Advertisement
ನಗರದಿಂದ ಬಪ್ಪಳಿಗೆ ಮೂಲಕ ಬಲಾ°ಡು ಬಳಿ ಎಡಕ್ಕೆ ಒಳ ರಸ್ತೆಯಲ್ಲಿ ಚಲಿಸಿದರೆ ಈ ಸಿಂಗಾಣಿ, ಪೆರಿಯತ್ತೋಡಿ ಪ್ರದೇಶ ಸಿಗುತ್ತದೆ. ಈ ರಸ್ತೆ ಇನ್ನೊಂದು ಭಾಗದಿಂದ ಮಂಜಲ್ಪಡ³ನ್ನು ಸಂಪರ್ಕಿಸುತ್ತದೆ. ಈ ಪ್ರದೇಶದಲ್ಲಿ ದಾರಿಯುದ್ದಕ್ಕೂ ಸಾಗುತ್ತಿ ದ್ದಂತೆ ರಸ್ತೆಯುದ್ದಕ್ಕೂ ನೀರು ಸಂಗ್ರಹಿಸುವ ಪ್ಲಾಸ್ಟಿಕ್ ಡ್ರಮ್, ಬಕೆಟ್ ಮುಂತಾದ ಪಾತ್ರೆಗಳನ್ನು ರಸ್ತೆ ಬದಿ ಇಟ್ಟು ನಗರಸಭೆಯ ನೀರಿಗಾಗಿ ಕಾಯುವ ಸ್ಥಿತಿ ಕಾಣಸಿಗುತ್ತದೆ.
ಪೆರಿಯತ್ತೋಡಿ ಪ್ರದೇಶದಲ್ಲಿರುವ ಕಾಲನಿಯಲ್ಲಿ ಸುಮಾರು 15-20ರಷ್ಟು ಮನೆಗಳಿದ್ದು, ಇಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕೊಳವೆ ಬಾವಿ ನೀರಿಲ್ಲದೆ ಬತ್ತಿ ಹೋಗಿದೆ. ಅಕ್ಕಪಕ್ಕದಲ್ಲಿರುವ ಬಾವಿಯೂ ಬತ್ತಿ ಹೋಗಿದ್ದು, ನಗರಸಭೆಯ ವತಿಯಿಂದ ನೀಡುವ ನೀರೇ ಗತಿಯಾಗಿದೆ. ಕೆಲವೊಮ್ಮೆ ನೀರು ಬಂದರೂ ಆಯಿತು, ಬಾರದಿದ್ದರೂ ಆಯಿತು. ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸಿಕ್ಕಿದರೂ ಅಗತ್ಯದಷ್ಟು ನೀರು ಕೆಲವೊಮ್ಮೆ ಸಿಗುವುದೇ ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಮೂರು ತಿಂಗಳಿನಿಂದ ಹಾಹಾಕಾರ
ಮೂರು ತಿಂಗಳಿನಿಂದ ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದ ನಿವಾಸಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಒಂದು ಕಿ.ಮೀ.ಗೂ ಅಧಿಕ ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ ಉಂಟಾಗಿದೆ. ನೀರಿಗಾಗಿ ಹೊಸ ಕೊಳವೆ ಬಾವಿಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಗರಸಭೆ ವತಿಯಿಂದ ಟ್ಯಾಂಕರ್‌ಗಳಲ್ಲಿ ಹೆಚ್ಚಿನ ನೀರು ನೀಡುವ ಸರಿಯಾದ ವ್ಯವಸ್ಥೆ ಮಾಡಲಿ ಎನ್ನುವುದು ಇಲ್ಲಿನ ನಿವಾಸಿಗಳಾದ ಶಾಂತಿ, ಶೋಭಿತಾ ಅವರ ಆಗ್ರಹವಾಗಿದೆ.
Related Articles
ಪೆರಿಯತ್ತೋಡಿ, ಸಿಂಗಾಣಿ ಪರಿಸರದಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ. ಶಾಸಕರು ಹಾಗೂ ನಗರಸಭೆ ವತಿಯಿಂದ ಎರಡು ಕೊಳವೆ ಬಾವಿ ಕೊರೆಸಲು ಅನುದಾನ ಒದಗಿಸಲಾಗಿದೆ. ಪಾಯಿಂಟ್ ಕೂಡ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಇಲ್ಲಿ ಕೊಳವೆ ಬಾವಿ ಕೊರೆಸುತ್ತೇವೆ.
– ನವೀನ್ ಕುಮಾರ್, ನಗರಸಭೆ ಸದಸ್ಯರು
Advertisement