Advertisement

ಸರಕು ವಾಹನಗಳಲ್ಲಿ ಜನರ ಪ್ರಯಾಣ; ಸಾಮಾಜಿಕ ಅಂತರ ಮಾಯ

08:03 AM Jun 14, 2020 | Suhan S |

ದೇವದುರ್ಗ: ಕೋವಿಡ್ ಲಾಕ್‌ಡೌನ್‌ ಸಡಿಲಿಕೆ ಆದ ನಂತರ ಪಟ್ಟಣದಲ್ಲಿ ಬೇಕಾಬಿಟ್ಟಿ ಜನ ಸಂಚರಿಸುತ್ತಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ನಿಯಮ ಪಾಲಿಸುತ್ತಿಲ್ಲ. ಇನ್ನು ಸರಕು ಸಾಗಣೆ ವಾಹನಗಳಲ್ಲಿ ಕುರಿಗಳಂತೆ ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸಲಾಗುತ್ತಿದೆ.

Advertisement

ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್‌ ಪ್ರಕರಣ ದೃಢಪಟ್ಟಿವೆ. ಸೋಂಕು ತಡೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ಶನಿವಾರ ಪಟ್ಟಣದಲ್ಲಿ ನಡೆದ ಸಂತೆಯಲ್ಲಿ ಸಾಮಾಜಿಕ ಅಂತರವೇ ಕಂಡುಬರಲಿಲ್ಲ. ಗುಂಪುಗುಂಪಾಗಿ ಜನ ಸೇರಿ ತರಕಾರಿ ಖರೀದಿಸುತ್ತಿರುವುದು ಕಂಡುಬಂತು. ಇನ್ನು ಬಹುತೇಕರು ಮಾಸ್ಕ್ ಧರಿಸದೇ ಮಾರುಕಟ್ಟೆಗೆ ಆಗಮಿಸಿದ್ದರು. ಇನ್ನು ಗ್ರಾಮೀಣ ಭಾಗದಿಂದ ಸಂತೆಗೆ ಬರುವವರು ಸರಕು ಸಾಗಣೆ, ಟಂಟಂ ರಿಕ್ಷಾ, ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ. ಈ ವಾಹನಗಳಲ್ಲಿ ಕುರಿಗಳಂತೆ ಜನರನ್ನು ಹತ್ತಿಸಿಕೊಂಡು ಬರಲಾಗಿತ್ತು. ಇಲ್ಲೂ ಸಾಮಾಜಿಕ ಅಂತರ ಪಾಲನೆ ಕಂಡುಬರಲಿಲ್ಲ. ಅಂಗಡಿ ಮುಂಗಟ್ಟು, ಖಾಸಗಿ ವಾಹನ ಸೇರಿ ಎಲ್ಲೆಡೆ ಸಾಮಾಜಿಕ ಅಂತರ ಪಾಲನೆ, ಕಡ್ಡಾಯವಾಗಿ ಮಾಸ್ಕ್ ಧರಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next