Advertisement
ಅರಣ್ಯ ಇಲಾಖೆಯ ಪಂಜ ವಲಯಕ್ಕೆ ಸೇರಿದ ರಕ್ಷಿತಾರಣ್ಯದೊಳಗಿನಿಂದ ಹಾದು ಹೋಗುತ್ತಿದ್ದ ಕಾರಣದಿಂದಾಗಿ ಅಭಿವೃದ್ಧಿ ಕಾಣದೆ ಅತ್ಯಂತ ನಾದುರಸ್ತಿಯಲ್ಲಿದ್ದ ಈ ರಸ್ತೆಯಲ್ಲಿ ಸಂಚರಿಸುವ ಯಾತ್ರಾರ್ಥಿಗಳು ಹಾಗೂ ಇತರ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. 3 ಮೀ. ಅಗಲವಿದ್ದ ರಸ್ತೆಯನ್ನು 5.5 ಮೀ. ಅಗಲಗೊಳಿಸಿ 1.23 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗಿದೆ.
ಪ್ರತಿನಿತ್ಯ ಸಾವಿರಾರು ಮಂದಿ ಯಾತ್ರಾರ್ಥಿಗಳು ಮತ್ತು ಸಾರ್ವಜನಿಕರು ಸಂಚರಿ ಸುತ್ತಿದ್ದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಮಾಜಿಕ ಸಂಘಟನೆ ನೀತಿ ತಂಡವು ಕಳೆದೆರಡು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿತ್ತು. ರಸ್ತೆ ಅಭಿವೃದ್ಧಿಗಾಗಿ ಸಾರ್ವಜನಿಕವಾಗಿ ಭಿಕ್ಷೆ ಎತ್ತುವ ಮೂಲಕ ಸಂಗ್ರಹವಾದ 2,840 ರೂ.ಗಳನ್ನು ಡಿಡಿ ಮಾಡಿ ಕಳುಹಿಸುವ ಮೂಲಕ ರಸ್ತೆಯನ್ನು ದುರಸ್ತಿಗೊಳಿಸಲು ವಿಫಲವಾದ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಚುರುಕು
ಮುಟ್ಟಿಸಿ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ರಸ್ತೆ ತಡೆ ಇತ್ಯಾದಿ ಹೋರಾಟಗಳ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯುವ ಕಾರ್ಯವನ್ನು ನೀತಿ ತಂಡದ ಯುವಕರು ಮಾಡಿದ್ದರು.
Related Articles
Advertisement
ಅಡಚಣೆ ಮೀರಿ ಕಾರ್ಯಸಾಧನೆರಸ್ತೆ ಅಭಿವೃದ್ಧಿಗಾಗಿ ನೀತಿ ತಂಡ ನಡೆಸಿದ ಜನಪರ ಹೋರಾಟ ಶ್ಲಾಘನಾರ್ಹ. ಸುಪ್ರಸಿದ್ಧ ಪುಣ್ಯಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳವನ್ನು ಸಂಪರ್ಕಿಸುವ ರಾಜ್ಯಹೆದ್ದಾರಿಯಾಗಿರುವುದರಿಂದ ಯಾತ್ರಾರ್ಥಿಗಳು ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ಬಹಳ ಕಷ್ಟಪಡುತ್ತಿದ್ದರು. ರಕ್ಷಿತಾರಣ್ಯದೊಳಗಿನಿಂದ ರಸ್ತೆ ಹಾದುಹೋಗುತ್ತಿದ್ದುದರಿಂದ ರಸ್ತೆ ಅಭಿವೃದ್ಧಿಗೆ ತಾಂತ್ರಿಕ ಅಡಚಣೆ ಇತ್ತು. ಸ್ಥಳೀಯ ಸಂಸದರು ಹಾಗೂ ಶಾಸಕರ ನೆರವಿನಿಂದಾಗಿ ಕೊನೆಗೂ ರಸ್ತೆ ಅಭಿವೃದ್ಧಿಯಾಗಿದೆ ಎಂದು ಸಾಮಾಜಿಕ ಮುಂದಾಳು ಭಾಸ್ಕರ ಗೌಡ ಇಚ್ಲಂಪಾಡಿ ಅವರು ಹೇಳಿದ್ದಾರೆ. ಹೋರಾಟಕ್ಕೆ ಕೊನೆಗೂ ಜಯ
ಜನರು ಸಂಘಟಿತರಾಗಿ ಹೋರಾಟ ನಡೆಸಿದರೆ ಯಶಸ್ಸನ್ನು ಕಾಣಬಹುದು ಎನ್ನುವುದಕ್ಕೆ ಈ ಹೋರಾಟವೇ ಸಾಕ್ಷಿ. ಮುಖ್ಯವಾಗಿ ಮಾಧ್ಯಮಗಳು ಹಾಗೂ ಸ್ಥಳೀಯ ಜನರು ನಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಲೋಕೋಪಯೋಗಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಜನಪರ ಕಾಳಜಿಯಿಂದಾಗಿ ಹಲವು ತೊಡಕುಗಳಿದ್ದರೂ ಸುಂದರ ರಸ್ತೆಯ ನಿರ್ಮಾಣ ಸಾಧ್ಯವಾಗಿದೆ.
– ಜಯಂತ್ ಇಚ್ಲಂಪಾಡಿ
ನೀತಿ ತಂಡದ ರಾಜ್ಯಾಧ್ಯಕ್ಷ ತೊಂದರೆಯಾಗದಂತೆ ಅಭಿವೃದ್ಧಿ
ಒಟ್ಟು 1.23 ಕೋಟಿ ರೂ. ಅನುದಾನದಲ್ಲಿ ಇಚ್ಲಂಪಾಡಿ (ಕಾಯರ್ತಡ್ಕ) -ಪೆರಿಯಶಾಂತಿ ನಡುವೆ ಇರುವ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ರಸ್ತೆಯು ರಕ್ಷಿತಾರಣ್ಯದೊಳಗಿನಿಂದ ಹಾದುಹೋಗುತ್ತಿರುವುದರಿಂದ ಅಗಲಗೊಳಿಸಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯ ಅನುಮತಿ ಆಗತ್ಯವಿತ್ತು. ರಸ್ತೆ ಅಗಲಗೊಳಿಸಲು ಬಳಸುವ ಅರಣ್ಯ ಜಮೀನಿನಷ್ಟೇ ವಿಸ್ತೀರ್ಣದ ಜಮೀನನ್ನು ಕಂದಾಯ ಇಲಾಖೆ ಅರಣ್ಯ ಇಲಾಖೆಗೆ ನೀಡಬೇಕಿತ್ತು. ಆ ಪ್ರಕ್ರಿಯೆ ಇನ್ನಷ್ಟು ತಡವಾಗುವ ಸಾಧ್ಯತೆಗಳಿದ್ದುದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಪ್ರಸ್ತುತ ಇದ್ದ ಜಾಗವನ್ನೇ ಬಳಸಿಕೊಂಡು ರಸ್ತೆ ಅಭಿವೃದ್ಧಿಪಡಿಸಲಾಗಿದೆ.
– ಪ್ರಮೋದ್‌ಕುಮಾರ್ ಕೆ.ಕೆ.
ಪಿಡಬ್ಲ್ಯೂಡಿ ಎಇ ಪುತ್ತೂರು ನಾಗರಾಜ್ ಎನ್.ಕೆ.