ಹೆಬ್ರಿ: ಪೆರ್ಡೂರು ಬಂಟರ ಸಂಘದಿಂದ ಸಮಾಜ ಬಾಂಧವರು ಹಾಗೂ ದಾನಿಗಳ ನೆರವಿನಿಂದ ನಿರ್ಮಾಣವಾದ ಬಂಟರ ಸಮುದಾಯ ಭವನ ಲೋಕಾರ್ಪಣೆ ಸಮಾರಂಭದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಗಣ್ಯರಿಗೆ ಅಭಾರಿಯಾಗಿದ್ದೇನೆ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಹೇಳಿದರು.
ಅವರು ಫೆ. 17ರಂದು ಪೆರ್ಡೂರು ಬಂಟರ ಸಂಘದಿಂದ ನಿರ್ಮಾಣವಾದ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭಕ್ಕೆ ಸಂಘದ ಪದಾಧಿಕಾರಿಗಳ ಕೃತಜ್ಞತೆ ಸಭೆಯಲ್ಲಿ ಸಂಘದ ಪದಾಧಿಕಾರಿಗಳ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಸುಂದರ ಒಳಾಂಗಣವಿನ್ಯಾಸ ಹಾಗೂ ಅತ್ಯಾಕರ್ಷಕವಾಗಿ ರೂಪುಗೊಂಡ ಸಮುದಾಯ ಭವನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಈಗಾಗಲೇ ಹಲವಾರು ಕಾರ್ಯಕ್ರಮಗಳು ನಿಗದಿಯಾಗಿವೆ. ಮುಂದೆಯೂ ಎಲ್ಲರ ಸಹಕಾರ ಸಮುದಾಯ ಭವನಕ್ಕೆ ಇರಲಿ ಎಂದರು.
ಶಾಂತಾರಾಮ ಸೂಡ ಅವರ ನಾಯಕತ್ವ ಹಾಗೂ ಸಂಘದ ಎಲ್ಲ ಸದಸ್ಯ ಸಂಪೂರ್ಣ ಸಹಕಾರದಿಂದ ಅತ್ಯಂತ ಸುಂದರವಾಗಿ ಸಮಾರಂಭ ನಡೆಯುವುದರೊಂದಿಗೆ ರಾಜ್ಯವೇ ಗಮನಿಸುವಂತೆ ಮಾದರಿ ಕಾರ್ಯಕ್ರಮವಾಗಿದೆ ಎಂದು ಸಂಘದ ಗೌರವ ಸಲಹೆಗಾರ ದಿವಾಕರ ಶೆಟ್ಟಿ ಹೇಳಿದರು.
ಹರೀಶ್ ಶೆಟ್ಟಿ,ಉದಯ ಕುಮಾರ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.ವೀಣಾ ಎಸ್. ಸೂಡ, ಸಂಘದ ಕೋಶಾಧಿಕಾರಿ ಪ್ರಮೋದ್ ರೈ ಪಳಜೆ, ಉಪಾಧ್ಯಕ್ಷರಾದ ದಿನೇಶ್ಚಂದ್ರ ಶೆಟ್ಟಿ ಬಜ್ಜಾಲು, ಸತೀಶ್ ಶೆಟ್ಟಿ ಕುತ್ಯಾರು ಬೀಡು, ಮಹೇಶ್ ಶೆಟ್ಟಿ ಪೈಬೆಟ್ಟು,ರಾಜಕುಮಾರ್ ಶೆಟ್ಟಿ ದೊಡ್ಮನೆ, ಸುಧಾಕರ ಶೆಟ್ಟಿ, ಶಿವರಾಮ ಶೆಟ್ಟಿ ಬೆಳ್ಳರ್ಪಾಡಿ, ಸುರೇಶ್ ಹೆಗ್ಡೆ, ಬೆಂಗಳೂರಿನ ಉದ್ಯಮಿ ವಿಟuಲ ಶೆಟ್ಟಿ, ಕುಕ್ಕೆಹಳ್ಳಿ ಬಂಟರ ಸಂಘದ ಅಧ್ಯಕ್ಷ ಪ್ರಸಾದ್ ಹೆಗ್ಡೆ, ಪೆರ್ಡೂರು ಬಂಟರ ಸಂಘದ ಗೌರವ ಸಲಹೆಗಾರರಾದ ರವೀಂದ್ರ ಹೆಗ್ಡೆ, ಶಂಭುಶಂಕರ್ ಶೆಟ್ಟಿ, ರಾಘವ ಹೆಗ್ಡೆ ಸಾಂತ್ಯಾರು ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ.ಶೆಟ್ಟಿ ಕುತ್ಯಾರು ಬೀಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.