ಬದಿಯಡ್ಕ: ದೇಶವನ್ನು ಬಡತನದಿಂದ ಸಿರಿತನದೆಡೆಗೆ ಎತ್ತಿಹಿಡಿದ ಸಹಕಾರ ಕ್ಷೇತ್ರದ ಸಾಧನೆ ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರವಾದುದು. ಸಹಕಾರ ಕ್ಷೇತ್ರ ಜನರಿಗೆ ನೀಡಿದ ಸಹಕಾರದಿಂದ ಇಂದು ವಿಪ್ಲವವನ್ನೇ ಸೃಷ್ಟಿಸಿದೆ ಎಂದು ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಅಧ್ಯಕ್ಷರಾದ ಯಸ್.ಆರ್.ಸತೀಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಹಾಜನ ಸಂಸ್ಕೃತ ಹೈಯರ್ ಸೆಕೆಂಡರಿ ಶಾಲೆ ನಿರ್ಚಾಲಿನಲ್ಲಿ ನಡೆದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಬ್ಯಾಂಕಿನ ನೂತನ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನೀರ್ಚಾಲಿನ ಮಣ್ಣಿನಲ್ಲಿ ಬ್ಯಾಂಕ್ ಬೆಳೆದು ಬಂದಿರುವುದು ಸಂತಸದ ವಿಷಯ. ಸಹಕಾರ ಕ್ಷೇತ್ರವು ದೇಶದ ಮೂಲೆ ಮೂಲೆಯಲ್ಲೂ ತನ್ನ ಲಕ್ಷಾಂತರ ಶಾಖೆಗಳನ್ನು ಹೊಂದಿದ್ದು ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತಿತರ ಕ್ಷೇತ್ರದಲ್ಲಿನ ಅಭೂತಪೂರ್ವ ಸಾಧನೆಯ ಮೂಲಕ ಆರ್ಥಿಕತೆಯನ್ನು ಬಲಿಷ್ಠಗೊಳಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರು ಧ್ವಜಾರೋಹಣಗೈದು ಸಮಾರಂಭಕ್ಕೆ ಚಾಲನೆ ನೀಡಿದರು.ಬ್ಯಾಂಕಿನ ಅಧ್ಯಕ್ಷರಾದ ಜಯದೇವ ಖಂಡಿಗೆ ಸಮಾರಂಭದ ಅಧ್ಯಕ್ಷತೆವಹಿಸಿದರು. ಬ್ಯಾಂಕಿನ ಹಿರಿಯ ಸದಸ್ಯರಾದ ಕಾನತ್ತಿಲ ಮಹಾಲಿಂಗ ಭಟ್ ದೀಪ ಪ್ರಜ್ವಲನೆಗೊಳಿಸಿದರು.
ಪೆರಡಾಲ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದ ನಬಾರ್ಡ್ ಡಿ.ಡಿ.ಯಂ. ಜ್ಯೋತಿಷ್ ಜಗನ್ನಾದ್ ಉದ್ಘಾಟಿಸಿದರು.ಬ್ಯಾಂಕ್ ಭದ್ರತಾ ಕೋಶವನ್ನು ಜೆ.ಆರ್. ಕಾಸರಗೋಡು ಮಹಮ್ಮದ್ ನೌಶಾದ್, ಸಾಮಾನ್ಯ ಭದ್ರತಾ ಕೋಶವನ್ನು ಕಾಸರಗೋಡು ಎ.ಆರ್.ಜನರಲ್ ಜಯಚಂದ್ರನ್ ಹಾಗೂ ಕ್ಯಾಶ್ ಕೌಂಟರ್‌ನ್ನು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯರಾದ ಅಡ್ವ. ಕೆ.ಶ್ರೀಕಾಂತ್ ಉದ್ಘಾಟಿಸಿದರು.
ಬ್ಯಾಂಕ್ ಹೊರತಂದ ರೂಪೇಕಾರ್ಡ್ ಕೆ.ಡಿ.ಸಿ.ಬ್ಯಾಂಕ್ ಜನರಲ್ ಮೇನೇಜರ್ ಅನಿಲ್‌ಕುಮಾರ್.ಎ ಬಿಡುಗಡೆಗೊಳಿಸಿದರು.
ಕನ್ನಡದೋಜ ದಿ.ಪೆರಡಾಲ ಕೃಷ್ಣಯ್ಯ ಅವರ ಭಾವಚಿತ್ರವನ್ನು ಬದಿಯಡ್ಕ ಪಂಚಾಯತು ಅಧ್ಯಕ್ಷರಾದ ಕೆ,ಯನ್.ಕೃಷ್ಣ ಭಟ್, ದಿ.ಈಶ್ವರ ಭಟ್ ಖಂಡಿಗೆ ಅವರ ಭಾವಚಿತ್ರವನ್ನು ವಿ.ಶ್ರೀಕೃಷ್ಣ ಭಟ್, ದಿ.ಮಹಾಲಿಂಗ್ ಭಟ್ ಭಾವಚಿತ್ರವನ್ನು ಪಡಿಯಡು ಶಂಕರ ಭಟ್, ದಿ.ಖಂಡಿಗೆ ನಾರಾಯಣ ಭಟ್ ಕೇರ ಭಾವಚಿತ್ರವನ್ನು ಐತ್ತಪ್ಪ ಶೆಟ್ಟಿ ಕಡಾರು, ದಿ.ಶ್ಯಾಮ ಭಟ್ ಖಂಡಿಗೆ ಭಾವಚಿತ್ರವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಕೋರಿಕ್ಕಾರು ವಿಷ್ಣು ಭಟ್, ದಿ.ಖಂಡಿಗೆ ಕೃಷ್ಣ ಭಟ್ ಕೇರ ಅವರ ಭಾವಚಿತ್ರವನ್ನು ಶ್ರೀಧರ ಪೈ ಬಳ್ಳಂಬೆಟ್ಟು ಅನಾವರಣಗೊಳಿಸಿದರು.
ಕಾಸರಗೋಡು ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್ ವಿ ರೈ, ಬದಿಯಡ್ಕ ಬ್ಯಾಂಕಿನ ನಿರ್ದೇಶಕಿ ಹಾಗೂ ಗ್ರಾಮ ಪಂಚಾಯತು ಸದಸ್ಯರಾದ ಪ್ರೇಮ ಕುಮಾರಿ ಶುಭಾಶಂಸನೆಗೈದರು. ಬ್ಯಾಂಕಿನ ಕಾರ್ಯದರ್ಶಿ ಅಜಿತಕುಮಾರಿ ವರದಿ ಮಂಡಿಸಿದರು. ಸ್ವರ್ಣಲತಾ ಮತ್ತು ಬಳಗ ಪ್ರಾರ್ಥನೆ ಗೀತೆ ಹಾಡಿದರು. ಉಪಾಧ್ಯಕ್ಷ ದಿನೇಶ ಪ್ರಭು ಕರಿಂಬಿಲ ಸ್ವಾಗತಿಸಿ ಬ್ಯಾಂಕ್ ನಿರ್ದೇಶಕ ರಾಮಪ್ಪ ಮಂಜೇಶ್ವರ ಧನ್ಯವಾದ ಸಮರ್ಪಿಸಿದರು.
ಶತಮನೋತ್ಸವ ಸಂದರ್ಭದಲ್ಲಿ ಹೊರತರಲಾದ ಸ್ಮರಣ ಸಂಚಿಕೆ ಶತ ಸಹಕಾರ ಪಥವನ್ನು ಕೆ.ಯನ್.ಕೃಷ್ಣ ಭಟ್ ಬಿಡುಗಡೆಗೊಳಿಸಿದರು.