ಹೊಸದುರ್ಗ: ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ, ಸಾಮಾಜಿಕ, ಶೈಕ್ಷಣಿಕ ಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ವೇದಿಕೆ ಒದಗಿಸಿದಾಗ ಅವರ ಅನುಭ ವಗಳು, ವಿದ್ಯಾರ್ಥಿಗಳು ಸೇರಿದಂತೆ ಯುವ ಪೀಳಿಗೆಗೆ ಸ್ಫೂರ್ತಿ, ಆತ್ಮವಿಶ್ವಾಸ ತುಂಬುವಲ್ಲಿ ಸಹಕಾರಿಯಾಗಲಿದೆ. ಈ ಮೂಲಕ ಸಾಧಕರ ಸಾಧನೆಯನ್ನು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಕಾರ್ಯದಲ್ಲಿ ಸದುಪಯೋಗ ಪಡಿಸಿ ಕೊಳ್ಳ ಬೇಕಿದೆ ಎಂದು ಉದ್ಯಮಿ ನಿರಂಜನ ಕೊರಕ್ಕೋಡು ಹೇಳಿದರು.
ಕೀಕಾನ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿರುವ ನಳಂದ ಪಬ್ಲಿಕ್ ಸ್ಕೂಲ್‌ನ ಶೈಕ್ಷಣಿಕ ಸಾಧನೆಯ ಮಹತ್ವದ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸಮಾನತೆ, ಮೂಢನಂಬಿಕೆ, ಮಾದಕ ವ್ಯಸನ, ಸಮಾಜಬಾಹಿರ ಕೃತ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳದಂತೆ ತಿಳಿ ಹೇಳುವ ಕಾರ್ಯ ಸಾಧಕರು, ಸಾಹಿತಿಗಳು, ಕಲಾವಿದರು, ಶಿಕ್ಷಕರು ಮತ್ತು ಪೋಷಕರ ಮೂಲಕ ನಡೆಯಬೇಕಿದ್ದು, ಋಣಾತ್ಮಕ ಚಿಂತನೆ ಅಭಿವ್ಯಕ್ತಿಗೊಳ್ಳುವಂತೆ ಸಾಹಿತಿಗಳು, ಸಂಘಟಕರು ಗಮನ ಹರಿಸಬೇಕಿದೆ.
ಈ ನಿಟ್ಟಿನಲ್ಲಿ ನಳಂದ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ ವೃಂದ, ಆಡಳಿತ ವರ್ಗದ ವ್ಯಕ್ತಿತ್ವ ವಿಕಸನ ಯೋಜನೆಗಳು ಸರ್ವತ್ರ ಅನುಕರಣೀಯ ಎಂದರು.
ಹೊಸದುರ್ಗ ಕೀಕಾನ ನಳಂದ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಗಿರೀಶ್ ಮಾಸ್ಟರ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಉಪಸಂಘ ಕೀಕಾನ ಅಧ್ಯಕ್ಷರಾದ ಸುಧಾನಂದ ರಾವಣೇಶ್ವರ, ಚಿತ್ತಾರಿ ಉಪಸಂಘದ ಕಾರ್ಯದರ್ಶಿ ಗಣೇಶ್ ಬಿ.ಮಲ್ಲಿಗೆಮಾಡು, ಸಾಹಿತಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಉಪಸ್ಥಿತರಿದ್ದರು.
ಗೌರೀಶಂಕರ್ ಮುಕ್ಕೂಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಭಾಶಂಕರ ಬೇಲೆಗದ್ದೆ ವಂದಿಸಿದರು.
ನೀಡಿ ದಾನವತ್ವವನ್ನು ಹೋಗಲಾಡಿಸಿ ಮಾನವರಾಗಿ ಬಾಳ್ಳೋಣ ಎಂದು ನುಡಿದರು.
ಸಮಾರಂಭದಲ್ಲಿ ಹಿಂದೆ ನಡೆದ ನಕ್ಷತ್ರೇಷ್ಟಿ ಯಾಗದ ಸಾಕ್ಷÂಚಿತ್ರದ ಸಿಡಿಯನ್ನು ಪೂಜ್ಯರುಗಳು ಬಿಡುಗಡೆಗೊಳಿಸಿದರು. ಕೋತಮಂಗಲಂ ವಾಸುದೇವನ್ ನಂಬೂದಿರಿ ಅವರನ್ನು ಸನ್ಮಾನಿಸಲಾಯಿತು. ಡಾ.ನಾರಾಯಣ ಭಟ್ಟತ್ತಿರಿಪ್ಪಾv ಶ್ರೀಯುತರ ಸಾಧನೆಗಳ ವಿಸ್ಕೃತ ಪರಿಚಯ ನೀಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀಗಳು ಉಪಸ್ಥಿತರಿದ್ದರು.