Advertisement
ಪೊಡಿಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರು, ತೆಯ್ಯಂಕೆಟ್ಟು ಮಹೋತ್ಸವ ಸಮಿತಿ ಪದಾಧಿಕಾರಿಗಳು, ನೂಜಿ ತರವಾಡು ಸದಸ್ಯರು, ಭಗವದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೂಜಿ ತರವಾಡಿನಲ್ಲಿ ಶ್ರೀ ವಯನಾಟ್ ಕುಲವನ್ ತೈಯ್ಯಂಕಟ್ಟು ಮಹೋತ್ಸವವು ಎ. 22, 23, 24, 25 ರಂದು ಜರಗಲಿದೆ. 22 ರಂದು ಹಸಿರುವಾಣಿ ಹೊರೆ ಕಾಣಿಕೆ, ಉಗ್ರಾಣ ತುಂಬಿಸುವುದು, 23 ರಂದು ಮುಂಜಾನೆ 5 ರಿಂದ ಕೊರತ್ತಿ ದೈವ, ರಕ್ತ ಚಾಮುಂಡಿ ದೈವ, ವಿಷ್ಣುಮೂರ್ತಿ ದೈವ, ಪಡಿಞಾರ್ ಚಾಮುಂಡಿ ದೈವ, ಗುಳಿಗ ದೈವ ನಡೆಯಲಿದೆ.24 ರಂದು ಸಂಜೆ 5 ರಿಂದ ಕಾರ್ನವನ್ ದೈವದ ವೆಳ್ಳಾಟ, 7 ರಿಂದ ಕೋರಚ್ಚನ್ ದೈವ, 10 ಕ್ಕೆ ಕಂಡನಾರ್ ದೈವ, 3 ಗಂಟೆಗೆ ವಯನಾಟು ಕುಲವನ್ ದೈವದ ಆಗಮನ, ಚೂಟೊಪ್ಪಿಕಲ್, ಸಾಯಂಕಾಲ 5 ಕ್ಕೆ ವಿಷ್ಣುಮೂರ್ತಿ ದೈವ, ಭಂಡಾರ ನಿರ್ಗಮನ ಮೊದಲಾದ ಕಾರ್ಯಕ್ರಮಗಳು ಜರಗಲಿದೆ.