Advertisement
ಎಲ್ಲರೂ ಸಂಭ್ರಮದಿಂದಲೇ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡತೊಡಗಿದೆವು. ಮೂರು ವರ್ಷಗಳ ಈ ಡಿಗ್ರಿ ಜೀವನದಲ್ಲಿ ನಮಗೆ ಇದೇ ಕೊನೆಯ ಪ್ರತಿಭಾ ಪ್ರದರ್ಶನ ಎಂಬ ವಿಷಯ ತಿಳಿದೇ ಇದ್ದರೂ ಏನೋ ನೋವು, ಮುಂದಿನ ವರ್ಷ ನಮ್ಮ ತಂಡದ performance ಇರುವುದಿಲ್ಲ. ಇದೇ ಕೊನೆಯ ಬಾರಿಗೆ ನಾವು ಏನು ಎಂದು ಸಾಬೀತು ಮಾಡಬೇಕೆಂದು ಪಣತೊಟ್ಟೆವು.
Related Articles
Advertisement
18 ತಂಡಗಳ ವೈವಿದ್ಯತೆ ಕಣ್ಣಿಗೆ ಹಬ್ಬವಾಗಿತ್ತು. ದೇಶಭಕ್ತಿ, ದೈವಭಕ್ತಿ, ತುಳುನಾಡ ಸಿರಿ, ಕರುನಾಡ ನಮ್ಮ ಬೀಡು, ವಿಷ್ಣು ದಶಾವತಾರ, ಯುಗ ಪರಿಕಲ್ಪನೆ, ಭಕ್ತ ಪ್ರಹ್ಲಾದನ ಕಥೆ, ಬಿಡುವನೇ ಬ್ರಹ್ಮಲಿಂಗ ಹೀಗೆ ದ್ವಾಪರ ಯುಗ ತ್ರೇತಾಯುಗದಿಂದ ಕಲಿಯುಗದವರೆಗಿನ ಎಲ್ಲ ಮಜಲುಗಳನ್ನು ಪರಿಚಯಿಸಿದರೆ ನಮ್ಮ ತಂಡ ಮಾತ್ರ ಈ ಯುಗದ ಹೆಣ್ಣಿನ ಬೆಳವಣಿಗೆ ಮತ್ತು ಈ ಕಾಲಘಟ್ಟದ ಮಾನವೀಯ ಸಂಬಂಧಗಳ ಮೌಲ್ಯವನ್ನು ತಿಳಿಸಿದ್ದು ಮಾತ್ರ ಸಂಭ್ರಮದ ಸಂಗತಿಯಾಗಿತ್ತು.
ಬೆಳಗ್ಗೆಯ ಯಾವ ಪ್ರದರ್ಶನವನ್ನು ನೋಡಲು ನಮಗಾಗದಿದ್ದರೂ ಕೊನೆಯ ಠಿಚlಛಿnಠಿs ಛಚy ಎಲ್ಲರೂ ಚೆನ್ನಾಗಿ ಮಾಡಬೇಕೆಂದು ಪಣತೊಟ್ಟ ನಾವು ಕೊಟ್ಟ ಅವಧಿಯಲ್ಲಿ ಚಿಕ್ಕದಾಗಿ ಚೊಕ್ಕದಾಗಿ ವೈವಿಧ್ಯಮಯವಾಗಿ ತರಗತಿಯ ಶೇ. 90ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರದರ್ಶಿಸಿದ ತಂಡ ನಮ್ಮದು ಮಾತ್ರ.
ಎಲ್ಲರೂ ಬಂದು ಹೊಗಳಿದ್ದೆ ಹೊಗಳಿದ್ದು, ನಿರೂಪಣೆಯ ಕುರಿತು, ಓವರ್‌ಆಲ್ ಪರ್ಫಾರ್ಮೆನ್ಸ್ ಇಷ್ಟರ ಒಳಗೆ ನಿಮ್ಮದೇ ಚೆನ್ನಾಗಿತ್ತು ಎಂದು ನೋಡುಗರು ಹೊಗಳಿದ್ದರು. ನಮ್ಮ ಉಪನ್ಯಾಸಕರು, ಜೂನಿಯರ್ ಎಲ್ರೂ ಬಂದು ತುಂಬು ಹೃದಯದಿಂದ ಪ್ರಶಂಸಿಸಿದರು. ಆದರೆ ಹೊಗಳಿಕೆಗೆ ಹಿಗ್ಗುವ ಮನಸ್ಥಿತಿಯಲ್ಲಿ ನಾವಿರಲಿಲ್ಲ. ಆ ಪ್ರಶಂಸೆಯೇ ನಮಗೆ ದೊಡ್ಡ ಬಹುಮಾನದಂತಾಯಿತು. ಕೊನೆಗೆ ಗೆಲುವು ನಮ್ಮದಾಗುತ್ತೋ ಇಲ್ಲವೋ; ಆದರೆ ಈ ಎಲ್ಲ ಮನಸ್ಸುಗಳ ಮಾತುಗಳು ನಮಗೆ ಗೆದಷೇr ಸಂತಸ ನೀಡಿತ್ತು.
ಮಧ್ಯಾಹ್ನ ಹಿಂದೆ ಕುಳಿತು ಕಾರ್ಯಕ್ರಮ ನೋಡಿದ ಅನುಭವವೇ ಬೇರೆ. ಯಾವ ಯಾವ ಬಹುಮಾನ ಯಾರಿಗೆ ಬರಬಹುದು ಎಂದು ಊಹೆ ಮಾಡುತ್ತಿದ್ದವರು ನಾವುಗಳು. ಎಲ್ಲಾ ತಂಡಗಳ ಪರ್ಫಾರ್ಮೆನ್ಸ್ ಮುಗಿದ ಅನಂತರ ಕಾಲೇಜಿನ ಗಾಯನ ಪ್ರತಿಭೆಗಳಿಂದ ಸಂಗೀತ ರಸ ಮಂಜರಿ ಕಿವಿಯನ್ನು ಇಂಪಾಗಿಸಿತು. ಎಲ್ಲರೂ ಬೆಳಗ್ಗೆಯಿಂದ ಕಾತುರದಿಂದ ಕಾದ ಸಮಯ ಬಂದೇ ಬಿಟ್ಟಿತು; ಬಹುಮಾನ ವಿಜೇತರ ಪಟ್ಟಿಯನ್ನು ಘೋಷಿಸುವ ಘಳಿಗೆ. ಎಲ್ಲರೂ ತಂತಮ್ಮ ತಂಡದ ಗೆಲುವಿಗಾಗಿ ಕಾದು ಕುಳಿತ ಸಮಯ.
ಕೊನೆಗೆ ನಮ್ಮ ತಂಡ ಈ ವರ್ಷದ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮೂರು ವರ್ಷಗಳಿಂದ ಪಟ್ಟ ಪರಿಶ್ರಮ ಅದೆಷ್ಟೋ, ಸೋತ ಅನುಭವಗಳು ಅದೆಷ್ಟು, ಕಣ್ಣಿಂದ ಜಾರಿದ ಹನಿ ಅದೆಷ್ಟೋ, ಕಂಡ ಕನಸು ಎಂದು ನನಸಾಗುವುದಿಲ್ಲ ಎಂದು ಒಮ್ಮೆ ಆತ್ಮವಿಶ್ವಾಸ ಕಳೆದುಕೊಂಡರೂ, ನಮಗೂ ಒಂದು ಸಮಯ ಬಂದೇ ಬರುತ್ತೆ ಎಂದು ಭರವಸೆಯೊಂದಿಗೆ ಮುನ್ನಡೆದು; ಹಲವರು ನಮ್ಮ ಮೇಲೆ ಇಟ್ಟ ನಂಬಿಕೆಯ ಪ್ರತಿಫಲ. ಎಲ್ಲರೂ ಕಂಡ ಕನಸು ನನಸು ನನಸಾದ ಕ್ಷಣ. ಮೂರು ವರ್ಷದ ಪರಿಶ್ರಮಕ್ಕೆ ಕೊನೆಗೂ ಸಿಕ್ಕ ಗೆಲುವು… ಕೊನೆಯ ಟ್ಯಾಲೆನ್ಸ್ ಡೇನ ಸಂಭ್ರಮ ಹಲವು ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ.
-ರಶ್ಮಿ ಉಡುಪ
ಮೊಳಹಳ್ಳಿ