Advertisement
“ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿ ಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು’ ಹಸಿರು ಕರ್ನಾ ಟಕದ ಧ್ಯೇಯ. ಪ್ರತೀ ಮನೆಗೆ ಒಂದು ಗಿಡ ನೆಡುವ ಯೋಜನೆ ಇದು. ಇದರಡಿ ಪ್ರತೀ ಗ್ರಾ.ಪಂ.ಗೆತಲಾ 500 ಗಿಡ ವಿತರಿಸಲಾಗಿದೆ. ಸುಮಾರು 20ರಷ್ಟು ವಿವಿಧ ಜಾತಿಯ ಗಿಡಗಳನ್ನು ಈ ಯೋಜನೆಯನ್ವಯ ವಿತರಿಸಲಾಗುತ್ತಿದೆ.
ಕೃಷಿ ಮತ್ತು ಖಾಸಗಿ ಜಮೀನುಗಳಲ್ಲಿ ನೆಡಲು ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಬದುಕುಳಿ ಯುವ ಗಿಡಗಳಿಗೆ ಮೂರು ವರ್ಷಗಳವರೆಗೆ ಪ್ರತೀ ವರ್ಷವೂ ನಿಗದಿತ ಪ್ರೋತ್ಸಾಹಧನ ನೀಡುವ ಮೂಲಕ ಹೆಚ್ಚು ಸಸಿ ಬೆಳೆಸಲು ಪ್ರೇರೇಪಿಸಲಾಗುತ್ತದೆ. ಪ್ರತೀ ವರ್ಷ ಶಿಕ್ಷಣ ಸಂಸ್ಥೆಗಳು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ವನಮಹೋತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚುವರಿ ಗಿಡಕ್ಕೆ ದರ ನಿಗದಿ
ಮನೆಗೊಂದು ಗಿಡವಲ್ಲದೆ ಹೆಚ್ಚುವರಿ ಬೇಕಿದ್ದರೆ ಜಾಗದ ದಾಖಲೆ ನೀಡಿ ಪಡೆದುಕೊಳ್ಳಬಹುದು. 6ರಿಂದ 9 ಇಂಚಿನವರೆಗಿನ ಗಿಡಕ್ಕೆ 1 ರೂ. ಮತ್ತು 8ರಿಂದ 12 ಇಂಚು ಎತ್ತರದ ಗಿಡಗಳಿಗೆ 3 ರೂ. ನಿಗದಿ ಮಾಡಲಾಗಿದೆ.
Related Articles
ರಾಷ್ಟ್ರೀಯ ಅರಣ್ಯ ನೀತಿ ಪ್ರಕಾರ ರಾಜ್ಯದ ಶೇ. 33ರಷ್ಟು ಪ್ರದೇಶ ಹಸಿರು ಹೊದಿಕೆಯಿರಬೇಕು. ಆದರೆ 2017ರ ಸಮೀಕ್ಷೆ ಪ್ರಕಾರ ರಾಜ್ಯದ ಶೇ.23 ಭಾಗ ಮಾತ್ರ ಹಸಿರಿದೆ.
Advertisement
ಅನಿವಾರ್ಯವೂ ಹೌದುಹವಾಮಾನ ವೈಪರೀತ್ಯದಿಂದ ತಾಪಮಾನ ಹೆಚ್ಚಾಗಿದೆ. ರಸ್ತೆ ವಿಸ್ತರಣೆ ಗಾಗಿ ಮರ ಕಡಿಯಲಾಗುತ್ತಿದೆ. ಅರಣ್ಯ ಪ್ರದೇಶ ಕ್ಷೀಣಿಸಿರುವುದು ಪರಿಸರ ಮತ್ತು ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದನ್ನೆಲ್ಲ ಹೋಗಲಾಡಿಸುವ ನಿಟ್ಟಿನಲ್ಲಿ ಹಸಿರು ಕರ್ನಾಟಕ ಯೋಜನೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೇ. 70ರಷ್ಟು ಫಲಪ್ರದವಾಗಿದೆ. ಯಶಸ್ವಿ ಅನುಷ್ಠಾನ
ಹಸಿರು ಕರ್ನಾಟಕ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಪ್ರತೀ ಗ್ರಾ.ಪಂ.ಗೆ 500 ಗಿಡಗಳನ್ನು ನೀಡಲಾಗುತ್ತಿದೆ. ಶೇ. 50 ಗಿಡಗಳನ್ನು ರಿಯಾಯಿತಿ ದರ ಮತ್ತು ಇನ್ನುಳಿದವುಗಳನ್ನು ಉಚಿತವಾಗಿ ವಿತರಿಸುವ ಯೋಜನೆ ಇದು.
– ಭಾಸ್ಕರ ಬಿ., ಉಪ ಅರಣ್ಯ ಸಂರಕ್ಷಣಾಧಿಕಾರಿ, ಉಡುಪಿ – ಪುನೀತ್ ಸಾಲ್ಯಾನ್