Advertisement

ಶೇ. 100ರಷ್ಟು ಪ್ರಗತಿ ಸಾಧಿಸಿ: ಸಚಿವರ ಸೂಚನೆ

01:26 AM Feb 09, 2022 | Team Udayavani |

ಉಡುಪಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಮಂಜೂರು ಮಾಡಿರುವ ಯೋಜನೆಗಳ ಅನುದಾನ
ವನ್ನು ಸಮರ್ಪಕವಾಗಿ ಬಳಸಿಕೊಂಡು ಮಾರ್ಚ್‌ ಅಂತ್ಯದೊಳಗೆ ಶೇ. 100 ಪ್ರಗತಿ ಸಾಧಿಸಬೇಕು ಎಂಬ ಸೂಚನೆ ಯನ್ನು ಉಸ್ತುವಾರಿ ಸಚಿವ ಎಸ್‌. ಅಂಗಾರ ಅಧಿಕಾರಿಗಳಿಗೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನ ಸಭೆ(ಕೆಡಿಪಿ)ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಚಿವರೊಂದಿಗೆ ಸಭೆ
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ಇಲ್ಲಿನ ದಾರಿದೀಪ, ಒಳ ಚರಂಡಿಯ ಪೈಪ್‌ ತುಂಡಾಗಿರುವುದು ಮೊದಲಾದ ವಿಷಯಗಳ ಸಮಗ್ರ ಚರ್ಚೆ ನಡೆಸಿದ್ದೇವೆ. ಲೋಕೋಪ ಯೋಗಿ ಸಚಿವರು ಹಾಗೂ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸಿ, ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಲಿದ್ದೇವೆ ಎಂದರು.

ಸರಕಾರದ ಯೋಜನೆಗಳನ್ನು ಕಾರ್ಯ ಸಾಧನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಜಿಲ್ಲಾಡಳಿತ ಅಥವಾ ನಮ್ಮ ಗಮನಕ್ಕೆ ತಂದು ಶೀಘ್ರ ಪರಿಹರಿಸಬೇಕು. ಸಮಗ್ರ ಗಿರಿಜನ ಯೋಜನೆಯಡಿ ಸಮುದಾಯ ಭವನಗಳನ್ನು ನಿರ್ಮಿಸಲು ನೀಡಿರುವ ಅನುದಾನವನ್ನು ಬಳಸುವುದರೊಂದಿಗೆ ವ್ಯವಸ್ಥಿತವಾದ ಭವನ ನಿರ್ಮಾಣ ಮಾಡಬೇಕು ಮತ್ತು ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಬೇಕು ಎಂಬ ನಿರ್ದೇಶನ ನೀಡಿದರು.

ಡಯಾಲಿಸಿಸ್‌ ಸಮಸ್ಯೆ
ಶಾಸಕ ರಘುಪತಿ ಭಟ್‌ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್‌ನಿರ್ವಹಣೆ ವ್ಯವಸ್ಥಿತ ರೀತಿಯಲ್ಲಿ ನಡೆಯದ ಕಾರಣ ರೋಗಿ ಗಳನ್ನು ಪಕ್ಕದ ಜಿಲ್ಲೆಗಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

Advertisement

ಮೀನುಗಾರರ ಮನೆಗೆ
5 ಲಕ್ಷ ರೂ. ನೀಡಿ
ಶಾಸಕ ಲಾಲಾಜಿ ಮೆಂಡನ್‌ ಮಾತನಾಡಿ, ಮೀನುಗಾರರು ಸ್ವಂತ ಮನೆ ನಿರ್ಮಿಸಿಕೊಳ್ಳಲು ಮತ್ಯಾಶ್ರಯ ಯೋಜನೆಯಡಿ 1.20 ಲಕ್ಷ ರೂ. ನೀಡಲಾಗುತ್ತಿದೆ. ಅದು ಅತ್ಯಂತ ಕಡಿಮೆಯಾಗಿದ್ದು, ಕನಿಷ್ಠ 5 ಲಕ್ಷ ನೀಡಬೇಕು ಎಂದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಬಡ ಜನರ ಅನುಕೂಲಕ್ಕಾಗಿ ಸರಕಾರ ಸವಲತ್ತುಗನ್ನು ನೀಡುತ್ತಿದೆ. ಇವುಗಳನ್ನು ಅರ್ಹ ವ್ಯಕ್ತಿಗೆ ತಲುಪಿಸುವ ಕಾರ್ಯಗಳನ್ನು ಅಧಿಕಾರಿಗಳು ಚಾಚೂ ತಪ್ಪದೇ ಮಾಡಬೇಕು ಎಂದರು.

ನಗರಸಭೆಗೆ 40 ಕೋಟಿ
ನಗರೋತ್ಥಾನದ 4ನೇ ಹಂತದಲ್ಲಿ ಪ್ರತೀ ನಗರಸಭೆಗೆ 40 ಕೋಟಿ ರೂ., ಪುರಸಭೆಗಳಿಗೆ 10 ಕೋಟಿ ಹಾಗೂ ಪ.ಪಂ.ಗಳಿಗೆ ತಲಾ 5 ಕೋಟಿ ರೂ. ಅನುದಾನವನ್ನು ನೀಡಲಾಗಿದ್ದು, ನಗರ ಪ್ರದೇಶಗಳ ಮೂಲಸೌಕರ್ಯ ಕಾಮಗಾರಿಗೆ ಯೋಜನೆ ರೂಪಿಸಿ ಶೀಘ್ರ ಅನುಮೋದನೆ ಪಡೆದು ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬ ನಿರ್ದೇಶ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next