Advertisement
ನಿಯಮದ ಅನ್ವಯ ಮೀಸಲಾತಿ ಮಾಡಿಲ್ಲವೆಂಬ ಕಾರಣ ಹಾಗೂ ವಾರ್ಡ್ ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಅವದಿ ಮುಗಿದು ಎರಡು ವರ್ಷ ಕಳೆದರೂ ನಗರಸಭೆಗೆ ಇನ್ನೂ ಚುನಾವಣೆ ನಡೆದಿಲ್ಲ.
ಆಕ್ಷೇಪಣೆ 7 ದಿನಗಳ ಒಳಗಾಗಿ ಕಾರಣಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕರಡು ಮೀಸಲಾತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪಕ್ರಟಿಸಲಾದ್ದು, 7 ದಿನಗಳ ನಂತರ ಈ ಅಧಿಸೂಚನೆ ಪರಿಗಣನೆಗೆ ಒಳಪಡಲಿದೆ. ವಾರ್ಡ್‌ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಇದೇ ತಿಂಗಳ 27 ರಂದು ನ್ಯಾಯಾಲಯದ ಮುಂದೆ
ಪ್ರಕರಣ ಬರಲಿದ್ದು, ಅಂದಿನ ಆದೇಶವನ್ನು ಕಾದುನೋಡಬೇಕಿದೆ. ವಾರ್ಡ್‌ವಾರು ಮೀಸಲಾತಿ ಪಟ್ಟಿ:
1.ಆಶ್ರಯ ಬಡಾವಣೆ: ಬಿಸಿಎಂ – ಎ (ಮಹಿಳೆ), 2.ಬಸವೇಶ್ವರ ನಗರ: ಸಾಮಾನ್ಯ. 3.ಮುತ್ಸಂದ್ರ: ಬಿಸಿಎಂ – ಬಿ (ಮಹಿಳೆ), 4.ವಿನಾಯಕನಗರ: ಸಾಮಾನ್ಯ. 5.ಸಿದ್ದೇನಾಯಕನಹಳ್ಳಿ: ಸಾಮಾನ್ಯ (ಮಹಿಳೆ). 6.ಮುತ್ತೂರು: ಪರಿಶಿಷ್ಟ ಪಂಗಡ. 7.ಶ್ರೀನಗರ: ಹಿಂದುಳಿದ ವರ್ಗ – ಬಿ. 8.ಖಾಸ್ ಬಾಗ್, ದರ್ಗಾಪುರ: ಹಿಂದುಳಿದ ವರ್ಗ – ಎ. 9.ಸಂಜಯನಗರ: ಸಾಮಾನ್ಯ, 10.ವಿದ್ಯಾನಗರ: ಹಿಂದುಳಿದ ವರ್ಗ – ಎ (ಮಹಿಳೆ), 11.ಕರೇನಹಳ್ಳಿ-1: ಸಾಮಾನ್ಯ, 12.ಕನಕದಾಸನಗರ: ಪ.ಜಾತಿ, 13.ಭುವನೇಶ್ವರಿ ನಗರ: ಹಿಂದುಳಿದ ವರ್ಗ – ಎ. 14.ನೇಯ್ಗೆಬೀದಿ: ಸಾಮಾನ್ಯ (ಮಹಿಳೆ), 15.ತೂಬಗೆರೆಪೇಟೆ: ಹಿಂದುಳಿದ ವರ್ಗ – ಎ (ಮಹಿಳೆ),
16.ಗಾಂಧಿನಗರ: ಸಾಮಾನ್ಯ, 17.ಕುಚ್ಚಪ್ಪನಪೇಟೆ: ಸಾಮಾನ್ಯ, 18.ವೀರಭದ್ರನಪಾಳ್ಯ-ಕಲ್ಲುಪೇಟೆ: ಪ.ಜಾತಿ, 19.ದೇವರಾಜನಗರ: ಹಿಂದುಳಿದ ವರ್ಗ – ಎ, 20.ತ್ಯಾಗರಾಜನಗರ: ಸಾಮಾನ್ಯ (ಮಹಿಳೆ), 21.ಹೇಮಾವತಿಪೇಟೆ: ಸಾಮಾನ್ಯ, 22.ಚಿಕ್ಕಪೇಟೆ:
ಹಿಂದುಳಿದ ವರ್ಗ – ಎ (ಮಹಿಳೆ). 23.ಗಾಣಿಗರಪೇಟೆ: ಸಾಮಾನ್ಯ, 24.ಎಲೇಪೇಟೆ: ಹಿಂದುಳಿದ ವರ್ಗ – ಎ, 25.ಮಾರುತಿನಗರ: ಸಾಮಾನ್ಯ (ಮಹಿಳೆ), 26.ರೋಜಿಪುರ,ಗಂಗಾಧರಪುರ: ಸಾಮಾನ್ಯ, 27.ಸೋಮೇಶ್ವರ ಬಡಾವಣೆ: ಸಾಮಾನ್ಯ (ಮಹಿಳೆ),
28.ಕಛೇರಿಪಾಳ್ಯ: ಪ.ಜಾತಿ(ಮಹಿಳೆ), 29.ಶಾಂತಿನಗರ: ಸಾಮಾನ್ಯ (ಮಹಿಳೆ), 30.ಇಸ್ಲಾಂಪುರ: ಸಾಮಾನ್ಯ (ಮಹಿಳೆ), 31.ಕರೇನಹಳ್ಳಿ-2: ಸಾಮಾನ್ಯ (ಮಹಿಳೆ).