ಹೊಂದಿದ್ದರೆ ಸಾಧನೆ ಮಾಡಲು ಸಾಧ್ಯ. ಇದನ್ನು ತಾವು ಜೀವನುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದೇವೆ.
Advertisement
ಕನ್ನಡ ಸಾಹಿತ್ಯ ಪರಿಷತ್ ರವಿವಾರ ಸಂಜೆ ಆಯೋಜಿಸಿದ್ದ ಮನದಾಳದ ಮಾತು ಕಾರ್ಯಕ್ರಮದಲ್ಲಿ ಹೀಗೆ ಅನುಭಾವದ ಸಂದೇಶ ನೀಡಿದ್ದು ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ. ಬಾಲ್ಯದಲ್ಲಿ ತಾವು ಶಿಕ್ಷಣ ಕಡೆಗೆ ಹೆಚ್ಚಿನ ಆಸಕ್ತಿಹೊಂದಿರಲಿಲ್ಲ. ವಾಲಿಬಾಲ್ ಚಾಂಪಿಯನ್ ಶಿಪ್‌ದಲ್ಲಿ ಪಾಲ್ಗೊಂಡಿದ್ದೆ. ಗಣಿತವಂತೂ ಕಬ್ಬಿಣದ ಕಡಲೆಯಾಗಿತ್ತು. ನಂತರ ಆಸಕ್ತಿ ವಹಿಸಿ ಕಠಿಣವಾಗಿ ಅಭ್ಯಸಿಸಿ 80 ಅಂಕ ಪಡೆದೆ. ಅದೇ ರೀತಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲೂ ಪರಿಣಾಮಕಾರಿಯಾಗಿ ಓದಿದೆ. ಅಷ್ಟೋತ್ತಿಗೆ ಮಹಾದಾಸೋಹ ಸಂಸ್ಥಾನಪೀಠ ಹಾಗೂ ಶಿಕ್ಷಣ ಸಂಸ್ಥೆ ಮುನ್ನಡೆಸುವ ಜವಾಬ್ದಾರಿ ಹೆಗಲ ಮೇಲೆ ಬಂತು. ಲಂಡನ್ ಕೆಂಬ್ರಿಡ್ಜ್ ವಿದ್ಯಾಲಯದಲ್ಲಿ ಜನರು ಹೇಗೆ ಓದುತ್ತಾರೆಯೂ ಅದೇ ರೀತಿ ತಮ್ಮ ಸಂಸ್ಥೆಯಾಗಬೇಕೆನ್ನುವ ಬಯಕೆಯಿದೆ. ಅದೇ ರೀತಿ ಒಂದೊಂದೇ ಹೆಜ್ಜೆ ಇಡಲಾರಂಭಿಸಿದ್ದೇವೆ ಎಂದು
ಹೇಳಿದರು.
Related Articles
Advertisement
ಸಿ.ಎಸ್. ಮಾಲಿಪಾಟೀಲ ಪ್ರಾರ್ಥನಾಗೀತೆ ಹಾಡಿದರು. ಭೀಮರಾವ್ ಅರಕೇರಿ ನಿರೂಪಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್ ನಿಷ್ಠಿ, ಕುಲಸಚಿವರಾದ ಡಾ| ವಿ.ಡಿ. ಮೈತ್ರಿ, ಪ್ರೊ| ಎನ್.ಎಸ್. ದೇವರಕಲ್, ಡಾ| ಅನೀಲಕುಮಾರ ಬಿಡವೆ, ಡೀನ್ ಡಾ| ಲಿಂಗರಾಜ ಶಾಸ್ತ್ರೀ, ಸಾಹಿತಿಗಳಾದ ಪ್ರೊ| ವಸಂತ ಕುಷ್ಟಗಿ, ಎ.ಕೆ.ರಾಮೇಶ್ವರ ಹಾಜರಿದ್ದರು.ಡಾ| ಅಪ್ಪ ಅವರ ಆರೋಗ್ಯ ಸೂತ್ರ ತಾವು ಸದೃಢ ಆರೋಗ್ಯ ಹೊಂದಿರಲು 70 ವಯಸ್ಸಿನವರೆಗೂ ಸೂರ್ಯ ನಮಸ್ಕಾರ, ವ್ಯಾಯಾಮ ಅಳವಡಿಸಿಕೊಂಡಿರುವುದೇ ಕಾರಣ. ಅಲ್ಲದೇ ರಾತ್ರಿ ಕಡಿಮೆ ಊಟ ಮಾಡುವ ರೂಢಿ ಮೈಗೂಡಿಸಿಕೊಂಡಿರುವುದು ಹಾಗೂ ಕಾಯಕ ಧೋರಣೆ ಸದಾ ಹೊಂದಿರುವುದೇ ತಮ್ಮ ಆರೋಗ್ಯಗುಟ್ಟು. ಕರಿದ ಪದಾರ್ಥಗಳನ್ನು ತಿನ್ನಬಾರದು. ದಿನಾಲು ಬೆಳಗ್ಗೆ ಎದ್ದ ತಕ್ಷಣ ನಾಲ್ಕು ಗ್ಲಾಸು ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಹೀಗೆ ಮಾಡಿದಲ್ಲಿ ನೈಸರ್ಗಿಕ ಕ್ರಿಯೆ ಕ್ರಮಬದ್ಧವಾಗುತ್ತದೆ. ಅಲ್ಲದೇ ಮೊಣಕಾಲು ನೋವು ಬರೋದಿಲ್ಲ. ಜೇನುತುಪ್ಪ ದಾಲ್‌ಚಿನ್ನಿ ತಿನ್ನಬೇಕು. ಒಟ್ಟಾರೆ ತಾವು ಬದುಕಿ ಇನ್ನೊಬ್ಬರನ್ನು ಬದುಕಿಸಬೇಕು ಎಂದು ಡಾ| ಶರಣಬಸವಪ್ಪ
ಅಪ್ಪ ಹೇಳಿದರು. ಶರಣಬಸವ ವಿವಿಯಲ್ಲಿ ಅಧ್ಯಯನ ಪೀಠ ಶರಣಬಸವ ವಿಶ್ವವಿದ್ಯಾಲಯಕ್ಕೆ ತಿಂಗಳಿಗೆ ಮೂರು ಕೋಟಿ ರೂ. ಖರ್ಚು
ಮಾಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವುದೇ ತಮ್ಮ ಧ್ಯೇಯವಾಗಿದೆ. ಸಂಸ್ಥೆಯಲ್ಲಿ ಮೂರು ಸಾವಿರ ಶಿಕ್ಷಕ- ಶಿಕ್ಷಕೇತರ ವರ್ಗದವರಿದ್ದಾರೆ. ತಿಂಗಳಿಗೆ 20 ಕೋಟಿ ರೂ. ಪಗಾರ ನೀಡಲಾಗುತ್ತಿದೆ. ಶರಣಬಸವ ವಿವಿಯಲ್ಲಿ ಪರಿಣಾಮಕಾರಿ ಅಧ್ಯಯನ ಪೀಠಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಕುಲಸಚಿವ ಅನೀಲಕುಮಾರ ಬಿಡವೆ ಹಾಗೂ
ಉದ್ಯಮಿ ಎಸ್.ಎಸ್. ಪಾಟೀಲ ತಲಾ 10 ಲಕ್ಷ ರೂ. ನೀಡಿದ್ದಾರೆ. ವಿಶ್ವದಲ್ಲಿ 200 ಉತ್ತಮ ವಿವಿಗಳೆಂದು ಗುರುತಿಸಲಾಗಿದೆ. ಅದರಲ್ಲಿ ದೇಶದ ಒಂದೂ ವಿವಿ ಇಲ್ಲ. ಆದರೆ ಶರಣಬಸವ ವಿವಿ ಸೇರಬೇಕೆಂಬುದು ತಮ್ಮ ಅಭಿಲಾಷೆಯಾಗಿದೆ.
ಡಾ| ಶರಣಬಸವಪ್ಪ ಅಪ್ಪ, ಕುಲಾಧಿಪತಿಗಳು, ಶರಣಬಸವ ವಿವಿ