Advertisement

ಪೆರಾಜೆ ಪಯಸ್ವಿನಿ ಬಳಗ: ಬೇಸಿಗೆ ಶಿಬಿರ ಸಮಾರೋಪ

01:01 AM Apr 09, 2019 | Team Udayavani |

ಮಡಿಕೇರಿ: ಪೆರಾಜೆಯ ಪಯಸ್ವಿನಿ ಬಳಗದಿಂದ ದಿ.ಕೇಶವ ಪೆರಾಜೆ ಮಾಸ್ತರ್‌ ಅವರ ನೆನಪಿನಲ್ಲಿ ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ಐದು ದಿನಗಳ ಕಾಲ ನಡೆದ ಮೊದಲ ವರ್ಷದ ಬೇಸಿಗೆ ಶಿಬಿರದ ಸಮಾರೋಪ ರವಿವಾರ ನಡೆಯಿತು.

Advertisement

ಎಪ್ರಿಲ್‌ 3ರಂದು ಶಿಬಿರವನ್ನು ಉದ್ಘಾಟಿಸಲಾಗಿತ್ತು. 5 ದಿನಗಳ ಕಾಲ ನಡೆದ ಶಿಬಿರದಲ್ಲಿ ಪ್ರತಿ ದಿನ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಗೂ ಮುನ್ನ ಶಿಬಿರದ ಕೊನೆಯ ಕಾರ್ಯಕ್ರಮವಾಗಿ ಹಾವು-ನಾವು-ಪರಿಸರ ಎಂಬ ವಿಷಯದ ಕುರಿತಾಗಿ ಉರಗ ತಜ್ಞ ರವೀಂದ್ರನಾಥ ಐತಾಳರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಪೋಷಕರು ಸಹ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿದ್ದರು.

ಸ‌ಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಪನ್ಯಾಸಕಿ ಅನುರಾಧಾ ಮಾತನಾಡಿ ಇಂದಿನ ದಿನಗಳಲ್ಲಿ ಬೇಸಿಗೆ ಶಿಬಿರಗಳು ಹಣ ಮಾಡುವ ದಾರಿಯಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಪಯಸ್ವಿನಿ ಬಳಗ ಪೆರಾಜೆ ವತಿಯಿಂದ ನಡೆಯುತ್ತಿರುವ ಈ ಉಚಿತ ಮತ್ತು ನಿಸ್ವಾರ್ಥಸೇವೆಯು ತುಂಬಾ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.

ಮಕ್ಕಳು ಇಂದಿನ ದಿನಗಳಲ್ಲಿ ಯಾಂತ್ರಿಕ ಶಿಕ್ಷಣದಿಂದಾಗಿ ಮಾನವೀಯತೆಯನ್ನು ಮರೆಯುತ್ತಿರುವುದು ಆತಂಕದ ವಿಷಯೆ ಎಂದು ಹೇಳಿದರು. ವೇದಿಕೆಯಲ್ಲಿ ಪಯಸ್ವಿನಿ ಬಳಗ ಪರಾಜೆಯ ಅಧ್ಯಕ್ಷ‌ ನಾಗೇಶ್‌ ಕುಂದಲ್ಪಾಡಿ, ಗೌರವ ಸಲಹೆಗಾರರಾದ ಡಾ.ಮಾಧವ ಪೆರಾಜೆ , ಜೋÂತಿ ಪ್ರೌಢಶಾಲೆಯ ಅಧ್ಯಾಪಕರಾದ ಚಂದ್ರಮತಿ ಹಾಗೂ ಮೋಹನಾಂಗಿ ಹಾಗೂ ಪೆರಾಜೆ ಪಂಚಾಯತಿಯ ಅಧ್ಯಕ್ಷರಾದ ಜಯಲಕ್ಷಿ¾ ಧರಣೀದರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಮ ಪೆರಾಜೆ ಕಾರ್ಯಕ್ರಮವನ್ನು ನಿರೂಪಿಸಿದರೆ, ದರ್ಶನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next