ವರ್ಷಗಳ ಅನಂತರ 600 ರೂ. ಗಡಿ ದಾಟಿದೆ. ಜು. 24ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 590 ರೂ.ನಿಂದ 605 ರೂ. ತನಕವು ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 550 ರೂ. ತನಕ ಧಾರಣೆ ಇತ್ತು. ಕ್ಯಾಂಪ್ಕೋಗೆ ಹೋಲಿಸಿದರೆ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40ರಿಂದ 50 ರೂ. ತನಕ ಹೆಚ್ಚಾಗಿತ್ತು.
Advertisement
ದಾಖಲೆಯ ದರ2015-16ರಲ್ಲಿ ದಾಖಲಾಗಿದ್ದ 675 ರೂ.ನಿಂದ 700 ರೂ. ಗರಿಷ್ಠ ಧಾರಣೆಯಾಗಿತ್ತು. ಅನಂತರ 300 ರೂ. ತನಕ ಇಳಿದಿತ್ತು. ಕಳೆದ 3 ವರ್ಷಗಳಿಂದ ಧಾರಣೆ 500 ರೂ. ಗಡಿ ದಾಟಿರಲಿಲ್ಲ. 2023ರ ಜುಲೈಯಲ್ಲಿ 600 ರೂ. ಗಡಿ ದಾಟಿದೆ. ಮಾರುಕಟ್ಟೆಯಲ್ಲಿ ದಿನೇ ದಿನೆ ಬೇಡಿಕೆ ಕಂಡು ಬಂದಿದ್ದು ಹೀಗಾಗಿ ಧಾರಣೆ ಇನ್ನಷ್ಟು ಏರಿಕೆ ಕಾಣುವ ಸಂಭವ ಇದೆ.
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕಾಳುಮೆಣಸಿಗೆ ಜು. 22ರಂದು 510 ರೂ. ಇತ್ತು. ಜು. 24ರಂದು 520ಕ್ಕೆ ಏರಿತ್ತು. ಜು. 25ರಂದು 550ಕ್ಕೆ ನೆಗೆಯಿತು. ತನ್ಮೂಲಕ ಒಂದೇ ದಿನದಲ್ಲಿ 30 ರೂ. ಏರಿಕೆ ಕಂಡಿತು. ಹೊಸ ಅಡಿಕೆ ದರ ಏರಿಕೆ
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಏರಿಕೆ ಮುಂದುವರಿದಿದ್ದು ಜು. 25ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 440 ರೂ. ತನಕವು ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ 432 ರೂ. ಇತ್ತು. ಜು. 11 ರಂದು ಕ್ಯಾಂಪ್ಕೋದಲ್ಲಿ 425 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ 430 ರೂ. ತನಕವು ಖರೀದಿಯಾಗಿತ್ತು. ಸಿಂಗಲ್, ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿ ಮುಂದುವರಿದಿದೆ.