Advertisement

ಶೇ. 120ರಷ್ಟು  ಫಿಟ್‌ ಆದ ಬಳಿಕ ಐಪಿಎಲ್‌ಗೆ: ಕೊಹ್ಲಿ

10:04 AM Apr 07, 2017 | |

ಹೈದರಾಬಾದ್‌: ಭಾರತೀಯ ಕ್ರಿಕೆಟ್‌ ತಂಡದ ಆದ್ಯತೆ ಮುಂದಿನ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಕೂಟ ಆಗಿದೆ ಹಾಗಾಗಿ ನಾನು ಯಾವುದೇ ಅಪಾಯಕ್ಕೆ ಒಳಗಾಗಲು ಬಯಸುವುದಿಲ್ಲ. ಶೇಕಡಾ 120ರಷ್ಟು ದೈಹಿಕ ಕ್ಷಮತೆ ಹೊಂದಿದ ಬಳಿಕ ಐಪಿಎಲ್‌ಗೆ ಮರಳುವೆ. ಸದ್ಯ ಯಾವುದೇ ದಿನವನ್ನು ನಿಗದಿಪಡಿಸಿಲ್ಲ. ಆದರೆ ಸಾಧ್ಯ ವಾದಷ್ಟು ಬೇಗ ಐಪಿಎಲ್‌ಗೆ ಮರಳಲು ಬಯಸುತ್ತೇನೆ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ  ಐಪಿಎಲ್‌ ನಲ್ಲಿ ಆಡಲು ಸಾಧ್ಯವಾಗದ್ದಕ್ಕೆ ನಿರಾಸೆ ಯಾಗಿದೆ. ಆದರೆ ಅದನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿದ ಕೊಹ್ಲಿ ಯುವರಾಜ್‌ ಸಿಂಗ್‌ ಅವರ ಬ್ಯಾಟಿಂಗ್‌ ವೈಭವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್‌ ವೇಳೆ 28ರ ಹರೆಯದ ಕೊಹ್ಲಿ ಗಾಯಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next