Advertisement
ರಥಬೀದಿ, ಹೊರೆಕಾಣಿಕೆ ಸ್ಥಳದ ಗದ್ದೆ, ಪೇಜಾವರ ಮಠದ ಮುಂಭಾಗ, ಶ್ರೀಕೃಷ್ಣ ಮಠದ ಎದುರು, ಕಿನ್ನಿಮೂಲ್ಕಿ, ಸರ್ವಿಸ್ ಬಸ್ ತಂಗುದಾಣ, ಹಳೆ ಕೆಎಸ್ಸಾರ್ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ತ್ರಿಶಾ ಸರ್ಜಿಕಲ್ ಬಳಿ, ಗಿರಿಜಾ ಸರ್ಜಿಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
Related Articles
Advertisement
ಮಕ್ಕಳಿಂದ ಪಾರಾಯಣ
ಭಗವದ್ಗೀತೆಯ 18 ಅಧ್ಯಾಯದ ಫಲಕದೊಂದಿಗೆ ಕಿನ್ನಿಮೂಲ್ಕಿಯ ಸಂಸ್ಥೆಯೊಂದರ 40ರಿಂದ 50 ಮಂದಿ ಮಕ್ಕಳು ಪಾರಾಯಣ ಮಾಡುವರು. 108 ಕೃಷ್ಣಭಕ್ತರಿಂದ ಭಜನೆ, ವೈವಿಧ್ಯಮಯ ಕೋಲಾಟ, ಕುಣಿತ ಭಜನೆ, ಬಳ್ಳಾರಿಯ ಕೋಲಾಟ, ಜನಪದ ಕಲಾ ಸಂಸ್ಕೃತಿ ಬಿಂಬಿಸುವ ಕಂಬಳದ ಜೀವಂತ ಕೋಣ, ತುಳುನಾಡ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋ, ಪರಶುರಾಮನ ಬೃಹತ್ ವಿಗ್ರಹ ಇರಲಿದೆ.
ಹುಲಿಯ ಟ್ಯಾಬ್ಲೋ, ಚಿಲಿಪಿಲಿ ಗೊಂಬೆಗಳು, ಜನಪದ ಕಲೆಗಳು, ದರ್ಪಣ ಸಂಸ್ಥೆಯ 35 ಮಂದಿ ಮಹಿಳೆಯರ ಹುಲಿವೇಷ, ಕುರ್ಕಾಲಿನ 30 ಮಂದಿಯ ಹುಲಿವೇಷ, ಕೇರಳ ಶೈಲಿಯ ಧರ್ಮಾರ್ಥವಾಗಿ 70 ಚೆಂಡೆಗಳು, 70 ಮಂದಿಯ ಚೆಂಡೆ ಹಾಗೂ ಪಿಟೀಲು ವಾದನ ಮೆರವಣಿಗೆಯಲ್ಲಿರಲಿದೆ.
ಎಲ್ಲಿ ನೋಡಿದರೂ ಅಲ್ಲೇ ರಾಮ
ಮಧ್ವಗಾನ ಯಾನ, ಜೋಗಿ ಸಮಾಜದ ಕುಣಿತ ಭಜನೆ, ವಿಷ್ಣುಸಹಸ್ರನಾಮ ಶ್ಲೋಕಗಳು, ಕೋಟಿಗೀತ ಯಜ್ಞದ ಭೂಮಂಡಲ ಮಾಡಿ ಡಿಜಿಟಲ್ ಮೂಲಕ ತೋರಿಸುವ ವ್ಯವಸ್ಥೆ, ವಾದ್ಯ, ಬ್ಯಾಂಡ್‌ಸೆಟ್‌ಗಳು, ಸ್ಯಾಕೊÕಫೋನ್, ಕೇರಳ ಶೈಲಿಯ ಪಂಚವಾದ್ಯ ಮೆರವಣಿಗೆ ಉತ್ಸವಕ್ಕೆ ಇನ್ನಷ್ಟು ಕಳೆ ತುಂಬಲಿದೆ. ಅಯೋಧ್ಯೆ ರಾಮಮಂದಿರದ ಟ್ಯಾಬ್ಲೋ, ಪೌರಾಣಿಕ ಸನ್ನಿವೇಶದ ಟ್ಯಾಬ್ಲೋ, ಕೆಮ್ಮುಂಡೇಲು ಹಿ.ಪ್ರಾ. ಶಾಲೆಯ “ಗರುಡನಲ್ಲಿ ಕೃಷ್ಣ’ ಕಲ್ಪನೆಯ ಮಕ್ಕಳಿಂದಲೇ ರಚಿಸಲ್ಪಟ್ಟ ಮೋಡದ ಮೇಲೆ ಕೃಷ್ಣ ಹೋಗುವಂತಹ ಟ್ಯಾಬ್ಲೋಗಳು ಜನರನ್ನು ರಂಜಿಸಲಿವೆ.