Advertisement

ಪೆರಡಾಲ ಸರಕಾರಿ ಶಾಲೆ: ಕ್ಲಬ್‌ಗಳ ಉದ್ಘಾಟನೆ

09:46 PM Jun 26, 2019 | Sriram |

ಬದಿಯಡ್ಕ: ಬಾಲ್ಯದಲ್ಲಿ ಹಿಂದಿನ ಚರಿತ್ರೆ ಕಲಿಯಬೇಕು. ಇದರಿಂದ ವರ್ತಮಾನ ಕಾಲದ ಬದಲಾವಣೆ ಅರಿತು ಉತ್ತಮ ಚರಿತ್ರೆ ಸೃಷ್ಟಿಸಲು ಸಾಧ್ಯ ಎಂದು ಸಾಹಿತಿ, ಚಿಂತಕ ರಾಜನ್‌ ಮುನಿಯೂರ್‌ ಹೇಳಿದರು.

Advertisement

ಅವರು ಪೆರಡಾಲ ಸರಕಾರಿ ಪ್ರೌಢಶಾಲೆ ಯಲ್ಲಿ ವಿವಿಧ ಕ್ಲಬ್‌ಗಳನ್ನು ಉದ್ಘಾಟಿಸಿ ಮಾತನಾಡಿದರು. ಸುತ್ತಲಿನ ಪರಿಸರದ ವಿಚಾರಗಳು ಕಥಾವಸ್ತು ಆಗುವ ಬಗೆ ವಿವರಿಸಿ ತಾವು ಬರೆದ ಕಥೆ ಮಂಡಿಸಿದರು. ಪರಿಸರ ರಕ್ಷಣೆ ಮಕ್ಕಳ ಕರ್ತವ್ಯವಾಗಬೇಕಾದ ಅಗತ್ಯವನ್ನು ವಿವರಿಸಿದರು. ಈ ಸಂದರ್ಭ ವಾಚನ ವಾರಾಚರಣೆ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳ ಸಾಹಿತ್ಯ ಸೃಷ್ಟಿಯ ಹಸ್ತಪತ್ರಿಕೆ ‘ಕಾಮನಬಿಲ್ಲು’ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು. ರಾಜನ್‌ ಅವರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆಯಿತ್ತರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿದರು. ಚಂದ್ರಹಾಸ ನಂಬಿಯಾರ್‌, ಪ್ರಮೋದ್‌ ಕುಮಾರ್‌, ಲಿಬಿಜಾ, ಬಿಂದಿಯಾ ಶುಭಾಶಂಸನೆಗೈದರು. ಲಲಿತಾಂಬಾ, ರಿಶಾದ್‌, ಚಂದ್ರಶೇಖರ, ದಿವ್ಯಗಂಗಾ, ಬೀನಾ, ಜಯಲತಾ, ಶ್ರೀಧರ ಭಟ್ ಸಹಕರಿಸಿದರು. ಬಿಂದೂ ವಂದಿಸಿದರು. ಶ್ರೀಧರನ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next