Advertisement

ಮಾಗಡಿ ತಾಲೂಕಿನಲ್ಲಿ ಶೇ. ನೂರರಷ್ಟು ಯಶಸ್ವಿ

06:20 PM Jan 20, 2020 | Suhan S |

ಮಾಗಡಿ: ತಾಲೂಕಿನಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಶೇ.100 ರಷ್ಟು ಯಶಸ್ವಿಗೊಳಿಸಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ್‌ ತಿಳಿಸಿದರು.

Advertisement

ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ 5 ವರ್ಷದೊಳಗಿನ ಮಕ್ಕಳ ಸಂಖ್ಯೆ 13,300 ಇದ್ದು, ಎಲ್ಲಾ ಮಕ್ಕಳಿಗೂ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಹಮ್ಮಿಕೊಂಡಿದ್ದೇವೆ. ಮಾಗಡಿ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 92 ಕಡೆ ಲಸಿಕಾ ಕೇಂದ್ರ ತೆರೆಯಲಾಗಿದೆ. ಮಕ್ಕಳ ಬೆಳವಣಿಗೆ ಕುಂಠಿತ ತಡೆ ಹಾಗೂ ಅಂಗವಿಕಲತೆ ತಡೆಗಾಗಿ ಕಡ್ಡಾಯವಾಗಿ 5ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಬೇಕು. ಈ ಎರಡು ಹನಿ ಲಸಿಕೆ ಹಾಕಿಸುವುದರಿಂದ ಜೀವನ ಪೂರ್ತಿ ಪೋಲಿಯೋ ಮುಕ್ತರಾಗಿ ಜೀವಿಸಬಹುದು. ಈ ಮೂಲಕ ಎಲ್ಲರೂ ಆರೋಗ್ಯವಂತ ಸಮಾಜಕ್ಕೆ ಕೈಜೋಡಿಸಿ ಎಂದರು.

ಸೋಮವಾರ ಮತ್ತು ಮಂಗಳವಾರವೂ ಸಹ ನಮ್ಮ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಮನೆ ಮನೆಗೆ ತೆರಳಿ ಪೋಲಿಯೋ ಹನಿ ವಂಚಿತ ಮಕ್ಕಳಿಗೆ ಲಸಿಕೆ ಹಾಕುವುದಾಗಿ ವಿವರಿಸಿದರು. ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ರೋಟರಿ ಮಾಗಡಿ ಸೆಂಟ್ರಲ್‌ ಸಹಕಾರ ನೀಡಿದ್ದಾಗಿ ರೋಟರಿ ಮಾಗಡಿ ಸೆಂಟ್ರಲ್‌ ಅಧ್ಯಕ್ಷ ಸಿದ್ದಲಿಂಗಯ್ಯ ತಿಳಿಸಿದರು.

ಆರೋಗ್ಯಾಧಿಕಾರಿ ಡಾ.ರಾಜೇಶ್‌, ಪುರಸಭಾ ಸದಸ್ಯ ಎಚ್‌. ಜೆ.ಪುರುಶೋತ್ತಮ್‌, ಎಂ.ಎನ್‌.ಮಂಜುನಾಥ್‌, ಹಿರಿಯಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ರಂಗನಾಥ್‌, ವಕೀಲ ಡಿ.ಎಚ್‌. ಮಲ್ಲಿಕಾರ್ಜುನಯ್ಯ, ಆರೋಗ್ಯ ಸಹಾಯಕರಾದ ತುಕಾ ರಾಮ್‌, ಅಣ್ಣೇಗೌಡ, ಲೋಕೇಶ್‌ಗೌಡ, ಮಂಜುಳಾ, ರೊಟರಿ ಮಾಗಡಿ ಸೆಂಟ್ರಲ್‌ ಕಾರ್ಯದರ್ಶಿ ಶಂಕರ್‌, ಪದಾಧಿಕಾರಿಗಳಾದ ಡಾ. ಮಂಜುನಾಥ್‌ ಬೆಟಗೇರಿ, ಸತೀಶ್‌ ಪ್ರಸಾದ್‌, ಕುಮಾರ್‌, ಲೋಕೇಶ್‌, ಶಾರದ, ಗಣೇಶ್‌, ಮೋಹನ್‌, ದಕ್ಷಿಣಮೂರ್ತಿ, ವೇಣಗೋಪಾಲ್‌, ನಾಗೇಶ್‌,ವೆಂಕಟೇಶ್‌, ಯೋಗೇಶ್‌, ಲತಾ, ರಂಗನಾಥ್‌,ಸೌಮ್ಯ, ನೇಹಾ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next