Advertisement

ಆಧಾರ್‌ ತಿದ್ದುಪಡಿಗೆ ಜನರ ಪರದಾಟ

01:07 PM Jun 12, 2019 | Suhan S |

ಹುಳಿಯಾರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರ ಕೆವೈಸಿ ಅಪ್ಲೋಡ್‌ ಮಾಡಲು ಸಾರ್ವಜನಿಕರು ಪರದಾಡುವಂತಾಗಿದೆ.

Advertisement

ಜನಜಂಗುಳಿ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಯಮದಂತೆ ಆಹಾರ ಧಾನ್ಯ ಪಡೆಯುತ್ತಿರುವ (ಬಿಪಿಎಲ್, ಎಎವೈ, ಎಪಿಎಲ್) ಕಾರ್ಡುದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರ ಕೆವೈಸಿಯನ್ನು ಅಪ್ಲೋಡ್‌ ಮಾಡಬೇಕಾಗಿದ್ದು, ಇದಕ್ಕಾಗಿ ಆಧಾರ್‌ ತಿದ್ದುಪಡಿ ಮಾಡಿಸಲು ಹೋಬಳಿಯ ಏಕೈಕ ಆಧಾರ್‌ ಕೇಂದ್ರ ಯಳನಾಡು ಕಾವೇರಿ ಗ್ರಾಮೀಣ ಬ್ಯಾಂಕ್‌ ಮುಂದೆ ಬೆಳಗ್ಗೆ ಯಿಂದಲೇ ಜನಜಂಗುಳಿ ಕಂಡುಬರುತ್ತಿದೆ.

ಬೆಳಗ್ಗೆಯಿಂದಲೇ ವೃದ್ಧರು, ಮಹಿಳೆಯರಾದಿ ಯಾಗಿ ಪ್ರತಿಯೊಬ್ಬರೂ ಸರತಿ ಸಾಲಿನಲ್ಲಿ ನಿಂತು ಆಧಾರ್‌ ತಿದ್ದುಪಡಿಯಾಗದೆ ಹಿಂದಿರುಗುತ್ತಿರುವುದು ಸಾಮಾನ್ಯವಾಗಿದೆ. ಈ ಹಿಂದೆ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯ ಬಯೋಮೆಟ್ರಿಕ್‌ ನೀಡಿ ಆಹಾರ ಪಡೆಯಬೇಕಾಗಿತ್ತು. ಈ ಪದ್ಧತಿಯಿಂದ ಇನ್ನುಳಿದವರ ಅವಶ್ಯಕತೆ ಇರಲಿಲ್ಲ.

ಅಕ್ರಮ ಪತ್ತೆಗೆ ಜಾರಿ: ಪಡಿತರ ಚೀಟಿಯ ಕುಟಂಬ ದಲ್ಲಿ ಯಾರೇ ಸದಸ್ಯರು ಸತ್ತರೂ ಅಂವರ ಹೆಸರಲ್ಲಿ ಪಡಿತರ ಆಹಾರ ಪಡೆಯುತ್ತಿದ್ದ ಪ್ರಕರಣಗಳು ಗಮನಕ್ಕೆ ಬಂದಿದ್ದರಿಂದ ನೈಜ ಪಡಿತರ ಫಲಾನು ಭವಿಗಳ ಪತ್ತೆಗೆ ಹಾಗೂ ನಕಲಿ ಪಡಿತರದಾರನ್ನು ನಿಯಂತ್ರಿಸಲು ರಾಜ್ಯಾದ್ಯಂತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿ ಜಾರಿಗೊಳಿಸಿದೆ. ಆದ್ದರಿಂದ ಹೆಬ್ಬಟ್ಟಿನ ಗುರುತು ನೀಡಬೇಕಾಗಿದ್ದು, ಜುಲೈ 31 ಗಡುವು ನಿಗದಿ ಪಡಿಸಲಾಗಿದೆ.

ಮಕ್ಕಳ ಹೆಬ್ಬೆಟ್ಟೂ ಬೇಕು: ಆದರೆ ರೇಷನ್‌ಕಾರ್ಡ್‌ಗೆ ಇ-ಕೆವೈಸಿ ಮಾಡಲು ಈ ಮೊದಲೇ ಆಧಾರ್‌ ಕಾರ್ಡ್‌ ನಲ್ಲಿ ಬಯೋಮೆಟ್ರಿಕ್‌ (ಹೆಬ್ಬೆಟ್ಟು ದಾಖಲಿಸುವುದು) ಮಾಡಬೇಕಿತ್ತು. 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್‌ ಪಡೆಯುವಾಗ ಬಯೋಮೆಟ್ರಿಕ್‌ ಮಾಡಿ ರೋದಿಲ್ಲ. ಹಾಗಾಗಿ ಇ-ಕೈವೈಸಿ ಮಾಡಲು ಮಕ್ಕಳ ಹೆಬ್ಬೆಟ್ಟು ಸ್ಕಾನ್‌ ಮಾಡಲು ಸಾಧ್ಯವಾಗದೆ ರಿಜೆಕ್ಟ್ ಆಗುತ್ತಿದೆ. ಈ ನಿಟ್ಟಿನಲ್ಲಿ ಆಧಾರ್‌ ಕಾರ್ಡ್‌ಗೆ ಮಕ್ಕಳ ಹೆಬ್ಬೆಟ್ಟು ದಾಖಲಿಸುವುದು ಅನಿವಾರ್ಯ. ಅಲ್ಲದೆ ಹೊಸದಾಗಿ ಮದುವೆಯಾಗಿ ಬಂದವರು ತಮ್ಮ ವಿಳಾಸ ಬದಲಿಸುವುದು, ಹುಟ್ಟಿದ ದಿನಾಂಕ, ಫೋನ್‌ ನಂಬರ್‌ ಹೀಗೆ ಅನೇಕ ಬಗೆಯ ತಿದ್ದುಪಡಿ ಅಗತ್ಯ ವಿದ್ದು, ಈಗ ಇದಕ್ಕಾಗಿ ಹೋಬಳಿಯ ಮೂಲೆ ಮೂಲೆಗಳಿಂದ ಜನರು ಸಂಸಾರ ಸಮೇತ ಯಳನಾಡುವಿಗೆ ಆಗಮಿಸುತ್ತಿದ್ದಾರೆ.

Advertisement

20 ಕಿಮೀ ದೂರದಿಂದ ಬರುತ್ತಿದ್ದಾರೆ: ಈ ಹಿಂದೆ ಖಾಸಗಿ ಸರ್ವೀಸ್‌ ಸೆಂಟರ್‌ಗಳಲ್ಲಿ ಆಧಾರ್‌ ತಿದ್ದು ಪಡಿಗೆ ಅವಕಾಶ ಕೊಟ್ಟಿದ್ದರಿಂದ ಜನರು ಸುಸೂತ್ರವಾಗಿ ಆಧಾರ್‌ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಇವರ ಅನುಮತಿ ನಿಲ್ಲಿಸಿ ಬ್ಯಾಂಕ್‌ಗಳಿಗೆ ಮಾತ್ರ ಅನುಮತಿ ನೀಡಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತಾಗಿದೆ.

ಯಳನಾಡುವಿನ ಕೆಜೆಬಿಯಲ್ಲಿ ಆಧಾರ್‌ ಕೇಂದ್ರ ತೆರೆದಿದ್ದಾರೆ. ಹಾಗಾಗಿ ಯಳನಾಡುವಿಗೆ 15ರಿಂದ 20 ಕಿಮೀ ದೂರ ಅಂದರೆ ದಸೂಡಿ, ಹೊಯ್ಸಳಕಟ್ಟೆ, ಗಾಣಧಾಳು ಗ್ರಾಪಂ ವ್ಯಾಪ್ತಿಯ ಜನರು ಆಧಾರ್‌ ತಿದ್ದುಪಡಿಗೆ ಬರುತ್ತಿದ್ದಾರೆ. ಊಟ ತಿಂಡಿ ಬಿಟ್ಟು ಬೆಳಿಗ್ಗೆಯಿಂದಲೇ ಕೆಜಿಬಿ ಬ್ಯಾಂಕ್‌ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ರೈತರಂತೂ ಹೊಲದ ಕೆಲಸ ಬಿಟ್ಟು ಬ್ಯಾಂಕ್‌ ಮುಂದೆ ಜಮಾಯಿಸುತ್ತಿದ್ದಾರೆ.

ಎಚ್.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next