Advertisement

ಜನ ಕಲ್ಯಾಣವೇ ಸಹಕಾರಿ ಮಂತ್ರ

03:25 PM Jan 02, 2022 | Team Udayavani |

ಬೀದರ: ಸಮಾಜದಲ್ಲಿನ ಆರ್ಥಿಕ ಹಿಂದುಳಿದವರ ಹಾಗೂ ಸೌಲಭ್ಯಗಳಿಂದ ವಂಚಿತರಾದವರ ಕಲ್ಯಾಣವೇ ಸೌಹಾರ್ದ ಸಹಕಾರಿಗಳ ಮೂಲ ಮಂತ್ರವಾಗಬೇಕು ಎಂದು ಸಂಯುಕ್ತ ಸಹಕಾರಿ ನಿರ್ದೇಶಕ ಗುರುನಾಥ ಜ್ಯಾಂತಿಕರ ಹೇಳಿದರು.

Advertisement

ನಗರದ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಕಚೇರಿಯಲ್ಲಿ ಸೌಹಾರ್ದ ದಿನಚಾರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಡೀ ವಿಶ್ವವು ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಇದ್ದರೆ ಸೌಹಾರ್ದ ಸಹಕಾರಿಗಳು ಇಂದು ಕಾಯ್ದೆ ಜಾರಿಗೆ ಬಂದ ದಿನವನ್ನು ಸೌಹಾರ್ದ ದಿನ ಎಂದು ರಾಜ್ಯಾದ್ಯಂತ ಆಚರಿಸುತ್ತಾರೆ ಎಂದರು.

ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಸಂಜಯ ಕ್ಯಾಸಾ, ರಾಜಶೇಖರ ನಾಗಮುರ್ತಿ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ 2022ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.

ಜಿಲ್ಲೆಯ ಹಿರಿಯ ಸಹಕಾರಿಗಳಾದ ಮಹ್ಮದ್‌ ಸೈಫ್‌, ಶ್ರೀರಂಗ, ರಾಜಕುಮಾರ, ಕುಬೆರಪ್ಪ, ಶಿವರಾಜ ಹೂಗಾರ, ಅನಿಲಕುಮಾರ, ಸಂಜೀವ, ಶಿವಾನಂದ, ಶಿವರಾಜ ಇನ್ನಿತರರಿದ್ದರು. ಜಿಲ್ಲಾ ಸಂಯೋಜಕ ವೀರಶಟ್ಟಿ ಕಾಮಣ್ಣಾ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಮೃತ ಹೊಸಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next