟಿದೆ. ವಾರದ ಸಂತೆ ಮಾರು ಕಟ್ಟೆಗೆ ಸೂಕ್ತ ಸ್ಥಳ ಆಯ್ಕೆ ಹಾಗೂ ಅನುದಾನವನ್ನು  ಮುಂದಿನ ಯೋಜನೆ ಯಲ್ಲಿ ಇರಿಸಲು ಪ್ರಯತ್ನಿಸಲಾಗುವುದು.
– ಶಾರದಾ ವೈ. 
ಅಧ್ಯಕ್ಷೆ, ಎಣ್ಮಕಜೆ ಪಂಚಾಯತ್‌ 

Advertisement

ವಾರದ ಸಂತೆ ಸ್ಥಳಕ್ಕೆ ನಿಶ್ಚಿತ ಶುಲ್ಕವನ್ನು ನಿಗದಿಗೊಳಿಸಿ ಓರ್ವ ವ್ಯಾಪಾರಿಯನ್ನು ವಾರದ ಹಣ ಸಂಗ್ರಹ ಮಾಡಲು ಸ್ಥಳಕ್ಕೆ ಸಂಬಂಧಟ್ಟವರು ನಿಯೋಜಿಸಿದ್ದಾರೆ. ಇಲ್ಲಿ ಮಾರಾಟಕ್ಕೆ ಬರುವ ನಾವು ದಿನಕ್ಕೆ ರೂ. 100ರಂತೆ ಸ್ಥಳ ಬಾಡಿಗೆ ನೀಡುತ್ತಿದ್ದೇವೆ. 
– ಹಮೀದ್‌, ವ್ಯಾಪಾರಿ

– ಬಾಲಕೃಷ್ಣ ಅಚ್ಚಾಯಿ

Advertisement

Udayavani is now on Telegram. Click here to join our channel and stay updated with the latest news.

Next