Advertisement

ರದ್ದಾದ  ಶೇ. 97ರಷ್ಟು ನೋಟುಗಳು ವಾಪಸ್‌

03:45 AM Jan 05, 2017 | |

ನವದೆಹಲಿ: ರದ್ದುಪಡಿಸಲಾದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ. 97 ರಷ್ಟು ನೋಟುಗಳು ಬ್ಯಾಂಕ್‌ಗಳ ಮೂಲಕ ವಾಪಸ್ಸಾಗಿವೆ ಎಂದು ಮೂಲಗಳು ತಿಳಿಸಿವೆ. 

Advertisement

ನ.9 ರಿಂದ ಡಿ.30 ರವರೆಗೂ 14.97 ಲಕ್ಷ ಕೋಟಿ ರೂ. ಮೌಲ್ಯದ ರದ್ದಾದ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ. ಚಲಾವಣೆ ಕಳೆದುಕೊಂಡ 15.4 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ ಪೈಕಿ 5 ಲಕ್ಷ ರೂ. ಕೋಟಿಯಷ್ಟು ಕಪ್ಪುಹಣ ಇದ್ದು, ಅದು ಬ್ಯಾಂಕ್‌ಗೆ ಮರಳುವ ಸಾಧ್ಯತೆ ಕಡಿಮೆ ಎಂದು ಸರ್ಕಾರ ಅಂದಾಜಿಸಿತ್ತು.  ಆದರೆ ಆ ನಿರೀಕ್ಷೆ ಸುಳ್ಳಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next